ಮುಹರಂ ಒಂದರಂದು ಕಾಬಾಕ್ಕೆ ಹೊಸ ಬಟ್ಟೆಯನ್ನು ಹೊದಿಸಲಾಗುವುದು ಎಂದು ತಿಳಿಸಲಾಗಿದೆ. ಈ ಹಿಂದೆ ದುಲ್ಹಜ್ 9ರಂದು ಹಾಜಿಗಳು ಅರಫಾದಲ್ಲಿ ಸೇರುವ ವೇಳೆ ಕಾಬಾಕ್ಕೆ ಹೊಸ ಬಟ್ಟೆಯನ್ನು ಹೊದಿಸಲಾಗುತ್ತಿತ್ತು. ಕಳೆದ ವರ್ಷದಿಂದ ಈ ಕ್ರಮವನ್ನು ಬದಲಾಯಿಸಲಾಗಿದ್ದು ಮುಹರಂ ಒಂದರಂದು ಹೊಸ ಬಟ್ಟೆಯನ್ನು ಹೊದಿಸುವ ಕ್ರಮ ಜಾರಿಗೆ ಬಂದಿದೆ.
ಈ ಬಟ್ಟೆಗೆ ಕಿಸ್ವ ಎಂದು ಹೆಸರು. ಮಕ್ಕಾದ ಕಿಂಗ್ ಅಬ್ದುಲ್ ಅಜೀಜ್ ಕಾಂಪ್ಲೆಕ್ಸ್ ನಲ್ಲಿ 200 ಕ್ಕಿಂತಲೂ ಅಧಿಕ ತಜ್ಞ ಕಾರ್ಮಿಕರು 10 ತಿಂಗಳ ಕಾಲ ಶ್ರಮವಹಿಸಿ ಈ ಕಿಸ್ವಾವನ್ನು ತಯಾರಿಸಿದ್ದಾರೆ. ಇದನ್ನು ರೇಷ್ಮೆ ಬಟ್ಟೆಯಿಂದ ತಯಾರಿಸಲಾಗಿದೆ. 670 ಕಿಲೋ ಶುದ್ಧ ರೇಷ್ಮೆ ಬಟ್ಟೆ, 120 ಕಿಲೋ ಬಂಗಾರ, 100 ಕಿಲೋ ಬೆಳ್ಳಿಯನ್ನು ಈ ಕಿಸ್ವ ತಯಾರಿಕೆಗೆ ಬಳಸಲಾಗಿದೆ.. ಬಂಗಾರ ಮತ್ತು ಬೆಳ್ಳಿಯ ನೂಲುಗಳನ್ನು ಬಳಸಿ ಕಿಸ್ವಾದ ಅಂಚಿನಲ್ಲಿ ಕುರಾನ್ ನ ಸೂಕ್ತಗಳನ್ನು ಬಿಡಿಸಲಾಗಿದೆ.
IslamKannada News Portal

