✍️ ರೈಹಾನ್.ವಿ.ಕೆ.
ಸಚೇರಿಪೇಟ
ಶಾಲೆ ಬಿಟ್ಟು ಬಂದ ಮಗಳು :- ಅಮ್ಮ ಇಂದು ಏನು ಮಾಡಿರುವೆ.
ಅಮ್ಮ ಏನು ಮಾಡಬೇಕು ಎಂದು ಕೇಳಿದಾಗ ತುಸು ಮುನಿಸು.
ನಾನು ಬಂದ ನಂತರ ಮಾಡಿಕೊಡುವುದು ಬೇಡ ಅಂದಳು.
ನಿಜವಾಗಿ ಅವಳಿಗೆ ತಿನ್ನುವುದರಲ್ಲಿ ಆಸಕ್ತಿ ಇಲ್ಲ. ಬದಲಾಗಿ ಅವಳನ್ನು ನಾನು ಪರಿಗಣಿಸುತ್ತೇನೋ ಇಲ್ಲವೋ ಎಂಬುದು ಅವಳಿಗೆ ಮುಖ್ಯ.
ನಾನು ಶಾಲೆಯಿಂದ ಬಂದ ನಂತರ ಮಾಡುವುದು ಬೇಡ .
ಪ್ರತಿ ದಿನ ಶಾಲೆಗೆ ಹೋಗುವಾಗ ಅಮ್ಮ ಸಂಜೆ ಏನಾದರು ತಯಾರಿ ಮಾಡಿ ಇಡು. ಇದು ಅವಳ ದಿನನಿತ್ಯದ ಮಾತು.
ಅಂದರೆ ಅವಳ ಅಭಾವದಲ್ಲಿ ನಾನು ಅವಳನ್ನು ಪರಿಗಣಿಸಬೇಕು ಎಂಬುದು ಅವಳ ಬಯಕೆ. ಅವಳು ಶಾಲೆಗೆ ಹೋಗಿರುವಾಗ, ಅವಳು ಮನೆಯಲ್ಲಿ ಇಲ್ಲದಿರುವಾಗ ನಾನು ಅವಳನ್ನು ನೆನಪಿಸುತ್ತೇನೋ ಇಲ್ಲವೋ ಎಂಬುದು ಅವಳಿಗೆ ಬೇಕಾಗಿರುವುದು.
ನಿಜವಾಗಿ ಇಂತಹ ಪರಿಗಣನೆ ಬೇಕೆಂಬುದನ್ನು ಪ್ರಾಯ ಭೇದಮನ್ಯೆ ಎಲ್ಲರೂ ಆಶಿಸುವ ಒಂದು ಆಗ್ರಹ.
ಚಿಕ್ಕ ಮಕ್ಕಳನ್ನು ಗಮನಿಸಿರಬಹುದು. ನಮ್ಮ ಗಮನವನ್ನು ಸೆಳೆಯಲು ಮಕ್ಕಳು ಏನೆಲ್ಲಾ ಮಾಡುತ್ತವೆ .
ಮಕ್ಕಳನ್ನು ಸೂಕ್ಷ್ಮವಾಗಿ ನಾವು ಗಮನಿಸಿದ ಕಾರಣ ಅವು ನಮಗೆ ಅರ್ಥವಾಗುತ್ತದೆ.
ಆದರೆ ಮಕ್ಕಳು ಬೆಳೆದಂತೆ ಮಕ್ಕಳ ಬಗ್ಗೆ ನಮ್ಮ ಗಮನ ಕಡಿಮೆಯಾಗುತ್ತಾ ಹೋಗುತ್ತದೆ.
ಆದರೆ ಇದು ಸರಿಯಲ್ಲ. ಎಲ್ಲಾ ಪ್ರಾಯದ ಮಕ್ಕಳೂ ಈ ಪರಿಗಣನೆಯನ್ನು ಬಯಸುತ್ತಾರೆ.
ಕೆಲವೊಮ್ಮೆ ನಾವು ಅವರನ್ನು ಪರಿಗಣಿಸುವುದು ಅವರಿಗೆ ಅರ್ಥವಾಗದೆ ಇರಬಹುದು.
ಅಂದರೆ ಹೆಚ್ಚಿನ ವೇಳೆ ತಾಯಿಯು ಮಕ್ಕಳನ್ನು ಪರೋಕ್ಷವಾಗಿ ಒಂದಲ್ಲ ಒಂದು ರೀತಿಯಲ್ಲಿ ಪರಿಗಣಿಸಿರುತ್ತಾಳೆ.
ಹೆಚ್ಚಿನ ವೇಳೆ ಆಹಾರವನ್ನು ತಯಾರಿಸುವಲ್ಲೂ ಮಕ್ಕಳನ್ನು ಪರಿಗಣಿಸುತ್ತಾಳೆ. ಆದರೆ ಅದನ್ನು ಮಕ್ಕಳ ಜೊತೆ ಹಂಚುವುದು, ಅಂದರೆ ಇವತ್ತು ನಾನು ನಿನ್ನ ಇಷ್ಟದ ತಿಂಡಿ ಮಾಡಿರುತ್ತೇನೆ ಅಥವಾ ಅಪ್ಪಂದಿರು ಕೂಡಾ ಮಕ್ಕಳ ಇಷ್ಟದ ವಸ್ತುವನ್ನು ತಂದಿರುತ್ತಾರೆ ಆದರೆ ಅದನ್ನು ಮಕ್ಕಳ ಜೊತೆ ಹೇಳುವುದು ತುಂಬಾ ವಿರಳ. ಅಂತಹ ಸಂದರ್ಭದಲ್ಲಿ ಅವರಿಗೆ ಅದು ಅನುಭವ ಆಗುವ ರೀತಿಯಲ್ಲಿ ನಾವು ಅವರ ಜೊತೆ ಜಾಣ್ಮೆಯಿಂದ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿಯಾದರೂ ಹೇಳಬೇಕು.
ಈ ಪರಿಗಣನೆ ಎಂಬುದು ಎಲ್ಲಾ ಸಂಬಂಧಗಳಲ್ಲೂ ಕಾಣಬಹುದು.
ಮಕ್ಕಳು ಬೆಳೆದಂತೆ ಪತಿಗೆ, ಪತ್ನಿಯ ಬಗ್ಗೆ ಅನುಮಾನ ಪತ್ನಿ ನನಗಿಂತ ಹೆಚ್ಚಾಗಿ ಮಕ್ಕಳನ್ನು ಪರಿಗಣಿಸುತ್ತಾಳೆ.
ಇತ್ತ ಪತ್ನಿಗೆ ದೂರು… ಇತ್ತೀಚೆಗೆ ಯಾಕೋ ಪತಿ ನನ್ನನು ಪರಿಗಣಿಸುವುದೇ ಇಲ್ಲ. ಅವರಿಗೀಗ ಮೊಬೈಲೇ ಸರ್ವಸ್ವ ವಾಗಿದೆ.
ಯೌವ್ವನ ಪ್ರಾಯಕ್ಕೆ ಬೆಳೆದು ನಿಂತ ಮಕ್ಕಳ ಬಗ್ಗೆ ತಂದೆ ತಾಯಿಗಳಿಗೆ ದೂರು ನನ್ನ ಬಗ್ಗೆ ಅವನಿಗೆ ಗಮನವೇ ಇಲ್ಲ.
ಅತ್ತೆ ಸೊಸೆಗಳ ಮಧ್ಯೆ ಈ ದೂರು…
ನಿಜವಾಗಿ ಇದು ಮನುಷ್ಯ ಸಹಜ ಬೇಡಿಕೆ. ಇದು ಮನುಷ್ಯ ಪ್ರಕೃತಿಯ ಬೇಡಿಕೆ.
ಆದ್ದರಿಂದ ನಾವು ಪರಸ್ಪರರನ್ನು ಅರಿತು ಪ್ರಜ್ಞಾವಂತರಾಗಿ ಬದುಕಲು ಕಲಿಯಬೇಕು. ಮಕ್ಕಳ ಜೊತೆ ಮಾತುಕತೆಯಲ್ಲಿ ತೊಡಗಬೇಕು.
ಹೆಚ್ಚಿನ ವೇಳೆ ನಮ್ಮ ಡೈನಿಂಗ್ ಟೇಬಲ್ ಅದಕ್ಕೆ ಉತ್ತಮ ವೇದಿಕೆಯಾಗಿ ಬಳಸಬಹುದು. ಹಾಗೆ ಒಂದು ಅರ್ಥಪೂರ್ಣ ಕುಟುಂಬ ಜೀವನ ನಮ್ಮದಾಗಿಸಬಹುದು.
ಒಂದು ಉತ್ತಮ ಕುಟುಂಬ, ಒಂದು ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯ.
ಆದ್ದರಿಂದಲೇ ಪ್ರವಾದಿ (ಸ) ಹೀಗೆಂದರು ನಿಮ್ಮ ಬಳಿಯಿಂದ ಯಾರಾದರೂ ಹಾದು ಹೋದರೆ ಅವರನ್ನು ಪರಿಗಣಿಸುವುದಾಗಿ ಅವರಿಗೆ ಮನವರಿಕೆ ಮಾಡಲು ನಿಮ್ಮ ದೇಹವನ್ನು ಹರ್ಕತ್ (ಚಲನೆ)ಮಾಡಿ.
ಸೋಷ್ಯಲ್ ಮೀಡಿಯಾದಲ್ಲಿ ಬಿಝಿ ಆಗಿರುವ ಈಗಿನ ಸಮಾಜ ಇದನ್ನು ಅರಿತಿರಲಿ.
IslamKannada News Portal
