Home / ಲೇಖನಗಳು / ಸ್ತ್ರೀ-ಪುರುಷ ಸಮಾನತೆ ಮತ್ತು ನ್ಯಾಯ; ಇಸ್ಲಾಮೀ ಶಿಕ್ಷಣದ ಬೆಳಕಿನಲ್ಲಿ

ಸ್ತ್ರೀ-ಪುರುಷ ಸಮಾನತೆ ಮತ್ತು ನ್ಯಾಯ; ಇಸ್ಲಾಮೀ ಶಿಕ್ಷಣದ ಬೆಳಕಿನಲ್ಲಿ

ಲೇಖಕರು : ಅಬ್ದುಲ್ ಹಫೀದ್ ನದ್ವಿ
ಮೂಲ: ಇಸ್ಲಾಂ ಆನ್ಲೈವ್
ಅನುವಾದ: ಮರ್ಯಮ್ ಶಹೀರ

ಇಸ್ಲಾಂ ಪುರುಷರು ಮತ್ತು ಮಹಿಳೆಯರಿಗೆ ಸಮಾನ ನ್ಯಾಯವನ್ನು ಖಾತ್ರಿಪಡಿಸುತ್ತದೆ. ನ್ಯಾಯ ಎಂದರೆ ಪ್ರತಿಯೊಬ್ಬರಿಗೂ ಅವರಿಗೆ ಅರ್ಹವಾದದ್ದನ್ನು ನೀಡುವುದು. ಸಮಾನತೆ ಎಂಬ ಅರ್ಥದಲ್ಲಿ ಎಲ್ಲರಿಗೂ ಒಂದೇ ರೀತಿಯಲ್ಲಿ ಪ್ರದಾನ ಮಾಡಲು ಸಾಧ್ಯವಿಲ್ಲ. ಉದಾಹರಣೆಗೆ, ಕೇವಲ ಗಂಜಿಯ ಮೇಲೆ ಬದುಕುತ್ತಿರುವ ವ್ಯಕ್ತಿಗೆ ಬಿರಿಯಾನಿ ತಿನ್ನಿಸುವುದು ಅಥವಾ ಹೊಟ್ಟೆ ತುಂಬಿದವನಿಗೆ ಬಲವಂತವಾಗಿ ತಿನ್ನಿಸುವುದು ಸಮಾನತೆ ಎನ್ನಬಹುದಾದರೂ, ಅದು ನ್ಯಾಯವಾಗುವುದಿಲ್ಲ.

ಇಸ್ಲಾಂ ಬಹಳಷ್ಟು ವಿಷಯಗಳಲ್ಲಿ ಸಮಾನತೆಯನ್ನು ಖಾತ್ರಿಪಡಿಸುವ ವೈಜ್ಞಾನಿಕ ಹಾಗೂ ನ್ಯಾಯಯುತ ಅಡಿಪಾಯಗಳನ್ನು ಕಲಿಸುತ್ತದೆ. ಇಸ್ಲಾಂ ವ್ಯಕ್ತಿಗಳ ಸಮಾನ ನ್ಯಾಯ ಮತ್ತು ಘನತೆಯನ್ನು ಗುರುತಿಸುತ್ತದೆ, ಆದರೆ ಪ್ರತಿಯೊಬ್ಬರ ಸ್ವಭಾವ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಕೆಲವೊಂದು ನಿಯಮಗಳಲ್ಲಿ ಭಿನ್ನತೆಯನ್ನು ಹೊಂದಿದೆ.

ಪುರುಷರು ಮತ್ತು ಮಹಿಳೆಯರ ನಡುವಿನ ಸಮಾನತೆಯನ್ನು ಖಾತ್ರಿಪಡಿಸುವ ಕೆಲವು ಕುರ್ ಆನ್ ಮತ್ತು ಹದೀಸ್ ಉಲ್ಲೇಖಗಳನ್ನು ಇಲ್ಲಿ ನೀಡಲಾಗಿದೆ:

1. ಮಾನವ ಅಸ್ತಿತ್ವದಲ್ಲಿ ಸಮಾನತೆ:

ಅಲ್ಲಾಹನು ಹೇಳುತ್ತಾನೆ:
ಜನರೇ, ನೀವು ನಿಮ್ಮ ಪಾಲಕ ಪ್ರಭುವನ್ನು ಭಯಪಡಿರಿ. ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು. ಅದೇ ಜೀವದಿಂದ ಅದರ ಜೋಡಿಯನ್ನು ಉಂಟು ಮಾಡಿದನು.
(ಕುರ್ ಆನ್ 4:1)

ಈ ಸೂಕ್ತವು ಅಲ್ಲಾಹನು ಪುರುಷ ಮತ್ತು ಮಹಿಳೆಯನ್ನು ಒಂದೇ ಆತ್ಮದಿಂದ ಸೃಷ್ಟಿಸಿದ್ದಾನೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇದು ಪುರುಷರು ಮತ್ತು ಮಹಿಳೆಯರು ಸಮಾನ ದೈವಿಕ ಘನತೆ ಮತ್ತು ಸ್ಥಾನಮಾನ ಹೊಂದಿದ್ದಾರೆ ಎಂಬುದನ್ನು ಬೋಧಿಸುತ್ತದೆ.

2.ಪ್ರತಿಫಲ ಮತ್ತು ವೇತನದಲ್ಲಿ ಸಮಾನತೆ:

ಅಲ್ಲಾಹನು ಹೇಳುತ್ತಾನೆ:
“ಯಾರೇ ಆಗಲಿ, ಪುರುಷನಾಗಲಿ ಅಥವಾ ಹೆಣ್ಣಾಗಲಿ, ತಾನು ವಿಶ್ವಾಸಿ ಎಂದು ನಂಬಿ ಸತ್ಕರ್ಮಗಳನ್ನು ಮಾಡಿದರೆ, ನಾವು ಖಂಡಿತವಾಗಿಯೂ ಅವರಿಗೆ ಉತ್ತಮ ಜೀವನವನ್ನು ನೀಡುತ್ತೇವೆ. ಅವರ ಮಾಡಿದ ಒಳ್ಳೆಯ ಕಾರ್ಯಗಳಿಗೆ ಅನುಗುಣವಾಗಿ, ನಾವು ಖಂಡಿತವಾಗಿಯೂ ಅವರಿಗೆ ಪ್ರತಿಫಲವನ್ನು ನೀಡುತ್ತೇವೆ.” (ಕುರ್ ಆನ್ 16:97)

ಈ ಸೂಕ್ತದಲ್ಲಿ, ಅಲ್ಲಾಹನನ್ನು ನಂಬಿ ಒಳ್ಳೆಯ ಕಾರ್ಯಗಳನ್ನು ಮಾಡುವ ಪುರುಷ ಮತ್ತು ಮಹಿಳೆಯರಿಗೆ ಸಮಾನ ಪ್ರತಿಫಲ ಮತ್ತು ಪ್ರಯೋಜನಗಳನ್ನು ಖಚಿತವಾಗಿ ನೀಡಲಾಗುತ್ತದೆ ಎಂದು ತೋರಿಸಲಾಗಿದೆ.

3. ಧಾರ್ಮಿಕ ಮತ್ತು ನೈತಿಕ ಹೊಣೆಗಾರಿಕೆಯಲ್ಲಿ ಸಮಾನತೆ:

ಅಲ್ಲಾಹನು ಹೇಳುತ್ತಾನೆ:
ನಿಶ್ಚಯವಾಗಿಯೂ ಮುಸ್ಲಿಮರೂ ಸತ್ಯವಿಶ್ವಾಸಿಗಳೂ ಆಜ್ಞಾಪಾಲಕರೂ ಸತ್ಯಸಂಧರೂ ಸಹನಶೀಲರೂ ವಿನಮ್ರರೂ ದಾನಶೀಲರೂ ಉಪವಾಸ ವ್ರತವನ್ನಾಚರಿಸುವವರೂ ತಮ್ಮ ಗುಪ್ತಾಂಗಗಳ ರಕ್ಷಣೆ ಮಾಡಿಕೊಳ್ಳುವವರೂ ಅಲ್ಲಾಹನನ್ನು ಅತ್ಯಧಿಕವಾಗಿ ಸ್ಮರಿಸುವವರೂ ಆದ ಎಲ್ಲಾ ಪುರುಷರು ಮತ್ತು ಸ್ತ್ರೀಯರಿಗೆ ಅಲ್ಲಾಹನು ಕ್ಷಮೆ ಮತ್ತು ಅತಿ ದೊಡ್ಡ ಸತ್ಫಲವನ್ನು ಸಿದ್ಧಗೊಳಿಸಿಟ್ಟಿದ್ದಾನೆ. (ಕುರ್ ಆನ್ 33:35)

ಈ ಸೂಕ್ತವು ಪುರುಷರು ಮತ್ತು ಮಹಿಳೆಯರು ದೇವನ ಮುಂದೆ ಸಮಾನ ಧಾರ್ಮಿಕ ಮತ್ತು ನೈತಿಕ ಜವಾಬ್ದಾರಿಗಳನ್ನು ಹೊಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

4. ಹಕ್ಕುಗಳು ಮತ್ತು ಕರ್ತವ್ಯಗಳ ಸಮಾನತೆ:

ಅಲ್ಲಾಹನು ಹೇಳುತ್ತಾನೆ: “ಅವರಿಗೆ (ಮಹಿಳೆಯರಿಗೆ) ಪುರುಷರ ಕರ್ತವ್ಯಗಳಂತೆ ಹಕ್ಕುಗಳಿವೆ.” (2:228)
ಇದು ಪುರುಷರು ಮತ್ತು ಮಹಿಳೆಯರ ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ಎಂದು ತೋರಿಸುತ್ತದೆ. ಪರಸ್ಪರ ಗೌರವದಿಂದ ಈ ಸಂವಾದವನ್ನು ಒಪ್ಪಿಗೆಯಿಂದ ಮಾತ್ರ ಪೂರ್ಣಗೊಳಿಸಬಹುದು.

5.ಆರಾಧನೆಯಲ್ಲಿ ಸಮಾನತೆ:

ಪ್ರವಾದಿ (ಸ) ಹೇಳಿದರು:
“ನಿಜವಾಗಿಯೂ, ಮಹಿಳೆಯರು ಪುರುಷರ ಸಹೋದರಿಯರು.” (ತಿರ್ಮಿದಿ)

ಈ ಹದೀಸ್, ಆರಾಧನೆ ಮತ್ತು ಸಮಾಜದಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನ ಸ್ಥಾನಮಾನ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ.

ಮೇಲಿನ ಎಲ್ಲಾ ವಿಚಾರಗಳನ್ನು ಆಧರಿಸಿ, ಇಸ್ಲಾಂ ಮಹಿಳೆಯರನ್ನು ಸಮಾನವಾಗಿ ಪರಿಗಣಿಸುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಪುರುಷರಂತೆ ಮಹಿಳೆಯರಿಗೂ ಪ್ರಮುಖ ಸ್ಥಾನಮಾನ ನೀಡಲಾಗುತ್ತದೆ. ಮಾನವ ಶರೀರದ ಸ್ವಭಾವತ: ಶಾರೀರಿಕ ವ್ಯತ್ಯಾಸಗಳ ಆಧಾರದ ಮೇಲೆ ಮಾತ್ರ ಕೆಲವೊಂದು ಕಾನೂನು ವ್ಯತ್ಯಾಸಗಳನ್ನು ನಿರ್ಧರಿಸಲಾಗಿದೆ.

ಮಹಿಳಾ ಹಕ್ಕುಗಳು:

ಇಸ್ಲಾಂ, ಇತರ ಧರ್ಮಗಳು ಅಥವಾ ತತ್ವಶಾಸ್ತ್ರಗಳು ನೀಡದ ಅನೇಕ ಹಕ್ಕುಗಳನ್ನು ಮಹಿಳೆಯರಿಗೆ ನೀಡಿದೆ. ಇವುಗಳಲ್ಲಿ ಶಿಕ್ಷಣ, ಉದ್ಯೋಗ, ಆಸ್ತಿ ಹಕ್ಕು ಮತ್ತು ಮದುವೆಯೂ ಸೇರಿವೆ. ಹೆಣ್ಣು ಮಕ್ಕಳನ್ನು ಆನುವಂಶಿಕವಾಗಿ ಪರಿಗಣಿಸದ ಧರ್ಮಗಳು ಮತ್ತು ಸಂಸ್ಕೃತಿಗಳು ಇಂದಿಗೂ ಅಸ್ತಿತ್ವದಲ್ಲಿವೆ.

ಮಹಿಳೆಯರ ಜವಾಬ್ದಾರಿಗಳು:

ಕುಟುಂಬದಲ್ಲಿ ಪುರುಷರಷ್ಟೇ ಜವಾಬ್ದಾರಿಗಳನ್ನು ಹೆಣ್ಣಿಗೂ ಇದೆ. ಆದಾಗ್ಯೂ, ಅವರ ಜವಾಬ್ದಾರಿಗಳು ಅವರ ನೈಸರ್ಗಿಕ ಮತ್ತು ಶಾರೀರಿಕ ಸಾಮರ್ಥ್ಯಗಳಿಗೆ ಸಂಬಂಧಿಸಿದಂತೆ ವ್ಯತ್ಯಾಸವಾಗಿವೆ. ಪುರುಷನು ದುಡಿದು ಕುಟುಂಬವನ್ನು ಪೂರೈಸುವಂತೆ ದೈಹಿಕ ಶ್ರಮವನ್ನು ವ್ಯಯಿಸಿ ಕುಟುಂಬವನ್ನು ಪೂರೈಸಲು ಮಹಿಳೆಗೆ ಆಜ್ಞಾಪಿಸಲಾಗುವುದಿಲ್ಲ.

ಸಾಮಾನ್ಯ ತಪ್ಪು ಕಲ್ಪನೆಗಳು:

1. ಇಸ್ಲಾಂನಲ್ಲಿ ಮಹಿಳೆಯರು ಪುರುಷರಿಗಿಂತ ಕೀಳು?

ಇದು ದೊಡ್ಡ ತಪ್ಪು ಕಲ್ಪನೆ. ಇಸ್ಲಾಂ ಮಹಿಳೆಯರನ್ನು ಕೀಳಾಗಿ ಪರಿಗಣಿಸುವುದಿಲ್ಲ. ಪುರುಷ ಮತ್ತು ಮಹಿಳೆಯರ ನಡುವಿನ ವ್ಯತ್ಯಾಸವು ಧರ್ಮಶಾಸ್ತ್ರವಲ್ಲ, ಅದು ಶಾರೀರಿಕ ಮತ್ತು ಭಾವೈಕ್ಯತೆಯ ವ್ಯಾಪ್ತಿಯಲ್ಲಿ ಮಾತ್ರನಿರ್ದಿಷ್ಟವಾಗಿದೆ.

2. ಮಹಿಳೆಯರು ಮನೆಯಲ್ಲಿ ಮಾತ್ರ ಇರಬೇಕು:

ಇದು ಕೂಡ ತಪ್ಪು ಕಲ್ಪನೆ. ಪ್ರವಾದಿ (ಸ) ಅವರ ಕಾಲದಲ್ಲೂ ಮಹಿಳೆಯರಿಗೆ ಶಿಕ್ಷಣ ಪಡೆಯುವ ಹಕ್ಕು, ಉದ್ಯೋಗ ಮಾಡುವ ಹಕ್ಕು ಇತ್ತು. ಯುದ್ಧದ ಸಮಯದಲ್ಲೂ ಮಹಿಳೆಯರು ತಮ್ಮ ಸೇವೆಗಳನ್ನು ನೀಡಿದ ಉದಾಹರಣೆಗಳು ಸಿಗುತ್ತವೆ ಅವರು ಮಸೀದಿಗಳಿಗೆ ಹೋಗುವುದಕ್ಕೂ ಅವಕಾಶ ಇತ್ತು.

3. ಮಹಿಳೆಯರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು:

ಇದು ಇಸ್ಲಾಂನ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ. ಮಹಿಳೆಯರಿಗೆ ತಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವಿದೆ. ಇಸ್ಲಾಮೀ ಇತಿಹಾಸವು ಮಹಿಳೆಯರಿಗೆ ನಿಶ್ಚಯಿತ ಮದುವೆಗಳನ್ನು ನಿಷೇಧಿಸಲು ಅಥವಾ ಸ್ವೀಕರಿಸಲು ಅವಕಾಶವನ್ನು ನೀಡುತ್ತದೆ. ಉದಾಹರಣೆಗೆ, ಖನ್ಝಾ ಬಿಂತ್ ಖಿದಾಂ ಅಲ್-ಅನ್ಸಾರಿಯಾಳ ತಂದೆ ಅವಳ ಮದುವೆಯನ್ನು ನಿಶ್ಚಯಿಸಿದಾಗ, ಅವಳ ಒತ್ತಾಯದ ಮೇರೆಗೆ ಆ ನಿರ್ಧಾರವನ್ನು ರದ್ದುಗೊಳಿಸಲಾಯಿತು (ಉದಾಹರಣೆ: ಬುಖಾರಿ 5138).

ಉಪಸಂಹಾರ:

ಇಸ್ಲಾಂ ಮಹಿಳೆಯರನ್ನು ಪುರುಷರಿಗೆ ಸಮಾನವಾಗಿ ಪರಿಗಣಿಸುತ್ತದೆ. ಆದಾಗ್ಯೂ, ಅವರ ಜೀವನಶೈಲಿ ಮತ್ತು ಜವಾಬ್ದಾರಿಗಳು ವಿಭಿನ್ನವಾಗಿರುವುದರಿಂದ, ಉತ್ತರಾಧಿಕಾರ ಮತ್ತು ವಿಚ್ಛೇದನದಂತಹ ವಿಷಯಗಳಲ್ಲಿ, ದೈಹಿಕ ಮತ್ತು ಮಾನಸಿಕ ವ್ಯತ್ಯಾಸಗಳನ್ನು ಆಧರಿಸಿ ಕೆಲವು ವಿಶೇಷ ರಿಯಾಯಿತಿಗಳನ್ನು ನೀಡಲಾಗಿದೆ. ಪುರುಷರು ಮತ್ತು ಮಹಿಳೆಯರ ಸಮಾನತೆ ಬಗ್ಗೆ ವ್ಯಾಖ್ಯಾನಗಳು ವಿವಾದಾತ್ಮಕ ವಿಷಯವಾಗಿದೆಯಾದರೂ, ಇದನ್ನು ಕುರ್ ಆನ್ ಸ್ಪಷ್ಟವಾಗಿ ಸೂಚಿಸುತ್ತದೆ, ಇದು ಭೌತಿಕ ಅಥವಾ ಬೌದ್ಧಿಕ ದೃಷ್ಟಿಕೋನದಲ್ಲಿ ಸ್ವೀಕರಿಸಲು ಸಾಧ್ಯವಿದೆ.

ಮಹಿಳೆಯರ ಹಕ್ಕುಗಳು ಮತ್ತು ಸಮಾನತೆ ಕುರಿತು ಚರ್ಚೆ ನಡೆಸುವಾಗ, ಉದಾರವಾದಿ ಅಥವಾ ಸ್ತ್ರೀವಾದಿ ದೃಷ್ಟಿಕೋನಗಳನ್ನು ಹೊಂದಿರುವವರಿಗೆ ಸ್ಪಷ್ಟವಾದ ವಾದಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಬೇಕು. ಇದಕ್ಕಾಗಿ, ಸಮಗ್ರ ತಿಳಿವಳಿಕೆ ಮತ್ತು ಶಕ್ತಿಶಾಲಿ ಮಾತುಗಾರಿಕೆಯ ಅಗತ್ಯವಿದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …