ಹಜ್ ಗಾಗಿ ಸೌದಿ ಅರೇಬಿಯಾ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿದೆ. ದುಲ್ ಕಅದ್ ಅಥವಾ ಏಪ್ರಿಲ್ 29 ರಿಂದ ಈ ವರ್ಷದ ಹಜ್ ಗಾಗಿ ಯಾತ್ರಿಕರು ಸೌದಿಗೆ ಆಗಮಿಸಲಿದ್ದಾರೆ. ಮದೀನಾದ ಮೂಲಕ ಈ ಬಾರಿ ಭಾರತೀಯ ಹಜ್ ಯಾತ್ರಿಕರ ಮೊದಲ ತಂಡ ಆಗಮಿಸಲಿದೆ
ಇವರು ಎಂಟು ದಿನಗಳ ಕಾಲ ಮಸ್ಜಿದುನ್ನಬವಿಯಲ್ಲಿ ಇದ್ದು ಆ ಬಳಿಕ ಮಕ್ಕಕ್ಕೆ ಬರುತ್ತಾರೆ. ಜೂನ್ ನಾಲ್ಕರಿಂದ ಜೂನ್ 9ರವರೆಗೆ ಈ ಬಾರಿಯ ಹಜ್ ಕರ್ಮ ನೆರವೇರಲಿದೆ. 1,75,000 ಕ್ಕಿಂತ ಅಧಿಕ ಮಂದಿ ಈ ಬಾರಿ ಹಜ್ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇವರಲ್ಲಿ 30 ಶೇಕಡ ಮಂದಿ ವಿವಿಧ ಖಾಸಗಿ ಗ್ರೂಪ್ ಗಳ ಮೂಲಕ ಹಜ್ ನಿರ್ವಹಿಸಲಿದ್ದಾರೆ. ಹಜ್ ಕಮಿಟಿ ಮೂಲಕ ಹಜ್ ನಿರ್ವಹಣೆಗೆ ಬರುವವರಿಗೆ ಮಕ್ಕ ಮತ್ತು ಮದೀನದಲ್ಲಿ ಬೇಕಾದ ಸೌಲಭ್ಯಗಳನ್ನು ಈಗಾಗಲೇ ಸಿದ್ಧಗೊಳಿಸಲಾಗಿದೆ
IslamKannada News Portal
