– ಸಯ್ಯದ್ ಸಆದತುಲ್ಲಾ ಹುಸೈನಿ
ಜ.ಇ. ಹಿಂದ್ ರಾಷ್ಟ್ರೀಯ ಅಧ್ಯಕ್ಷರು
ಭಾಗ-2
ಸಮಾಜ ಕಲ್ಯಾಣ ಸಂಸ್ಥೆಗಳು ತಮ್ಮ ವಿಚಾರ, ಸಿದ್ಧಾಂತಗಳಿಗೆ ಅನುಗುಣವಾಗಿ ಸಮಾಜದಲ್ಲಿ ಹೊಸ ವಿಧಾನಗಳನ್ನು ಪರಿಚಯಿಸುವ ಮೂಲಕ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುವುದನ್ನು ಕಾಣಬಹುದು. ಇಸ್ಲಾಮೀ ಇತಿಹಾಸದಲ್ಲಿ ವಕ್ಫ್ ಗಳು ಈ ಪಾತ್ರವನ್ನು ಹೆಚ್ಚಿನ ಪ್ರಾಮುಖ್ಯತೆಯೊಂದಿಗೆ ನಿರ್ವಹಿಸಿವೆ ಎಂದು ಸ್ಪಷ್ಟಪಡಿಸಲು ಈ ಲೇಖನವು ಉದ್ದೇಶಿಸಿದೆ. ಸುಸ್ಥಿರ ಮತ್ತು ಪರಿಣಾಮಕಾರಿ ಲೋಕೋಪಕಾರದ ಪರಿಕಲ್ಪನೆಯನ್ನು ಜನಪ್ರಿಯಗೊಳಿಸುವ ಮೂಲಕ ಇಸ್ಲಾಮಿಕ್ ದತ್ತಿಗಳು ಜಾಗತಿಕ ನಾಗರಿಕತೆಗೆ ಉತ್ತಮ ಸೇವೆಯನ್ನು ಮಾಡಿವೆ. ಇಸ್ಲಾಮಿಕ್ ವಕ್ಫ್ ಗಳ ಮುಂಚೆಯೇ, ಬಡವರಿಗೆ ದಾನ ಮತ್ತು ವೈಯಕ್ತಿಕ ನೆರವು ನೀಡುವ ಪರಿಕಲ್ಪನೆಯು ಪ್ರಪಂಚದ ವಿವಿಧ ಧರ್ಮಗಳಲ್ಲಿ ಪ್ರಚಲಿತವಾಗಿತ್ತು. ಆದಾಗ್ಯೂ, ಸಂಘಟಿತ ಮತ್ತು ಸುಸ್ಥಿರ ಕಲ್ಯಾಣ ಚಟುವಟಿಕೆಗಳ ಪರಿಕಲ್ಪನೆಯು ವಿರಳವಾಗಿತ್ತು. ಪ್ರಪಂಚದ ಇತರ ನಾಗರಿಕತೆಗಳಲ್ಲಿ, ಆಡಳಿತಗಾರನು ದೇವ ಪ್ರತಿನಿಧಿ ಮತ್ತು ಜನರ ತಂದೆಯಾಗಿದ್ದರು. ಜನರ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿ ಆಡಳಿತಗಾರನ ಮೇಲಿತ್ತು. ಆಡಳಿತಗಾರನಿಗೆ ಸಹಾಯ ಮಾಡುವುದು ಮತ್ತು ಅವನ ಆದೇಶಗಳನ್ನು ಪಾಲಿಸುವುದು ಜನರ ಕೆಲಸ. ಎಲ್ಲಾ ಧರ್ಮಗಳಲ್ಲಿ ದಾನವನ್ನು ಪ್ರೋತ್ಸಾಹಿಸಲಾಯಿತು. ಆದರೆ ಜನರು ತಮ್ಮ ಭಿಕ್ಷೆಯನ್ನು ಬಡವರಿಗೆ ಮತ್ತು ನಿರ್ಗತಿಕರಿಗೆ ಪ್ರತ್ಯೇಕವಾಗಿ ಅಥವಾ ಧಾರ್ಮಿಕ ಮುಖಂಡರು ಮತ್ತು ಚರ್ಚ್ ಗಳಂತಹ ಧಾರ್ಮಿಕ ಸಂಸ್ಥೆಗಳಿಗೆ ನೀಡುತ್ತಿದ್ದರು. ಕೆಲವು ದೇಣಿಗೆಗಳು ಸಹಜವಾಗಿ ಧಾರ್ಮಿಕ ಸಂಸ್ಥೆಗಳ ಮೂಲಕವೆ ನಡೆಯುತ್ತಿತ್ತು ಆದರೆ ಅವು ಕೇವಲ ಸಾಂಕೇತಿಕವಾಗಿದ್ದವು. ಜನರ ಬಹುಮುಖಿ ಅಗತ್ಯಗಳನ್ನು ಪೂರೈಸುವಲ್ಲಿ ಅವರ ಪಾತ್ರ ಸಣ್ಣದಾಗಿತ್ತು.
ಇದಕ್ಕೆ ವ್ಯತಿರಿಕ್ತವಾಗಿ, ಮುಸ್ಲಿಂ ಸಮಾಜವೇ ಆದರ್ಶ ಸಮಾಜ ಎಂಬ ಕಲ್ಪನೆಯನ್ನು ಇಸ್ಲಾಂ ಪ್ರಚಾರ ಮಾಡಿತು. ಒಳ್ಳೆಯದನ್ನು ಪಾಲಿಸುವುದು, ಕೆಟ್ಟದ್ದನ್ನು ತಡೆಯುವುದು ಮತ್ತು ನ್ಯಾಯವನ್ನು ಸ್ಥಾಪಿಸುವುದು ಇಡೀ ಸಮಾಜದ ಜವಾಬ್ದಾರಿ ಎಂದು ಪ್ರಸ್ತುತಪಡಿಸಲಾಯಿತು. ಕಲ್ಯಾಣ ಕಾರ್ಯಗಳನ್ನು ಸರ್ಕಾರಗಳ ಪ್ರಮುಖ ಜವಾಬ್ದಾರಿಯನ್ನಾಗಿ ಮಾಡುವುದರೊಂದಿಗೆ ಸಾಮಾನ್ಯ ಮುಸ್ಲಿಮರೂ ಆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ನಿರ್ಧರಿಸಲಾಯಿತು. ಸಮಾಜದ ವಿವಿಧ ಅಗತ್ಯಗಳು ಮತ್ತು ನಾಗರಿಕ ಹಿತಾಸಕ್ತಿಗಳನ್ನು ಪೂರೈಸುವುದು `ಫರ್ದ್ ಕಿಫಾಯಾ’ (ಸಾಮಾಜಿಕ ಬಾಧ್ಯತೆ) ಆಗಿ ಬಿಟ್ಟಿತು ಮತ್ತು ಆದ್ದರಿಂದ ಸಾಮಾನ್ಯ ಮುಸ್ಲಿಮರು ಪ್ರಪಂಚದ ಅಭಿವೃದ್ಧಿ ಮತ್ತು ಪ್ರಗತಿ ಮತ್ತು ಮಾನವ ಸಮಸ್ಯೆಗಳ ಪರಿಹಾರವನ್ನು ತಮ್ಮ ಸ್ವಂತ ಕೆಲಸ ಮತ್ತು ಜವಾಬ್ದಾರಿ ಎಂದು ಪರಿಗಣಿಸಿದರು. ವಕ್ಹ್ ಬಗ್ಗೆ ಪ್ರವಾದಿ(ಸ) ಉದಾಹರಣೆಗಳು ಮತ್ತು ಅದು `ಸ್ವದಕ ಜಾರಿಯಾ’ (ನಿರಂತರ ದಾನ) ಎಂಬ ಕಲ್ಪನೆಯು ಈ ಜವಾಬ್ದಾರಿಗಳನ್ನು ಉತ್ಸಾಹದಿಂದ ಪೂರೈಸಲು ಅವರನ್ನು ಪ್ರೇರೇಪಿಸಿತು.
ವಕ್ಫ್ ನ ಮೂಲ ತತ್ವವೆಂದರೆ ಅದನ್ನು ಕೊನೆಗೊಳಿಸಲು, ಹಿಂತೆಗೆದುಕೊಳ್ಳಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ. ಈ ತೀರ್ಪುಗಳು ಕಲ್ಯಾಣ ಚಟುವಟಿಕೆಗಳಿಗೆ ಶಾಶ್ವತತೆ ಮತ್ತು ಸ್ಥಿರತೆಯನ್ನು ನೀಡಿವೆ. ದತ್ತಿಯ ಉದ್ದೇಶ ಮತ್ತು ದತ್ತಿಗೆ ಸಂಬಂಧಿಸಿದ ಶರಿಯಾ ತೀರ್ಪುಗಳು ಒಟ್ಟಾಗಿ ಈ ಕಾಯಿದೆಗಳನ್ನು ಶಾಶ್ವತ ನಿಯಮಗಳು ಮತ್ತು ನಿಬಂಧನೆಗಳಿಗೆ ಒಳಪಡಿಸಿದೆ. ಸ್ಥಿರತೆ, ನಿರಂತರತೆ ಮತ್ತು ನಿಯಮಗಳು ಮತ್ತು ನಿಬಂಧನೆಗಳ ಬಲವಾದ ಅಡಿಪಾಯವನ್ನು ಆಧುನಿಕ ಸಾಂಸ್ಥಿಕ ವ್ಯವಸ್ಥೆಯ ವಿಶಿಷ್ಟ ಲಕ್ಷಣಗಳೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಸಮಕಾಲೀನ ಟ್ರಸ್ಟ್ ಗಳು ಮತ್ತು ಕಲ್ಯಾಣ ಸಂಸ್ಥೆಗಳ ಆಧುನಿಕ ವಿಧಾನಗಳನ್ನು ಇಸ್ಲಾಮಿಕ್ ದತ್ತಿಗಳಿಂದ ಎರವಲು ಪಡೆಯಲಾಗಿದೆ ಎಂಬುದು ಈಗ ಶೈಕ್ಷಣಿಕ ವಲಯಗಳಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿದೆ. ಪಾಶ್ಚಾತ್ಯ ವಿಶ್ಲೇಷಕರು ಸಹ ಬ್ರಿಟಿಷರು ಟೈಲ್ ಟ್ರಸ್ಟ್ ಕಾನೂನುಗಳನ್ನು ರೂಪಿಸಲು ಶಿಲುಬೆ ಯುದ್ಧದ ಸಮಯದಲ್ಲಿ ಟರ್ಕಿಯ ದತ್ತಿ ಮತ್ತು ಕಾನೂನುಗಳನ್ನು ನಿಕಟವಾಗಿ ಗಮನಿಸಿದರ ಪ್ರಭಾವ ಎಂದು ಒಪ್ಪಿಕೊಂಡಿದ್ದಾರೆ. ನೆಪೋಲಿಯನ್ ಉತ್ತರ ಆಫ್ರಿಕಾವನ್ನು ವಶಪಡಿಸಿಕೊಂಡಾಗ, ಯುರೋಪಿಯನ್ ದೇಶಗಳಿಗೆ ದತ್ತಿಗಳನ್ನು ಹತ್ತಿರದಿಂದ ತಿಳಿದುಕೊಳ್ಳುವ ಅವಕಾಶ ಲಭಿಸಿತು. ಇದು ಯುರೋಪಿಯನ್ ಚಾರಿಟೇಬಲ್ ಸಂಸ್ಥೆಗಳ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಮತ್ತು ಯುರೋಪಿಯನ್ ನಿಯಮಗಳಲ್ಲಿ ಚಾರಿಟೇಬಲ್ ಸಂಸ್ಥೆಗಳಿಗೆ ಸಂಬಂಧಿಸಿದಂತೆ ವಿವರವಾದ ಕಾನೂನುಗಳನ್ನು ತರಲು ಕಾರಣವಾಯಿತು.
ಆಧುನಿಕ ಯುಗದಲ್ಲಿ ದತ್ತಿಗಳಿಂದ ಸಮಾಜ ಕಲ್ಯಾಣ ಚಟುವಟಿಕೆಗಳ ಪ್ರಮುಖ ಉದಾಹರಣೆಗಳೆಂದರೆ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳು. ವಿಶ್ವಪ್ರಸಿದ್ಧ ವಿಶ್ವವಿದ್ಯಾ ನಿಲಯಗಳಾದ ಹಾರ್ವರ್ಡ್ (ಹಾರ್ವರ್ಡ್ ಮ್ಯಾನೇಜ್ ಮೆಂಟ್ ಕಂಪನಿ), ಆಕ್ಸ್ಫರ್ಡ್ ವಿಶ್ವವಿದ್ಯಾಲಯ (ಆಕ್ಸ್ಫರ್ಡ್ ಎಂಡೋಮೆಂಟ್ ಮ್ಯಾನೇಜ್ ಮೆಂಟ್), ಕೇಂಬ್ರಿಡ್ಜ್ ವಿಶ್ವವಿದ್ಯಾಲಯ (ಕೇಂಬ್ರಿಡ್ಜ್ ಎಂಡೋಮೆಂಟ್), ಸ್ಟಾನ್ಫೋರ್ಡ್ ವಿಶ್ವವಿದ್ಯಾ ಲಯ (ಸ್ಟಾ ನ್ಫೋರ್ಡ್ ಮ್ಯಾನೇಜ್ಮೆಂಟ್ ಕಂಪನಿ), ಪ್ರಿನ್ಸ್ಟನ್, ಎಂಐಟಿ ಇತ್ಯಾದಿ. ಇದು ದತ್ತಿ ಸಂಸ್ಥೆಗಳಿಂದ ನಡೆಸಲ್ಪಡುತ್ತದೆ. ಹಾರ್ವರ್ಡ್ ವಿಶ್ವದಲ್ಲೇ ಅತಿ ದೊಡ್ಡ ಶೈಕ್ಷಣಿಕ ದತ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ನಮ್ಮ ದೇಶದಲ್ಲಿ, ಟಾಟಾ ಟ್ರಸ್ಟ್ ಗಳು ದೇಶದಲ್ಲಿ ಅನೇಕ ಹೆಸರಾಂತ ಶಿಕ್ಷಣ ಸಂಸ್ಥೆಗಳನ್ನು ಹೊಂದಿವೆ ಮತ್ತು ನಿರ್ವಹಿಸುತ್ತಿವೆ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್, ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಇತ್ಯಾದಿ).
ಮುಸ್ಲಿಂ ದತ್ತಿಗಳು ಅಂತಹ ಟ್ರೆಂಡ್ ಅನ್ನು ಸೃಷ್ಟಿಸಿತು. ಕಳೆದ ಶತಮಾನದ ಆರಂಭದಲ್ಲಿ, ಸ್ಪ್ಯಾನಿಷ್ ಸಂಶೋಧಕ ಜೂಲಿಯನ್ ರಿಬೆರಾ (1858-1934) ಉಪಯುಕ್ತ ಸಂಶೋಧನಾ ಪ್ರಬಂಧವನ್ನು ಪ್ರಕಟಿಸುವ ಮೂಲಕ ಸಂಚಲನ ಮೂಡಿಸಿದರು. ಅದರಲ್ಲಿ ಅವರು ಪಾಶ್ಚಿಮಾತ್ಯ ಪ್ರಪಂಚದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಇಸ್ಲಾಮಿಕ್ ಪ್ರಪಂಚದಿಂದ ಎರವಲು ಪಡೆಯಲಾಗಿದೆ ಎಂದು ವಾದಿಸಿದರು. ಅವರ ಪ್ರಬಂಧದಲ್ಲಿ, ಈ ದತ್ತಿಗಳು ಸ್ಥಿರ ಆದಾಯ, ಸ್ವಾತಂತ್ರ್ಯ ಮತ್ತು ಸ್ಥಿರತೆಯನ್ನು ಆಧರಿಸಿದ, ಮುಸ್ಲಿಂ ಶೈಕ್ಷಣಿಕ ವ್ಯವಸ್ಥೆಯಿಂದ ಎರವಲು ಪಡೆಯಲಾಗಿದೆ ಎಂದು ಅವರು ವಾದಿಸಿದರು. ಈ ವಾದವನ್ನು ಈಗ ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗಿದೆ.
ಶಿಕ್ಷಣ ಸಂಸ್ಥೆಯ ಸ್ವಾತಂತ್ರ್ಯವನ್ನು ಬಲಪಡಿಸುವಲ್ಲಿ ಈ ದತ್ತಿ ಪ್ರಮುಖ ಪಾತ್ರ ವಹಿಸಿದೆ. ಸರಕಾರಗಳ ದಮನ ಮತ್ತು ಒತ್ತಡ ಇದ್ದಾಗ ಜ್ಞಾನದ ಮುಕ್ತ ಅಭಿವೃದ್ಧಿ ಸಾಧ್ಯವಿಲ್ಲ. ಈ ದತ್ತಿ ವ್ಯವಸ್ಥೆಯು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸಂಪೂರ್ಣ ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸಿತು ಮತ್ತು ಉನ್ನತ ಶಿಕ್ಷಣ ಪ್ರಕ್ರಿಯೆಯನ್ನು ಸೀಮಿತ ಸರ್ಕಾರದ ಮಧ್ಯಸ್ಥಿಕೆಯೊಂದಿಗೆ ಮುಂದುವರಿಸಲು ಅನುವು ಮಾಡಿಕೊಟ್ಟಿತು. ಪಾಶ್ಚಿಮಾತ್ಯ ವಿಶ್ವವಿದ್ಯಾಲಯಗಳು ಅದೇ ಮಾದರಿಯನ್ನು ಅಳವಡಿಸಿಕೊಂಡಿವೆ.
ಶಿಕ್ಷಣ ಸಂಸ್ಥೆಗಳೊಂದಿಗೆ, ವಕ್ಫ್ ಗಳು ಸ್ವತಂತ್ರ ಶೈಕ್ಷಣಿಕ ಸಂಶೋಧನೆಗಳನ್ನು ಪ್ರೋತ್ಸಾಹಿಸಿದವು. ಇಮಾಮ್ ಅಬೂ ಹನೀಫಾ ಅವರು `ಸ್ವತಂತ್ರ ಚಿಂತನೆಯ ಕೇಂದ್ರ’ವನ್ನು ಸ್ಥಾಪಿಸಿದರು, ಇದು ಇಸ್ಲಾಮಿಕ್ ಕಾನೂನನ್ನು ಕ್ರೋಡೀಕರಿಸುವ ಪ್ರಮುಖ ಕಾರ್ಯವನ್ನು ನಿರ್ವಹಿಸಿತು. ನಂತರ ಈ ಪ್ರವೃತ್ತಿ ಹೆಚ್ಚು ವ್ಯಾಪಕವಾಯಿತು. ನಾಲ್ಕು ಇಮಾಮ್ಗಳ ಹೊರತಾಗಿ, ಹದೀಸ್ ವಿದ್ವಾಂಸರು ಸಹ ಈ ಪ್ರವೃತ್ತಿಯನ್ನು ಮುಂದುವರೆಸಿದರು.
ಇಸ್ಲಾಮಿಕ್ ಇತಿಹಾಸದುದ್ದಕ್ಕೂ, ಸ್ಥಿರವಾಗಿ ವಿದ್ವಾಂಸರಿಗೆ ಘನತೆಯ ಜೀವನವನ್ನು ಖಾತರಿಪಡಿಸುವ ದತ್ತಿನಿಧಿಗಳು ಕಾರ್ಯನಿರ್ವಹಿಸಿದ್ದವು. ವಿದ್ವಾಂಸರು ತಮ್ಮ ಜೀವನ ನಿರ್ವಹಣೆಗಾಗಿ ದುಡಿಯಬೇಕಾಗಿರಲಿಲ್ಲ. ಇದು ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ಪೂರ್ಣ ಸಮಯವನ್ನು ತೊಡಗಿಸಿಕೊಳ್ಳಲು ಅವರಿಗೆ ಅನುವು ಮಾಡಿಕೊಡುತ್ತದೆ.
ಸಲ್ಜುಕ್ ಅವಧಿಯಲ್ಲಿ, ಬಾಗ್ದಾದ್ನಲ್ಲಿ ಸ್ಥಾಪಿಸಲಾದ ದತ್ತಿಗಳು ಜ್ಞಾನದ ವಿವಿಧ ಕ್ಷೇತ್ರಗಳಲ್ಲಿನ ವಿದ್ವಾಂಸರಿಗೆ ಗಣನೀಯ ವಿದ್ಯಾರ್ಥಿವೇತನವನ್ನು ಒದಗಿಸಿದವು ಮತ್ತು ಇಮಾಮ್ ಗಝ್ಝಾಲಿ ಮತ್ತು ಇಬ್ನ್ ರಶ್ದ್ನಂತಹ ವಿದ್ವಾಂಸರು ಈ ವ್ಯವಸ್ಥೆಯ ಮೂಲಕ ವಿದ್ಯಾರ್ಥಿ ವೇತನವನ್ನು ಪಡೆದರು. ಮರಗಾ ವೀಕ್ಷಣಾಲಯವು 13ನೇ ಶತಮಾನದಲ್ಲಿ ಪ್ರಮುಖ ವಿಜ್ಞಾನ ಯೋಜನೆಯಾಗಿದ್ದು, ಖಗೋಳಶಾಸ್ತ್ರದಲ್ಲಿ ಅಸಾಧಾರಣ ಪ್ರಾಮುಖ್ಯತೆಯ ಕೆಲವು ಆವಿಷ್ಕಾರಗಳನ್ನು ಮಾಡಲಾಯಿತು. ಈ ಎಲ್ಲಾ ಕೇಂದ್ರಗಳನ್ನು ದತ್ತಿಗಳ ಮೂಲಕ ಸ್ಥಾಪಿಸಲಾಗಿದೆ.
ಅಲ್-ರಾಝಿಯ ರಸಾಯನಶಾಸ್ತ್ರ, ಇಬ್ನ್ ಅಲ್-ಹೈಥಮ್ನ ದೃಗ್ವಿಜ್ಞಾನ, ಅಲ್-ಖವಾರಿಜ್ಮಿಯ ಬೀಜಗಣಿತ ಮತ್ತು ಅಬು ಅಲಿ ಸಿನಾ ಅವರ ಔಷಧಿಗಳೆಲ್ಲವೂ ಮಧ್ಯಯುಗದಲ್ಲಿ ತಮ್ಮ ಶ್ರೇಷ್ಠ ಶೈಕ್ಷಣಿಕ ಮತ್ತು ವೈಜ್ಞಾನಿಕ ಸಾಧನೆಗಳ ಹಿರಿಮೆಯನ್ನು ವಕ್ಫ್ ಗೆ ನೀಡಬೇಕಿದೆ. ವಿದ್ವಾಂಸರು ಗಣನೀಯವಾದ ಧನಸಹಾಯಗಳನ್ನು ಪಡೆದರು. ಇದರಿಂದ ಅವರು ತಮ್ಮ ಕೆಲಸವನ್ನು ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಮುಂದುವರಿಸಲು ಸಾಧ್ಯವಾಯಿತು. ವಿದ್ವಾಂಸರಿಗೆ ಹಾಗೂ ಅವರ ಸಹಾಯಕರಿಗೆ ಸಂಬಳದ ವ್ಯವಸ್ಥೆ ಮಾಡಲಾಗಿತ್ತು. ದತ್ತಿಗಳು ವೀಕ್ಷಣಾಲಯಗಳು ಮತ್ತು ವೈಜ್ಞಾನಿಕ ಪ್ರಯೋಗಗಳ ಚಾಲನೆಯ ವೆಚ್ಚವನ್ನು ಸಹ ಒಳಗೊಂಡಿವೆ. ವ್ಯಾಪಕವಾದ ಸಂಶೋಧನೆ- ಗ್ರಂಥಾಲಯಗಳ ನಿರ್ಮಾಣ ಮತ್ತು ನಿರ್ವಹಣೆಯನ್ನು ನಿಯಮಿತ ದತ್ತಿಗಳ ಮೂಲಕ ಮಾಡಲಾಯಿತು. ಮಧ್ಯ ಯುಗದ ಅತಿದೊಡ್ಡ ಗ್ರಂಥಾಲಯಗಳಲ್ಲಿ ಒಂದಾದ ಬಾಗ್ದಾದ್ನಲ್ಲಿರುವ ಮುಸ್ತಾನ್ಸ್ವಿರಿಯ ಗ್ರಂಥಾಲಯವು ಸಂಪೂರ್ಣವಾಗಿ ದತ್ತಿಯಾಗಿದೆ. ಹೈದರಾಬಾದ್ ಮತ್ತು ಭೋಪಾಲ್ನ ನಿಜಾಮರ ಪತ್ನಿಯರು ನಿಯಮಿತವಾಗಿ ಅನೇಕ ವಿದ್ವಾಂಸರು, ಬರಹಗಾರರು ಮತ್ತು ಸಾಹಿತ್ಯಾಸಕ್ತರಿಗೆ ಸ್ಟೈಫಂಡ್ಗಳನ್ನು ನೀಡುತ್ತಿದ್ದರು. ಇದು ಬರವಣಿಗೆ ಮತ್ತು ಸಂಶೋಧನೆಯ ಮೇಲೆ ಗಮನ ಕೇಂದ್ರೀಕರಿಸಲು ಅವರಿಗೆ ಅನುವು ಮಾಡಿಕೊಟ್ಟಿತು. ಈ ಸಂಪ್ರದಾಯ ಕಳೆದ ಶತಮಾನದವರೆಗೂ ಮುಂದುವರಿಯಿತು.
(ಮುಂದುವರಿಯುವುದು)
IslamKannada News Portal
