Home / ವಾರ್ತೆಗಳು / ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥರವರನ್ನು ಜಮಾಅತ್ ರಾಜ್ಯ ತಂಡ ಭೇಟಿ

ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥರವರನ್ನು ಜಮಾಅತ್ ರಾಜ್ಯ ತಂಡ ಭೇಟಿ

ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಗೌರವಾನ್ವಿತ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಯವರ ನೇತೃತ್ವದಲ್ಲಿ ಸೌಹಾರ್ದ ಭೇಟಿ ಮಾಡಲಾಯಿತು.

ಸ್ವಾಮೀಜಿಯವರೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಧರ್ಮ, ಅಧ್ಯಾತ್ಮ, ಸೌಹಾರ್ದತೆಯ ವಿಷಯದಲ್ಲಿ ವಿಚಾರ ವಿನಿಮಯ ನಡೆಸಲಾಯಿತು.

ಕರ್ನಾಟಕ ಧಾರ್ಮಿಕ ಸೌಹಾರ್ದ ವೇದಿಕೆ ಕಾರ್ಯ ಚಟುವಟಿಕೆಗಳ ಬಗ್ಗೆ ಮತ್ತು ಅದನ್ನು ಬಲಪಡಿಸುವ ಬಗ್ಗೆ ಸ್ವಾಮೀಜಿಯವರು ಸಹಮತ ವ್ಯಕ್ತಪಡಿಸಿ ಈ ಭೇಟಿಯ ಬಗ್ಗೆ ತೀವ್ರ ಸಂತೋಷ ವ್ಯಕ್ತಪಡಿಸಿದರು.*

ನಿಯೋಗದಲ್ಲಿ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ, ಇಸ್ಲಾಮೀ ಮಾಹಿತಿ ಕೇಂದ್ರದ ಮುಹಮ್ಮದ್ ನವಾಝ್, ಅಬ್ದುಲ್ ರಹ್ಮಾನ್, ಕುಣಿಗಲ್ ಜಮಾಅತ್ ಕಾರ್ಯಕರ್ತರು ಉಪಸ್ಥಿತಿ ಇದ್ದರು.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …