ಹೊಸದಿಲ್ಲಿ,ನ.17: ಅಯೋಧ್ಯೆಯ ವಿವಾದಿತ ತೀರ್ಪು ವಿರುದ್ಧ ಮುಸ್ಲಿಮರು ರಿವ್ಯೂ ಅರ್ಜಿ ದಾಖಲಿಸಲು ನಿರ್ಧರಿಸಿದ್ದು ಆಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡು ಪ್ರಧಾನ ಕಾರ್ಯದರ್ಶಿ ಜಾಫರ್‍ಯಾಬ್ ಜೀಲಾನಿ ಅಯೋಧ್ಯೆಯ ಸುಪ್ರೀಂ ಕೋರ್ಟು ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಮಸೀದಿಯ ಬದಲಾಗಿ ಐದು ಎಕರೆ ಪಡೆಯುವ ವಿಚಾರ ನಮಗೆ ಒಪ್ಪಿಗೆಯಲ್ಲ. ನಾವು ಬೇರೆ ಜಮೀನಿಗಾಗಿ ನ್ಯಾಯಾಲಕ್ಕೆ ಹೋಗಿಲ್ಲ. ಬಾಬರಿ ಮಸೀದಿ ಇದ್ದಲ್ಲೇ ನಮಗೆ ಜಮೀನು ಬೇಕಿದೆ ಎಂದು ಮುಸ್ಲಿಂ ಪರ್ಸನಲ್ ಲಾ ಬೋರ್ಡು ಹೇಳಿದೆ.
ತೀರ್ಪಿನಲ್ಲಿ ಹಲವು ಪರಸ್ಪರ ವಿರುದ್ಧ ವಿಷಯಗಳಿವೆ. ಹೊರಗಿನಿಂದ ತಂದು ಮೂರ್ತಿ ಇಡಲಾಗಿತ್ತು. ಅದನ್ನು ಹೇಗೆ ದೇವತೆ ಎಂದು ತಿಳಿಯಲು ಸಾಧ್ಯ. ಸುಪ್ರೀಂಕೋರ್ಟು ಪುರಾತತ್ವ ಇಲಾಖೆಯ ವರದಿಯಲ್ಲಿ ಯಾವುದೇ ಮಂದಿರ ಕೆಡವಿ ಮಸೀದಿ ಕಟ್ಟಲಾಗಿಲ್ಲ ಎಂದು ಇದೆ ಎಂದು ಸುಪ್ರಿಂಕೋರ್ಟು ತಿಳಿಸಿದೆ ಎಂದು ಮುಸ್ಲಿಂ ಲಾ ಬೋರ್ಡು ಹೇಳಿತು.
ಸಭೆಯಲ್ಲಿದ್ದ ಜಮ್‍ಇಯ್ಯತ್ತುಲ್ ಉಲೇಮಾ ಹಿಂದ್‍ನ ಮೌಲಾನಾ ಅರ್ಶದ್ ಮದನಿಯವರು ನಮ್ಮ ಅರ್ಜಿಯನ್ನು ನೂರು ಶತಮಾನ ತಳ್ಳಿ ಹಾಕಲಾಗಿದೆ ಎಂದು ಹೇಳಿದರು. ಆದರೂ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕಾಗಿದೆ. ಇದು ನಮ್ಮ ಹಕ್ಕು ಎಂದು ಹೇಳಿದರು.
IslamKannada News Portal
