Home / ಲೇಖನಗಳು (page 52)

ಲೇಖನಗಳು

ಪ್ರವಾದಿಯವರ (ಸ) ಜೀವನ ಕ್ರಮ 

ಡಾ| ಬಿ. ಎನ್. ಪಾಂಡೆ ಮುಹಮ್ಮದ್‍ರ ಮಕ್ಕಾ ಜೀವನ ಮತ್ತು ಅವರೊಂದಿಗೆ ನಡೆಸಿದ ಪೈಶಾಚಿಕ ವರ್ತನೆಗಳು ಪ್ರಚುರವಾಗಿವೆ. ಪ್ರವಾದಿಯ ಮದೀನಾ ಜೀವನವು ಗೃಹಸ್ಥ ಮತ್ತು ಸನ್ಯಾಸ ಜೀವನದ ಅದ್ಭುತ ಸಂಕಲನವಾಗಿತ್ತು. ಸಾದ್ಯಂತ ಅವರ ಜೀವನವು ಶ್ರಮದಾಯಕ ಮತ್ತು ಸರಳವಾಗಿತ್ತು. ಸರಕಾರಿ ತೆರಿಗೆ, ಝಕಾತ್, ಅಥವಾ ಸದಕ(ದಾನ)ದ ಬಾಬ್ತಿನಲ್ಲಿ  ತನ್ನ ಅಥವಾ ಕುಟುಂಬದ ಅಗತ್ಯಗಳಿಗಾಗಿ ಪಡೆಯುವುದು ಪಾಪವೆಂದು ಅವರು ಪರಿಗಣಿಸಿದ್ದರು. ಕೆಲವು ಆಪ್ತ ಮಿತ್ರರಿಂದ ಏನಾದರೂ ಉಪಾಹಾರ ಅಥವಾ ಕೊಡುಗೆಗಳನ್ನು ಸ್ವೀಕರಿಸಿದ್ದರು. …

Read More »

ಪ್ರವಾದಿ ಮುಹಮ್ಮದ್: ದಾರಿ ಮತ್ತು ದೀಪ – ಯು.ಕೆ. ಕುಮಾರ್

ಯು.ಕೆ. ಕುಮಾರ್ ಪ್ರವಾದಿ ಮುಹಮ್ಮದ್‍ರು ಜಗತ್ತಿನ ಅದ್ಭುತಗಳಲ್ಲೊಂದಾಗಿದ್ದಾರೆ. ಪವಿತ್ರ ಕುರ್‍ಆನ್‍ನಲ್ಲಿ ಹೇಳಿರುವಂತೆ ಮಾನವ ಕುಲಕ್ಕೆ ಸ್ಪಷ್ಟ ಬೆಳಕನ್ನು ಒದಗಿಸಿದ ಮಹಾನ್ ವ್ಯಕ್ತಿ. ಪ್ರಪಂಚದ ಸಂಚಾರ ಪಥಗಳಲ್ಲಿ ಅನೇಕ ಪ್ರವಾದಿಗಳನ್ನು ಕಾಣಬಹುದಾದರೂ ಪ್ರವಾದಿ ಮುಹಮ್ಮದ್‍ರಂತೆ ಲೌಕಿಕ ಮತ್ತು ಆಧ್ಯಾತ್ಮಿಕ ಸಮೂಹವನ್ನು ಸುಧಾರಣೆಗೊಳಿಸಿದವರಿಲ್ಲ. ಸಮಕಾಲೀನ ಸುಧಾರಣೆಯ ನಾಯಕತ್ವ ವಹಿಸಿ, ಅದರ ಸಾಕಾರಕ್ಕೆ ಸಾಕ್ಷಿಯಾಗಲು ಪ್ರವಾದಿ ಪರಂಪರೆಯಲ್ಲಿ ಮುಹಮ್ಮದರಿಗೆ ಮಾತ್ರ ಸಾಧ್ಯವಾಗಿದೆ. ಆದ್ದರಿಂದಲೇ ಪ್ರವಾದಿ ಮುಹಮ್ಮದ್‍ರು ಇತಿಹಾಸದಲ್ಲಿ ವಿಶಿಷ್ಠ ಪ್ರಕಾಶ ಗೋಪುರವಾಗಿದ್ದಾರೆ. ಬಹಳ ಸಾಮಾನ್ಯ …

Read More »

ಪ್ರವಾದಿ ಮುಹಮ್ಮದ್ ಪೈಗಂಬರ್: ನಾನು ಕಂಡಂತೆ – ಪ್ರೊ| ಆರ್.ಎಸ್. ನಾಯಕ, ಭಟ್ಕಳ

ಪ್ರೊ| ಆರ್.ಎಸ್. ನಾಯಕ, ಭಟ್ಕಳ ಅರಸರಾದಾಗಲೂ ಅವರು ಬಡತನದ ಜೀವನವನ್ನೇ ನಡೆಸಿದರು. ಚಿಕ್ಕದಾದ ಗುಡಿಸಲಿನಲ್ಲಿ ವಾಸಿಸಿದರು. ತಮ್ಮ ಪಾದರಕ್ಷೆಗಳನ್ನು ತಾವೇ ಸರಿಪಡಿಸಿಕೊಳ್ಳುತ್ತಿದ್ದರು. ಬಟ್ಟೆ ಹೊಲಿಯುತ್ತಿದ್ದರು, ಹಾಲು  ಕರೆಯುತ್ತಿದ್ದರು. ಅರೇಬಿಯಾ ನಾಡಿನಲ್ಲಿ ಸಂಪತ್ತಿನ ಹೊಳೆ ಹರಿಯುವ ಕಾಲದಲ್ಲಿಯೂ ರಾಜನ ಮನೆಯ ಒಲೆಯಲ್ಲಿ ಬೆಂಕಿ ಉರಿಯುತ್ತಿರಲಿಲ್ಲ. ಖರ್ಜೂರ ಮತ್ತು ನೀರಿನಿಂದಷ್ಟೇ ಊಟ ಮುಗಿಸುತ್ತಿದ್ದ  ಅವರಿಗೆ ಅಂಗ ರಕ್ಷಕರೂ ಇರಲಿಲ್ಲ. ಯಾರಾದರೂ ಎದ್ದು ನಿಂತು ತನಗೆ ಗೌರವ ಸೂಚಿಸುವುದನ್ನೂ ಅವರು ಇಷ್ಟಪಡುತ್ತಿರಲಿಲ್ಲ. ತಮ್ಮನ್ನು ಯಾರಾದರೂ …

Read More »

ಪ್ರವಾದಿಯನ್ನು ವಿಕೃತಗೊಳಿಸಿದ ‘ಅವರು’ರಾಮ್ ಪುನಿಯಾನಿ

ಇದು ಭೂಮಿಯಲ್ಲಿ ಶಾಂತಿ ಸಂದೇಶವನ್ನು ಸಾರಿದ ಓರ್ವ ವಿಮೋಚಕನನ್ನು ಭಯೋತ್ಪಾದಕ ಧರ್ಮದ ಸ್ಥಾಪಕರೆಂದು ಪ್ರಚಾರ ಮಾಡುತ್ತಿರುವ ವಿರೋಧಾಭಾಸದ ಕಾಲವಾಗಿದೆ. ಈಗ ತೈಲ ಬಾವಿಗಳ ನಿಯಂತ್ರಣಕ್ಕಾಗಿ ಜಾಗತಿಕ ರಾಜಕೀಯದ ದುರಂತ ನಾಟಕಗಳು ನಡೆಯುತ್ತಿವೆ. ಅದಕ್ಕೆ ಸ್ವತಃ ಒಂದು ಭಾಷಾ ಪ್ರಯೋಗವಿದೆ. ಅದು ಇಸ್ಲಾಮನ್ನು ‘ಶೈತಾನ್’ ಎಂದು ಬಿಂಬಿಸುತ್ತಿದೆ. ಅದೇ ವೇಳೆ ಭಾರತದ “ಸಾಮಾನ್ಯ ಸಾರ್ವಜನಿಕ ಮನಸ್ಸು” ಏನು ಮಾಡುತ್ತಿದೆ? ಇಸ್ಲಾಮ್ ಶೈತಾನನ ಗ್ರಂಥ ಮತ್ತು ಮುಸ್ಲಿಮರು ಶೈತಾನರೆಂದು ಕೋಮು ರಾಜಕೀಯದ ಮೂಲಕ …

Read More »

ಪ್ರವಾದಿ ಅನುಸರಣೆ ನಿಜವಾದ ಪ್ರವಾದಿ ಪ್ರೇಮ

ಅಬ್ದುಸ್ಸಮದ್ ಎ.ಎಸ್ ವಿಶ್ವಾಸಿಗಳಿಗೆ ಪ್ರವಾದಿವರ್ಯರು(ಸ) ಅವರಿಗಿಂತ(ಸ್ವಂತಕ್ಕಿಂತಲೂ) ಹೆಚ್ಚು ಪ್ರೀತಿ ಪಾತ್ರರು. ಈ ಲೋಕ ಮತ್ತು ಪರಲೋಕಗಳೆರಡಲ್ಲಿ ವಿಶ್ವಾಸಿಗಳ ಅತೀ ಹತ್ತಿರದಲ್ಲಿ ಪ್ರವಾದಿ ಇರುತ್ತಾರೆ. ವಿಶ್ವಾಸಿಯ ಜೀವನ ಪ್ರವಾದಿ ಮುಹಮ್ಮದ್(ಸ) ಸೇರಿ ನಿಂತಂತೆ ಒಬ್ಬರು ಇನ್ನೊಬ್ಬರಿಗೆ ಸೇರಿ ನಿಲ್ಲುವುದಿಲ್ಲ. ವಿಶ್ವಾಸಿಯ ಬದುಕಿನ ಗತಿ, ದಾರಿಯನ್ನು ನಿರ್ಣಯಿಸುವವರು ಪ್ರವಾದಿ ಆಗಿದ್ದಾರೆ. ತಾನು ಮಾಡುವ ಹೋಗುವ ವಿಷಯಗಳೆಲ್ಲ ಅಲ್ಲಾಹನು ಪ್ರವಾದಿ ಏನು ಹೇಳುತ್ತಾರೆ ಎಂದು ನೋಡಿಕೊಳ್ಳುವುದು ವಿಶ್ವಾಸಿಯ ಕರ್ತವ್ಯವಾಗಿದೆ. ಹೀಗೆ ವಿಶ್ವಾಸಿಯ ಅಭಿಪ್ರಾಯ ರೂಪುಗೊಳ್ಳಬೇಕಾಗಿದ್ದು …

Read More »

ಅಭಿಪ್ರಾಯ ಸ್ವಾತಂತ್ರ್ಯದಲ್ಲಿ ಪ್ರವಾದಿಯನ್ನು ಅನುಸರಿಸೋಣ – ಪ್ರೊ| ಏ.ಕೆ. ರಾಮಕೃಷ್ಣನ್

ಪ್ರವಾದಿಯವರ ಜೀವನವನ್ನು ನಾವು ಹಲವೊಮ್ಮೆ ಅದರ ಪೂರ್ಣ ಅರ್ಥದಲ್ಲಿ ವಿಶ್ಲೇಷಿಸುವುದಿಲ್ಲ. ಅವರನ್ನು ನಾವು ಬಹುವಂಶ ಪಕ್ಷಪಾತೀಯ ದೃಷ್ಟಿಯಿಂದ ನೋಡುತ್ತೇವೆ. ಪಾಶ್ಚಾತ್ಯ ಓರಿಯಂಟಲಿಸ್ಟರು ಹಾಗೂ ಇನ್ನಿತರರು, ಪ್ರವಾದಿಯವರ ಯುದ್ಧ ಘೋಷಣೆ ಮತ್ತು ಸೈನಿಕ ಕಾರ್ಯಾಚರಣೆಗಳ ಕುರಿತು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಹಾಗೆಯೇ ನಾವು ಕೂಡ ತಿಳಿದೋ ತಿಳಿಯದೆಯೋ ಯಾವುದಾದರೊಂದು ಪಕ್ಷ ಹಿಡಿದು ಪ್ರವಾದಿಯವರ ಜೀವನವನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತೇವೆ. ‘ಸಲಾಮ್’ ಅಥವಾ ಶಾಂತಿಯೆಂದು ಅರ್ಥೈಸಲಾಗುವ ಇಸ್ಲಾಮಿನ ನೈಜ ನೀತಿಗೆ ಈ ವ್ಯಾಖ್ಯಾನಗಳು ತಲುಪುವುದಿಲ್ಲ. …

Read More »

ನಮ್ಮ ಕಾಲದ ವಿಮೋಚಕ ;  ಖುಶ್ವಂತ್ ಸಿಂಗ್ ಬರೆಯುತ್ತಾರೆ…

ಖುಶ್ವಂತ್ ಸಿಂಗ್ ಪೂರ್ವಗ್ರಹವು ವಿಷದಂತೆ. ಆರಂಭದಲ್ಲಿಯೇ ಮನಸ್ಸನ್ನು ಅದರಿಂದ ಮುಕ್ತಗೊಳಿಸದಿದ್ದರೆ ಅದು ಅರ್ಬುದದಂತೆ ವ್ಯಾಪಿಸಿ, ಸರಿ ತಪ್ಪುಗಳನ್ನು ತಿಳಿಯುವ ಮನಸ್ಸಿನ ಶಕ್ತಿಯನ್ನು ನಾಶ ಪಡಿಸುತ್ತದೆ. ‘ನನ್ನ ಧರ್ಮವು ಇತರೆಲ್ಲ ಧರ್ಮಗಳಿಗಿಂತ ಶ್ರೇಷ್ಠ’ ಎಂಬ ಭಾವನೆಯು ಈ ಪೂರ್ವ ಗ್ರಹಗಳಲ್ಲಿ ಅತ್ಯಂತ ವಿನಾಶಕಾರಿ. ಈ ಮಂದಿ ಇತರರ ಧರ್ಮವನ್ನು ಸಹಿಸಿಕೊಳ್ಳಬಹುದು. ಆದರೆ ಅವುಗಳನ್ನು ಗೌರವಿಸಿ, ಅವು ತನ್ನ ಧರ್ಮದಂತೆಯೇ ಸಮಾನ ಪ್ರಮಾಣದಲ್ಲಿ ಪ್ರಸ್ತುತವೆಂದು ಒಪ್ಪಲಾರರು. ಕ್ರೈಸ್ತ ಧರ್ಮದ ಬಳಿಕ ಜಗತ್ತಿನಲ್ಲಿ ಅತ್ಯಧಿಕ …

Read More »

ನಾನು ಕಂಡ ಮುಹಮ್ಮದ್ – ವಿ.ಜಿ. ಕುಮಾರ್

ವಿ.ಜಿ. ಕುಮಾರ್ ಕೇವಲ ಪ್ರವಾದಿಯನ್ನು ತಿಳಿಯುವಾಗಲಷ್ಟೇ ಅಲ್ಲ. ಇಸ್ಲಾಮಿನ ಬಗ್ಗೆ ತಿಳಿಯುವಾಗಲೇ ಬಹಳ ತಡವಾಯಿತು. ಆರಂಭ ಕಾಲದಲ್ಲಿ ಇಸ್ಲಾಮ್ ಮತ್ತು ಅದರ ಪ್ರವಾದಿಯ ಬಗ್ಗೆ ನನ್ನಲ್ಲಿ ಹಲವು ತಪ್ಪು ತಿಳುವಳಿಕೆಗಳಿದ್ದುವೆಂದು ಹೇಳಲು ಸಂಕೋಚ ಪಡುವುದಿಲ್ಲ. ಯಾಕೆಂದರೆ, ನನ್ನ ಬಾಲ್ಯ ಮತ್ತು ಯೌವನದಲ್ಲಿ ಮುಸ್ಲಿಮ್ ಸಮುದಾಯದೊಂದಿಗೆ ಯಾವುದೇ ಸಹವಾಸವಿರಲಿಲ್ಲ. ಹೈಸ್ಕೂಲ್‍ಗೆ ತಲುಪುವ ತನಕ ನನಗೆ ಆ ಸಮುದಾಯದವರ ಸಂಪರ್ಕವಿರಲಿಲ್ಲ. ಅನಂತರ ಕೆಲವು ಮುಸ್ಲಿಮ್ ಮಿತ್ರರು ದೊರೆತರೂ ಆ ಸಮುದಾಯವನ್ನು ಹತ್ತಿರದಿಂದ ತಿಳಿಯಲಾಗಲಿಲ್ಲ. …

Read More »

ಧರ್ಮದ ಉತ್ಪತ್ತಿ

ಕಾರ್ಲ್ ಮಾಕ್ರ್ಸ್ ಮನುಷ್ಯನೇ ಧರ್ಮವನ್ನು ಸೃಷ್ಟಿಸಿದನು, ಧರ್ಮವು ಮನುಷ್ಯನನ್ನು ಸೃಷ್ಟಿಸಿದ್ದಲ್ಲ ಎಂದು (ತನ್ನ ಎ ಕಂಟ್ರಿಬ್ಯೂಶನ್ ಟು ದ ಕ್ರಿಟಿಕ್ ಆಫ್ ಹೇಗಲ್ಸ್ ಫಿಲಾಸಫಿ ಆಫ್ ಲಾ ಎಂಬ ಪ್ರಬಂಧದಲ್ಲಿ) ವಾದಿಸಿದ್ದಾನೆ. ಇದೇ ಪ್ರಬಂಧದಲ್ಲಿ ಆತ ಧರ್ಮವನ್ನು ಅಫೀಮು (ಮಾದಕ ವಸ್ತು) ಎಂದು ಕೂಡ ಬಿಂಬಿಸುತ್ತಿದ್ದಾನೆ. ಅವನ ವಾದ ಪ್ರಕಾರ ಧರ್ಮಕ್ಕೆ ಪ್ರತಿಭಟನೆಯ ಸ್ವಭಾವ ಇರುವಂತೆ ಕಣ್ಣಾಮುಚ್ಚಾಲೆಯಾಟದ ಸ್ವಭಾವವೂ ಇದೆ. ಅಂದರೆ “ಧಾರ್ಮಿಕ ತಪಸ್ಸು ನೈಜ ತಪಸ್ಸಿನ ಒಂದು ಹೊರ …

Read More »

ಪ್ರವಾದಿ ತೋರಿದ ಹಾದಿ – ಸ್ವಾವಿೂ ಲಕ್ಷ್ಮೀ ಶಂಕರಾಚಾರ್ಯ

ಮಾನವನು ಅಭಿವೃದ್ಧಿ ಪಥದಲ್ಲಿ ಸಾಗುವಾಗ ಆತನ ಸುಖ ಸಂಪಾದನೆಯ ಬಯಕೆ ಹೆಚ್ಚಿತು. ಈ ಬಯಕೆಯು ಅತಿಯಾಗಿ ಆತನನ್ನು ದಾರಿ ತಪ್ಪಿಸಲು ಕಾರಣವಾಯಿತು. ಹೀಗೆ ಆತನು ಸತ್ಯದ ಹಾದಿಯಿಂದ ಅಸತ್ಯಕ್ಕೆ ಮತ್ತು ಬೆಳಕಿನಿಂದ ಕತ್ತಲೆಗೆ ಹೆಜ್ಜೆ ಬದಲಾಯಿಸಲಾರಂಭಿಸಿದ. ಜನನ ಮರಣವಿಲ್ಲದ ಸರ್ವಶಕ್ತನಾದ ದೇವನನ್ನು ತೊರೆದು ಆತ ಮುನ್ನಡೆಯಲಾರಂಭಿಸಿದ. ಧರ್ಮದ ವ್ಯಾಪಾರಿಗಳು, ಮಂತ್ರವಾದಿಗಳು, ವಿಗ್ರಹಾರಾಧಕರೊಡನೆ ಆತ ಪಯಣಿಸಿದ. ಜಗತ್ತಿನಾದ್ಯಂತ ಅಸತ್ಯ ಮೆರೆಯಿತು. ಪ್ರತಿಯೊಂದು ಸಮಾಜ ಮತ್ತು ಗೋತ್ರವು ತಮ್ಮ ದೇವಂದಿರನ್ನು ಸೃಷ್ಟಿಸುತ್ತಿತ್ತು. ಕೆಲವರು …

Read More »