ಹಲಾಲ್ (ಶುದ್ಧ) ಅನ್ನುವ ಅರಬಿ ಪದ ಮತ್ತು ಅದು ಕಟ್ಟಿಕೊಡುವ ಪರಿಕಲ್ಪನೆಯ ಮೇಲೆ ಮುಸ್ಲಿಮರಿಗೆ ವಿಶೇಷ ಆಸಕ್ತಿಯಿದೆ. ಇದಕ್ಕೆ ಬಹುಮುಖ್ಯ ಕಾರಣ- ಇಸ್ಲಾಮ್ ಪ್ರತಿಪಾದಿಸುವ ಜೀವನ ಪದ್ಧತಿ. ನಿಮ್ಮ ಸಂಪಾದನೆ ಶುದ್ಧ (ಹಲಾಲ್) ಆಗಿರಬೇಕು ಎಂದು ಇಸ್ಲಾಮ್ ಮುಸ್ಲಿಮರಿಗೆ ಕರೆ ಕೊಡುತ್ತದೆ. ಬಡ್ಡಿಯನ್ನು ಅದು ಅಶುದ್ಧ(ಹರಾಮ್)ತೆಯ ಪಟ್ಟಿಯಲ್ಲಿ ಸೇರಿಸಿದೆ. ಯಾರು ಶುದ್ಧವಲ್ಲದ ವ್ಯವಹಾರದಲ್ಲಿ ತೊಡಗುತ್ತಾರೋ ಮತ್ತು ಆ ಮೂಲಕ ಹರಿದು ಬಂದ ಆದಾಯದಿಂದ ಬದುಕುತ್ತಾರೋ ಅವರೆಲ್ಲರನ್ನೂ ದೇವನು ಕಟಕಟೆಯಲ್ಲಿ ನಿಲ್ಲಿಸುತ್ತಾನೆ …
Read More »ಅವರು ದೇವರಾಗಲಿಲ್ಲ…
ಭಾರದ್ವಾಜ್ ಕೆ. ಆನಂದತೀರ್ಥ, ಕೊಡಗು ಪ್ರವಾದಿ ಮುಹಮ್ಮದ್ರವರ(ಸ) ಬಗ್ಗೆ ಒಬ್ಬ ಅನ್ಯ ಧರ್ಮಿಯನಾಗಿ ಬರೆಯಲು ಕುಳಿತಾಗ ಭಯ ಮತ್ತು ಇಂತಹ ಒಂದು ಅವಕಾಶ ಸಿಕ್ಕಿದ್ದಕ್ಕೆ ಆನಂದ ಎರಡೂ ಕೂಡ ಉಂಟಾಗಿ ಏನು ಬರೆಯಬೇಕು ಅನ್ನುವುದೇ ಅರ್ಥವಾಗದೆ ಒಂದೆರಡು ದಿನ ಮೌನವಾಗಿಯೇ ಇರಬೇಕಾಯಿತು. ಕೆಲವರ ಹೆಸರು ಹೇಳುವುದಕ್ಕೆ ಅರ್ಹತೆ ಮತ್ತು ಯೋಗ್ಯತೆ ಎರಡೂ ಬೇಕಾಗುತ್ತದೆ. ಇವರ ಬಗ್ಗೆ ಬರೆಯುವ ಅರ್ಹತೆ, ಯೋಗ್ಯತೆ ಎರಡೂ ನನಗೆ ತೃಣ ಮಾತ್ರವೂ ಇಲ್ಲ ಅನ್ನುವುದನ್ನು ಗಮನದಲ್ಲಿ …
Read More »ಇಸ್ಲಾಮ್: ಸ್ವಚ್ಛತೆಯ ಪಾಠಗಳು
2018ರ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಜಪಾನ್ ಮತ್ತು ಬೆಲ್ಜಿಯಂನ ನಡುವೆ ನಡೆದ ಪಂದ್ಯವು ಬಹಳ ಜಿದ್ದಾಜಿದ್ದಿನಿಂದ ಕೂಡಿತ್ತು. ಆ ವಿಶ್ವಕಪ್ನ ಅತ್ಯಂತ ಫೇವರಿಟ್ ತಂಡವೆಂದು ಹೇಳಲಾಗಿದ್ದ ಬೆಲ್ಜಿಯಂನ ವಿರುದ್ಧ ಕೊನೆಯ ನಿಮಿಷದವರೆಗೂ ಹೋರಾಡಿ 3-2 ಎಂಬ ಸ್ವಲ್ಪ ವ್ಯತ್ಯಾಸದೊಂದಿಗೆ ಜಪಾನ್ ಸೋಲೊಪ್ಪಿಕೊಂಡಿತ್ತು. ಆದರೆ ಈ ಎಲ್ಲಾ ವಿಷಯಗಳಿಂದ ಆ ಪಂದ್ಯವು ಚರಿತ್ರೆಯಲ್ಲಿ ಸ್ಮರಣೀಯವಾದದ್ದಲ್ಲ. ತಮ್ಮ ಪ್ರೀತಿಯ ತಂಡ ಹೋರಾಡಿ ಸೋತರೂ, ಅದರ ನೋವನ್ನು ತೋರ್ಪಡಿಸದೆ ಪಂದ್ಯದ ಬಳಿಕ ಜಪಾನ್ನ ಫುಟ್ಬಾಲ್ …
Read More »ಜಿಹಾದ್ ಮತ್ತು ಯುದ್ಧ
ಜಿಹಾದ್ನ ಅರ್ಥ ಯುದ್ಧವಲ್ಲ. ಬದಲಾಗಿ ಹೋರಾಡುವುದು, ಸತತ ಪ್ರಯತ್ನ ಮಾಡುವುದು, ಒತ್ತಡ ಹೇರುವುದು, ಕಷ್ಟ ಕೋಟಲೆಗಳನ್ನು ಸಹಿಸುವುದು ಇತ್ಯಾದಿಗಳಾಗಿವೆ. ಪವಿತ್ರ ಕುರ್ಆನ್ ಒಂದೆಡೆ ಹೀಗೆನ್ನುತ್ತದೆ, “ಪೈಗಂಬರರೇ, ಸತ್ಯ ನಿಷೇಧಿಗಳ ಮಾತನ್ನು ಅನುಸರಿಸಲೇಬೇಡಿರಿ ಮತ್ತು ಈ ಕುರ್ಆನನ್ನು ತೆಗೆದುಕೊಂಡು ಅವರ ವಿರುದ್ಧ ಉಗ್ರ ಹೋರಾಟ ನಡೆಸಿರಿ.” (25:52) ಕುರ್ಆನಿನ ಈ ವಚನದ ತಾತ್ಪರ್ಯ ಯುದ್ಧ ಅಥವಾ ಸಮರವಲ್ಲ. ಬದಲಾಗಿ ಹೋರಾಟ ಹಾಗೂ ಸತತ ಪ್ರಯತ್ನವಾಗಿದೆ. ಇನ್ನೊಂದೆಡೆ ಕುರ್ಆನ್ ಹೀಗೆಂದಿದೆ, “ಕೆಲವರು (ಸತ್ಯವಿಶ್ವಾಸ …
Read More »ಅವಿೂನ್, ಸಾದಿಕ್ ಸ್ಲೋಗನ್ ಆಗದಿರಲಿ….ಅವರನ್ನು ನೋಡಿ ಕಣ್ಣು ಮಂಜಾಗಲಿ
ಪ್ರವಾದಿ(ಸ) ತನ್ನ ಯೌವನದಲ್ಲಿ ಅತ್ಯುತ್ತಮ ಸತ್ಯಸಂಧ ವ್ಯಾಪಾರಿಯಾಗಿದ್ದರು. ಮಾರುಕಟ್ಟೆಯಲ್ಲಿ ಜನರು ಅವರ ಸರಕುಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದರು. ಆ ಕಾಲದಲ್ಲಿ ಮಕ್ಕಾದ ಮಾರುಕಟ್ಟೆ ಸಂಪೂರ್ಣ ಬಡ್ಡಿಯನ್ನು ಆಧರಿಸಿತ್ತು. ಸಾದಾ ವರ್ತಕರು ಬಂಡವಾಳ ಶಾಹಿಗಳಿಂದ ಬಡ್ಡಿಗೆ ಹಣ ಸಾಲ ಪಡೆದು ತಮ್ಮ ಅಸಲಿ ಲಾಭಕ್ಕಿಂತಲೂ ಹೆಚ್ಚಿಗೆ ಕೆಲವೊಮ್ಮೆ ಬಡ್ಡಿ ಪಾವತಿಸುವ ಸಂಕಷ್ಟಕ್ಕೆ ಒಳಗಾಗುತ್ತಿದ್ದರು. ಆದರೆ ಪ್ರವಾದಿಯವರಿಗೆ(ಸ) ಮಾತ್ರ ಪ್ರವಾದಿತ್ವಕ್ಕಿಂತಲೂ ಮುಂಚೆಯೂ ಬಡ್ಡಿ ಎಂದರೆ ಎಲ್ಲಿಲ್ಲದ ದ್ವೇಷ. ಅವರು ಜನರಿಂದ ಬಡ್ಡಿ ಪಡೆಯದೆ …
Read More »ಜನರಿಗೆ ಇಸ್ಲಾಮ್ ಇಷ್ಟವಾದದ್ದು ಹೀಗೆ…
ಫ್ರೊಫೆಸರ್ ರಿಚರ್ಡ್ ಹ್ಯಾಮಿಲ್ಟನ್ ಆಂಗ್ಲ ಚಿಂತಕ ರಿಚರ್ಡ್ ಹ್ಯಾಮಿಲ್ಟನ್ರು ತನ್ನ ಜೀವನದ ಹೆಚ್ಚಿನ ಭಾಗವನ್ನು ಜಗತ್ತಿನ ವಿವಿಧ ಧರ್ಮಗಳ ಬಗ್ಗೆ ಅಧ್ಯಯನದಲ್ಲಿ ಕಳೆದಿದ್ದಾರೆ. ಅವರ ಪ್ರಕಾರ ಇಂದು ಅಸ್ತಿತ್ವದಲ್ಲಿರುವ ಧರ್ಮಗಳ ಪೈಕಿ ಇಸ್ಲಾಮ್ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. ಬಹಳಷ್ಟು ಸಮಸ್ಯೆ ಮತ್ತು ಅಡಚಣೆಗಳ ಹೊರತಾಗಿಯು ಈ ಧರ್ಮವು ಜನರ ಮನಸ್ಸಿನಲ್ಲಿ ಸ್ಥಾನ ಪಡೆಯುತ್ತಿದೆ. ಈ ಬಗ್ಗೆ ಬಹಳಷ್ಟು ಕಡೆಗಳಲ್ಲಿ ಆಶ್ಚರ್ಯ ವ್ಯಕ್ತಪಡಿಸಲಾಗುತ್ತದೆ. ಆದರೆ ಮನುಷ್ಯನ ಪ್ರಕೃತಿ ಎಲ್ಲ ಕಾಲಗಳಲ್ಲಿ ಒಂದೇ …
Read More »ಕುರ್ಆನ್ನಲ್ಲಿ ಮಳೆ
ಎಂ. ಮುಹಮ್ಮದ್ ಅಮೀನ್ ಮಳೆಯನ್ನು ಅನುಗ್ರಹವೆಂದು ಕುರ್ಆನ್ ವರ್ಣಿಸಿದೆ. ಯಾಕೆಂದರೆ ಮಳೆಯಿಂದಲೇ ಭೂಮಿಯಲ್ಲಿ ಜೀವಕಳೆ ಮಿಡಿಯುತ್ತದೆ. ಭೂಮಿಯಲ್ಲಿ ನೀರಿನ ಅಂಶವಿಲ್ಲದ ಯಾವೊಂದು ವಸ್ತುವೂ ಇಲ್ಲ. “ನಾವು ನೀರಿನಿಂದ ಎಲ್ಲ ಜೀವಿಗಳನ್ನು ಸೃಷ್ಟಿಸಿರುವೆವು” ಎಂದು ಕುರ್ಆನ್ ಸ್ಪಷ್ಟಪಡಿಸಿದೆ. ನೀರಿನ ಉದ್ಭವ ಭೂಮಿಯಲ್ಲಿ ನೀರಿನ ಉದ್ಭವದ ಕುರಿತು ಪ್ರಾಚೀನ ಕಾಲದಿಂದಲೇ ಜನರಲ್ಲಿ ವಿವಿಧ ಅಭಿಪ್ರಾಯಗಳಿವೆ. ಜಿ. ಗಸ್ಟನಿ (G. Gustany) ಮತ್ತು ಬಿ. ಬ್ಲವೋಕ್ಸ್ (B. Blavoux) ಬರೆದ ಯುನಿವರ್ಸಲಿಸ್ ಎನ್ಸೈಕ್ಲೋಪಿಡಿಯಾ …
Read More »ದೇವಾಸ್ತಿತ್ವವನ್ನು ನಿರಾಕರಿಸಲಾದೀತೆ?
ದೇವವಿಶ್ವಾಸ ಮಾನವನ ನೈಸರ್ಗಿಕ ಬೇಡಿಕೆಯಾಗಿದೆ. ಈ ಕುರಿತು ನಮ್ಮ ದೇಶದ ಜನರು ವೈವಿಧ್ಯಮಯ ದೃಷ್ಟಿಕೋನವನ್ನು ಹೊಂದಿದವರಿದ್ದಾರೆ. ಆಸ್ತಿಕರೂ ಇದ್ದಾರೆ. ನಾಸ್ತಿಕರೂ ಇದ್ದಾರೆ. ಹಾಗಿದ್ದರೂ ಈ ಪ್ರಪಂಚವನ್ನು ಇಲ್ಲಿ ಇರುವಂತಹ ಸೃಷ್ಟಿ ಜಾಲಗಳನ್ನು ಅವುಗಳ ಪ್ರಕ್ರಿಯೆಯನ್ನು ವೀಕ್ಷಿಸಿದಾಗ ಒಂದು ಮಹಾಶಕ್ತಿಯು ಅದರ ಹಿಂದೆ ಸಕ್ರಿಯವಾಗಿರುವುದು ವ್ಯಕ್ತವಾಗುತ್ತದೆ. ಲೋಕಕ್ಕೆ ಬಂದ ಪ್ರವಾದಿಗಳೆಲ್ಲರೂ ದೇವಾಸ್ತಿತ್ವದ ಬಗ್ಗೆ ಜನರಿಗೆ ತಿಳಿಸಿ ಹೇಳಿದ್ದಾರೆ. ಪ್ರಾಚೀನ ಗ್ರಂಥಗಳೂ ಅದನ್ನು ಸಮರ್ಥಿಸುತ್ತವೆ. ದೇವನ ಕಲ್ಪನೆಯು ಮಾನವನ ಜನ್ಮ ಸಿದ್ಧ ಬೇಡಿಕೆಯೆಂದು …
Read More »ನೊಣ: ಕುರ್ಆನ್ ನ ದೈವಿಕತೆಗೆ ಮತ್ತೊಂದು ಸಾಕ್ಷಿ!
ಕುರ್ಆನ್ ಒಂದು ದೈವಿಕ ಗ್ರಂಥವಾಗಿದೆ. 1400 ವರ್ಷಗಳ ಹಿಂದೆ ಅರಬ್ ದೇಶದ ಮುಹಮ್ಮದ್(ಸ) ಎಂಬ ನಿರಕ್ಷರಿಯನ್ನು ತನ್ನ ಪ್ರವಾದಿಯಾಗಿ ಆರಿಸಿಕೊಂಡ ಅಲ್ಲಾಹು ಅವರ ಮೂಲಕ ತನ್ನ ಸಂದೇಶವನ್ನು ಮನುಷ್ಯ ಕೋಟಿಗೆ ತಲಪಿಸಿದ್ದನು. ತನ್ನ ಅಧರಗಳಿಂದ ಹೊರಬರುವ ಸೂಕ್ತಗಳು ತನ್ನ ಮಾತಲ್ಲ; ಬದಲಾಗಿ ಅದು ಸರ್ವಲೋಕ ಸೃಷ್ಟಿಕರ್ತನಾದ ಅಲ್ಲಾಹನ ವಚನಗಳು ಎಂದು ಸ್ವತಃ ಪ್ರವಾದಿಯವರು ನುಡಿಯುತ್ತಿದ್ದರು. ಅದನ್ನು ಅವರು ಸ್ವಂತ ರಚನೆಯೆಂದು ಒಪ್ಪಿಕೊಂಡಿದ್ದಲ್ಲಿ ಅವರನ್ನು ತಮ್ಮ ಅಮೀರನನ್ನಾಗಿ ಸ್ವೀಕರಿಸಲು ಅವರ ಜನತೆಯು …
Read More »ಕುರ್ಆನ್ ಮತ್ತು ಆಧುನಿಕ ವಿಜ್ಞಾನ: ಒಂದು ತುಲನಾತ್ಮಕ ಅಧ್ಯಯನ
ನಮ್ಮ ಸಮಾಜ ಬಹಳ ಮುಂದುವರಿದಿದೆ. ವಿಜ್ಞಾನವಂತೂ ದಿನ ಹೋದಂತೆ ಬೆಳೆಯುತ್ತಲೇ ಇದೆ. ಇಂದಿನ ಸಾಕಷ್ಟು ಮಂದಿ ದೇವರು, ಪವಾಡ, ಸ್ವರ್ಗ, ನರಕ ಮೊದಲಾದವುಗಳ ಮೇಲೆ ವಿಶ್ವಾಸವನ್ನಿಡದೆ, ವಿಜ್ಞಾನವೇ ಸರ್ವಸ್ವ ಎಂದು ನಂಬುತ್ತಾರೆ. ಇಂತಹ ಕಾಲದಲ್ಲಿ ನಾವು ಬದುಕುತ್ತಿರುವಾಗ ಒಂದು ಧರ್ಮದ ಬಗ್ಗೆ, ಅದರ ವಿಶೇಷತೆಯ ಬಗ್ಗೆ ವಿವರಿಸಬೇಕಾದರೆ ಆ ಧರ್ಮಗ್ರಂಥದಲ್ಲಿರುವ ವೈಜ್ಞಾನಿಕ ವಿಷಯಗಳು ಇವತ್ತಿನ ವಿಜ್ಞಾನಕ್ಕೆ ಪೂರಕವಾಗಿದೆಯೇ ಎಂಬುದಾಗಿ ಪರಿಶೀಲಿಸಬೇಕಾಗುತ್ತದೆ. ಏಕೆಂದರೆ, ಒಂದು ವೇಳೆ ಆ ಗ್ರಂಥ ನಮ್ಮ ನೈಜ …
Read More »
IslamKannada News Portal