ಒಂದು ಕಿಲೋ ಮೀಟರ್ ಉದ್ದದ ಕ್ಯಾನ್ವಾಸ್‌ನಲ್ಲಿ ಕೈಬರಹದ ಕುರ್‌ಆನ್ ತಯಾರಿಸುವ ಮೂಲಕ ತನ್ನ ಹೆಸರಿನಲ್ಲಿ ಗಿನ್ನೆಸ್ ವಿಶ್ವ ದಾಖಲೆ ಬರೆಯುವ ಕನಸನ್ನು ಈಡೇರಿಸುವ ಉದ್ದೇಶದಿಂದ ಕೋಝಿಕ್ಕೋಡ್‌ನ ಮುಕ್ಕೊಮ್ ಮೂಲದ ವ್ಯಂಗ್ಯ ಚಿತ್ರಕಾರ ಎಂ. ದಿಲೀಪ್ ಕಾರ್ಯಪ್ರವೃತ್ತರಾಗಿದ್ದಾರೆ.
ಈ ಕಾರ್ಯಾಚರಣೆಯ ಮೊದಲ ಹಂತವಾಗಿ ದಿಲೀಪ್ 300 ಮೀಟರ್ ಉದ್ದದ ಕುರ್‌ಆನ್ ಹಸ್ತ ಪ್ರತಿಯನ್ನು ಸಿದ್ಧಪಡಿಸಿದ್ದು, ಇದನ್ನು ಶುಕ್ರವಾರ ಪತ್ರಕರ್ತರ ಸಮ್ಮುಖದಲ್ಲಿ ಸ್ವಾಮಿ ಸಂದೀಪಾನಂದ ಗಿರಿ ಬಿಡುಗಡೆಗೊಳಿಸಿದರು.
“ನಾನು ಅತಿ ಹೆಚ್ಚು ಉದ್ದದ ಕೈ ಬರಹದ ಕುರ್‌ಆನ್ ತಯಾರಿಸುವ ಮೂಲಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅನ್ನು ಪ್ರವೇಶಿಸಲು ಬಯಸುತ್ತೇನೆ. ನಾನು 3 ವರ್ಷಗಳಲ್ಲಿ ಈ ಕೆಲಸವನ್ನು ಪೂರ್ಣಗೊಳಿಸಲು ಯೋಚಿಸುತ್ತಿದ್ದೇನೆ ”ಎಂದು ದಿಲೀಪ್ ಹೇಳಿದರು.
2016 ರಲ್ಲಿ ಅತೀ ದೊಡ್ಡ ಬ್ರಾಡ್ ಮಿಂಟನ್ ರಾಕೆಟ್ ನಿರ್ಮಿಸುವ ಮೂಲಕ ದಿಲೀಪ್ ಈಗಾಲೇ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ತಮ್ಮ ಹೆಸರನ್ನು ಬರೆಸಿಕೊಂಡಿದ್ದಾರೆ. ಇದೀಗ ಅತೀ ಉದ್ದದ ಹಸ್ತ ಪ್ರತಿ ಕುರ್‌ಆನ್ ಮೂಲಕ ಮತ್ತೊಮ್ಮೆ ವಲ್ಡ್ ರೆಕಾರ್ಡ್‌ಗೆ ಮುಂದಾಗಿದ್ದಾರೆ. ಅವರ ದೀರ್ಘ ಕೈ ಬರಹದ ಕುರ್‌ಆನ್ ನ್ನು ಶಾರ್ಜಾ, ಯುಕೆ ಮತ್ತು ಇಸ್ತಾಂಬುಲ್‌ನಲ್ಲಿ ಪ್ರದರ್ಶಿಸಲಾಗುವುದು.
IslamKannada News Portal
