Home / ಲೇಖನಗಳು / ರಮಝಾನ್‌ ಅಂದರೇನೆಂದು ತಿಳಿಯ ಬಯಸುತ್ತೀರಾ?

ರಮಝಾನ್‌ ಅಂದರೇನೆಂದು ತಿಳಿಯ ಬಯಸುತ್ತೀರಾ?

ಉಪವಾಸ ಅಂದರೆ ತನ್ನ ಸಂಬಂಧವನ್ನು ತನ್ನ ಕುಟುಂಬ, ತನ್ನ ಸಮುದಾಯ ಮತ್ತು ದೇವರೊಂದಿಗೆ ಸುದೃಡಗೊಳಿಸುವುದು ಮತ್ತು ಬಳಪಡಿಸುವುದು.

ಪ್ರತಿಬಿಂಬಿಸುವ ತಿಂಗಳು
ರಮಝಾನ್‌ ತಿಂಗಳು ಮುಸ್ಲಿಮರಿಗೆ ಬಹಳ ಪವಿತ್ರವಾದ ತಿಂಗಳು. ಈ ತಿಂಗಳಿನಲ್ಲಿ ದೇವದೂತರಾದ ಜಿಬ್ರೀಲ್ ಪ್ರವಾದಿ ಮುಹಮ್ಮದ್ (ಸ ) ರನ್ನು ಭೇಟಿಯಾಗಿ ಅಂತಿಮ ಗ್ರಂಥವಾದ ಪವಿತ್ರ ಕುರ್‌ಆನ್ ಅವತೀರ್ಣಗೊಳಿಸಲು ಆರಂಭಿಸಿದ ತಿಂಗಳು. ಸತ್ಯವಿಶ್ವಾಸಿಗಳು ಪ್ರಾರ್ಥನೆ, ದಾನ, ಮತ್ತು ದೇವರೊಂದಿಗೆ ತಮ್ಮ ಸಂಬಂಧವನ್ನು ಬಲ ಪಡಿಸುವ ಮೂಲಕ ಇದನ್ನು ತೋರ್ಪಡಿಸುತ್ತಾರೆ.

ಕುರ್‌ಆನ್ ಹೇಳುತ್ತದೆ: ಮಾನವರಿಗೆ ಸಾದ್ಯಂತ ಸನ್ಮಾರ್ಗ, ಮಾರ್ಗದರ್ಶಕ ಮತ್ತು ಸತ್ಯಾಸತ್ಯಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಷಣಗಳನ್ನೊಳಗೊಂಡಿರುವ ‘ಕುರ್‌ಆನ್’ ಅವತೀರ್ಣಗೊಂಡ ತಿಂಗಳು ‘ರಮಝಾನ್’ ಆಗಿರುತ್ತದೆ. ಆದುದರಿಂದ ಯಾವನಾದರೂ ಈ ತಿಂಗಳನ್ನು ಹೊಂದಿದಾಗ ಅವನು ಆ ಸಂಪೂರ್ಣ ತಿಂಗಳ ಉಪವಾಸ ವ್ರತವನ್ನಾಚರಿಸಬೇಕು. (2-185)

ಉಪವಾಸ ರಮಝಾನ್‌ ತಿಂಗಳ ವೈಶಿಷ್ಟ್ಯ. ಉಪವಾಸಿಗರು ಸೂರ್ಯೋದಯದಿಂದ ಸೂರ್ಯಾಸ್ತಮದ ತನಕ ಆಹಾರ ಸೇವಿಸುವುದರಿಂದ, ಪಾನೀಯಗಳನ್ನು, ನೀರನ್ನು ಕುಡಿಯುದರಿಂದ, ಧೂಮಪಾನದಿಂದ, ಲೈಂಗಿಕ ಸಂಬಂಧಗಳಿಂದ ತಮ್ಮನ್ನು ತಡೆದಿರುತ್ತಾರೆ. ಪ್ರತಿದಿನ ಮುಂಜಾನೆ ಆಹಾರದೊಂದಿಗೆ (ಸುಹೂರ್) ಆರಂಭಗೊಳ್ಳುತ್ತದೆ ಮತ್ತು ಇಫ್ತಾರ್, ಉಪವಾಸ ಮುರಿಯುವ ಭೋಜನದೊಂದಿಗೆ ಕೊನೆಗೂಳ್ಳುತ್ತದೆ. ವಿಶ್ವಾಸಿಗರು ಪ್ರತಿ ರಾತ್ರಿ ತರಾವೀಹ್ ಎಂಬ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಇದನ್ನು ಮಸೀದಿ ಮತ್ತು ಮನೆಗಳಲ್ಲಿ ಸಾಮೂಹಿಕವಾಗಿ ನೆರವೇರಿಸುತ್ತಾರೆ. ಇದು ಈ ತಿಂಗಳ ವಿಶೇಷತೆ. ಅದೇ ರೀತಿ ರಾತ್ರಿಯ ಕೊನೆಯ ಹಂತದಲ್ಲಿ ವಿಶೇಷವಾದ ವೈಯಕ್ತಿಕ ನಮಾಝ್ ಗಳನ್ನು ಸಲ್ಲಿಸುತ್ತಾರೆ. ಹಗಲಿನ ಹೊತ್ತು ತಮ್ಮ ದೈನಂದಿನ ಕೆಲಸವನ್ನು ಮಾಡುತ್ತಿರುತ್ತಾರೆ. ಸಹೋದ್ಯೋಗಿಗಳು ವಿದ್ಯಾರ್ಥಿಗಳು ದಣಿದಿರುವುದರಿಂದ ಅವರೊಂದಿಗೆ ಸೌಮ್ಯವಾಗಿ ವರ್ತಿಸುತ್ತಾರೆ.

ಉಪವಾಸವು ಒಂದು ಸವಾಲಾಗಿದ್ದರು ಮರುಸಂಪರ್ಕಿಸಲು ಒಂದು ಅವಕಾಶವು ಹೌದು. ಹೊಟ್ಟೆ ಖಾಲಿಯಾಗಿರುವುದರಿಂದ ಆತ್ಮವು ಮರು ಸಂಸ್ಕರಿಸಲು ತಯಾರಾಗಿರುತ್ತದೆ. ಪ್ರತಿ ವರ್ಷ ರಮಝಾನ್‌ ಬಂದಾಗ ಮುಸ್ಲಿಮರು ತಮ್ಮ ಸಂಬಂಧಗಳನ್ನು ಸುದೃಡಗೊಳಿಸುತ್ತಾರೆ, ತಮ್ಮ, ಅಭ್ಯಾಸಗಳನ್ನು ತಿದ್ದಲು ಪ್ರಯತ್ನಿಸುತ್ತಾರೆ ಹಾಗೂ ಈ ತಿಂಗಳು ತಮ್ಮ ಹೃದಯವನ್ನು ಅವಲೋಕಿಸಿ ಅದನ್ನು ತಿದ್ದುವ ಅವಕಾಶವು ಸಿಗುತ್ತದೆ.
ಕುರ್‌ಆನ್ ಹೇಳುತ್ತದೆ :- *ಓ ಸತ್ಯವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದ್ದಂತೆಯೇ ನಿಮ್ಮ ಮೇಲೂ ಉಪವಾಸ ವ್ರತವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ಧರ್ಮನಿಷ್ಠೆಯ ಗುಣವಿಶೇಷವುಂಟಾಗುವುದೆಂದು ಆಶಿಸಲಾಗಿದೆ.”(2-183)

ಉಪವಾಸ 24 ಗಂಟೆಗಳ ತನಕ ಇರುತ್ತದೆಯೇ?
ಇಲ್ಲ. ಇದು ಸೂರ್ಯೋದಯದ ಮೊದಲಿಂದ ಆರಂಭಗೊಂಡು ಸೂರ್ಯಾಸ್ತಮದ ತನಕ ಇರುತ್ತದೆ. ಆದುದರಿಂದ ಇದರ ಸಮಯವು ಋತು ಮತ್ತು ಬೌಗೋಳಿಕ ಸ್ಥಳದೊಂದಿಗೆ ಬದಲಾಗುತ್ತದೆ. ರಮಝಾನನ್ನು ಚಂದ್ರಮಾನ ಕ್ಯಾಲೆಂಡರ್ ನ ಪ್ರಕಾರ ಆರಂಭಿಸಲಾಗುತ್ತದೆ. ಆದ್ದರಿಂದ ಪ್ರತಿ ವರ್ಷ ಸುಮಾರು 11 ದಿನಗಳ ವ್ಯತ್ಯಾಸ ಇರುತ್ತದೆ. ನಿಖರವಾದ ದಿನವನ್ನು ತಿಂಗಳ ಮೊದಲ ಚಂದ್ರದರ್ಶನದಿಂದ ಆರಂಭ ಮಾಡಲಾಗುತ್ತದೆ.

ಹಾಗಾದರೆ ದೀರ್ಘ ಅಥವಾ ಕಡಿಮೆ ದಿನಗಳಲ್ಲಿರುವ ಜನರು ಹೇಗೆ ಆಚರಿಸುತ್ತಾರೆ?
ಅವರಿಗೂ ಅದೇ ಕಾನೂನು ಅನ್ವಯವಾಗುತ್ತದೆ. ಸೂರ್ಯೋದಯ ಮತ್ತು ಸೂರ್ಯಸ್ತಮಾನ. ಕೆಲವು ಪ್ರದೇಶಗಳಲ್ಲಿ 10-20 ಗಂಟೆಗಳ ಉಪವಾಸವಿರುವುದು.

ಉಪವಾಸಿಗರಿಗೆ ಹಗಲಿನ ಹೊತ್ತು ತಿನ್ನುವ ಅಥವಾ ನೀರು ಕುಡಿಯುವ ಅವಕಾಶ ಇದೆಯೇ?
ಉಪವಾಸಿಗನಿಗೆ ಎಲ್ಲ ರೀತಿಯ ಆಹಾರ ಪಾನೀಯ ಹಗಲಿನ ಸಮಯ ನಿಷಿದ್ಧ. ನೀರು, ಔಷಧಿ, ಕೇಫಿನ್, ಸಿಗರೇಟ್ ಕೂಡ ಒಳಗೊಂಡಿರುತ್ತದೆ.

ಯಾರಾದರು ಅನಾರೋಗ್ಯದಿಂದಿದ್ದರೆ ಅಥವಾ ಔಷದಿಯ ಅಗತ್ಯವಿದ್ದರೆ ಏನು ಮಾಡಬೇಕು?
ರೋಗಿಗಳಿಗೆ ಅನೇಕ ರಿಯಾಯಿತಿಗಳಿವೆ. ದೀರ್ಘಕಾಲದ ಕಾಯಿಲೆ ಇರುವವರು ಅಥವಾ ನಿಯಮಿತ ಡೋಸ್ ಔಷಧ ತಗೆಯುವವರಿಗೆ ಉಪವಾಸ ಹಿಡಿಯುವ ಅಗತ್ಯವಿಲ್ಲ. ಉಪವಾಸ ಆಚರಿಸಲು ಕಷ್ಟ ಆಗುವವರ ಬಗ್ಗೆ ಕುರ್‌ಆನ್ ಹೀಗೆ ಹೇಳುತ್ತದೆ : “ಯಾವನಾದರೂ ರೋಗಿಯಾಗಿದ್ದರೆ ಅಥವಾ ಪ್ರಯಾಣಿಕನಾಗಿದ್ದರೆ ಆತನು ಇತರ ದಿನಗಳಲ್ಲಿ ಉಪವಾಸ ದಿನಗಳ ಸಂಖ್ಯೆಯನ್ನು ಪೂರ್ತಿಗೊಳಿಸಬೇಕು. ಅಲ್ಲಾಹ್ ನಿಮಗೆ ಸೌಲಭ್ಯವನ್ನೀಯಲು ಬಯಸುತ್ತಾನೆ; ನಿಮ್ಮನ್ನು ಕಷ್ಟಕ್ಕೀಡು ಮಾಡಲು ಇಚ್ಛಿಸುವುದಿಲ್ಲ. “(2-185)

ಬೇರೆ ಯಾರಿಗಾದರೂ ಉಪವಾಸದಿಂದ ವಿನಾಯಿತಿ ಇದೆಯೆ?
ಹೌದು, ಪ್ರೌಢವಸ್ಥೆಯನ್ನು ತಲುಪದ ಮಕ್ಕಳು ಉಪವಾಸ ಆಚರಿಸುವ ಅಗತ್ಯವಿಲ್ಲ. ಆದರೂ ಕೆಲವರು ಅಭ್ಯಾಸ ಮಾಡಲು ಮತ್ತು ರಮಝಾನ್‌ ತಿಂಗಳ ಚಟುವಟಿಕೆಗಳಲ್ಲಿ ಭಾಗಿಯಾಗಲು ಉಪಾಸವನ್ನು ಆಚರಿಸುತ್ತಾರೆ. ಗರ್ಭಿಣಿಯರು, ಶುಶ್ರೂಸ ತಾಯಂದಿರು, ಪ್ರಯಾಣಿಕರಿಗೆ ರಿಯಾಯಿತಿ ಇದೆ. ಆದರೆ ನಂತರದ ದಿನಗಳಲ್ಲಿ ಅದನ್ನು ಪೂರ್ಣಗೊಳಿಸಬೇಕು.

ನಾನು ನನ್ನ ಮುಸ್ಲಿಮ್ ಸ್ನೇಹಿತರನ್ನು ಬೆಂಬಲಿಸಲು ಮುಸ್ಲಿಮೇತರನಾಗಿ ಊಪವಾಸವನ್ನು ಆಚರಿಸಬಹುದೇ?
ಖಂಡಿತವಾಗಿಯೂ ಅವಕಾಶ ಇದೆ. ಉಪವಾಸ ಆಚರಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಸಮಯವನ್ನು ನೋಡಿ. ಶಕ್ತಿಗಾಗಿ ಆರೋಗ್ಯಕರ ಮತ್ತು ಹೈಡ್ರೆಟಿಂಗ್ ಸುಹೂರನ್ನು ತಿನ್ನಲು ಮರೆಯದಿರಿ.

ರಮಝಾನ್‌ ತಿಂಗಳಲ್ಲಿ ತಿನ್ನುವ ಯಾವುದಾದರು ವಿಶೇಷ ಆಹಾರಗಳಿವೆಯೆ?
ಜಗತ್ತಿನೆಲ್ಲ ರಾಷ್ಟ್ರಗಳಲ್ಲಿ ಅವರದೇ ಆದ ಸಂಸ್ಕೃತಿ ಮತ್ತು ವೈವಿದ್ಯತೆಗಳಿವೆ. ಆದ್ದರಿಂದ ಭಕ್ಷ್ಯಗಳಲ್ಲೂ ವೈವಿದ್ಯತೆ ಇದೆ. ಆದರೆ ಗರಿಷ್ಟ ಮುಸ್ಲಿಮರು ಪ್ರವಾದಿ ಮುಹಮ್ಮದ್ (ಸ) ಚರ್ಯೆಯನ್ನು ಆಚರಿಸುತ್ತಾ, ಖರ್ಜುರ, ಹಾಲು, ಮತ್ತು ನೀರಿನಿಂದ ಉಪವಾಸವನ್ನು ತೊರೆಯುತ್ತಾರೆ. ಮಗ್ರಿಬ್ ನಮಾಝಿನ ನಂತರ ಆರೋಗ್ಯಕರವಾದ ಆಹಾರವನ್ನು ಸೇವಿಸುತ್ತಾರೆ.

ಉಪವಾಸದಿಂದ ಮುಸ್ಲಿಮರು ಏನನ್ನು ಆಶಿಸುತ್ತಾರೆ?
ಉಪವಾಸದ ಮುಖ್ಯ ಗುರಿಯನ್ನು ಕುರ್‌ಆನ್ ತಿಳಿಸುತ್ತದೆ. “ಓ ಸತ್ಯವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದ್ದಂತೆಯೇ ನಿಮ್ಮ ಮೇಲೂ ಉಪವಾಸ ವ್ರತವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ಧರ್ಮನಿಷ್ಠೆಯ ಗುಣವಿಶೇಷವುಂಟಾಗುವುದೆಂದು ಆಶಿಸಲಾಗಿದೆ.”(2-183)

ಉಪವಾಸವೂ ಅಲ್ಲಾಹನನ್ನು ನೆನಪಿಸಲು ಸಹಕರಿಸುತ್ತದೆ. ಮೂಲಭೂತ ಅವಶ್ಯಕತೆಗಳಾಗಿರುವ ಅನ್ನ ಪಾನಿಯವನ್ನು ತೊರೆದು ಹಸಿವಿನಿಂದ ಇದ್ದು, ಮಾನವರು ಅಲ್ಲಾಹನ ಅವಲಂಬಿತರು ಎಂದು ನೆನಪಿಸುತ್ತದೆ. ಅಲ್ಲಾಹನು ದಯಪಾಲಿಸಿರುವ ಎಲ್ಲ ಅನುಗ್ರಹಗಳಿಗೆ ಕೃತಜ್ಞತೆ ಸಲ್ಲಿಸುವ ಅಭ್ಯಾಸವು ಉಂಟಾಗುತ್ತದೆ. ಬಡಬಗ್ಗರ ಬಗ್ಗೆ ಸಹಾನುಭಾತಿಯನ್ನುಂಟು ಮಾಡುತ್ತದೆ. ಅನೇಕ ಮುಸ್ಲಿಮರು ದಾನ ಧರ್ಮದಲ್ಲಿ ಹಣವನ್ನು ಖರ್ಚು ಮಾಡುತ್ತಾರೆ ಮತ್ತು ತಮ್ಮ ಸಮಯವನ್ನು ಸ್ವಯಂ ಸೇವಕರಾಗಿ ಕಳೆಯುತ್ತಾರೆ. ಈ ತಿಂಗಳು ಮುಸ್ಲಿಮರ ದೈನಂದಿನ ಜೀವನದಲ್ಲಿ ಆಧ್ಯಾತ್ಮಿಕ ಬೆಳವಣಿಗೆ, ಧರ್ಮನಿಷ್ಠೆ, ಉದಾರತೆ, ಸಂತ್ರಪ್ತಿಯನ್ನು ಹೆಚ್ಚಿಸಲು ಸಹಕರಿಸುತ್ತದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …