Home / ವಾರ್ತೆಗಳು / ಮದೀನಾದಲ್ಲಿರುವ ಭಾರತೀಯ ಹಜ್ ಯಾತ್ರಿಕರು ಇನ್ನು ಎಂಟು ದಿನಗಳಲ್ಲಿ ಮಕ್ಕಾಕ್ಕೆ

ಮದೀನಾದಲ್ಲಿರುವ ಭಾರತೀಯ ಹಜ್ ಯಾತ್ರಿಕರು ಇನ್ನು ಎಂಟು ದಿನಗಳಲ್ಲಿ ಮಕ್ಕಾಕ್ಕೆ

ಭಾರತದಿಂದ ಹಜ್ ಯಾತ್ರೆಗಾಗಿ ಈ ವರೆಗೆ ತೆರಳಿದವರು ಮದೀನಾದಲ್ಲಿ ತಂಗಿದ್ದು, ಇನ್ನು ಮುಂದೆ ಹಜ್ ಗೆ ಪ್ರಯಾಣಿಸುವವರು ನೇರವಾಗಿ ಮಕ್ಕಾದಲ್ಲಿ ತಂಗಲಿದ್ದಾರೆ.
ಮದೀನಾದಲ್ಲಿ ತಂಗಿದವರು ಇನ್ನು 8 ದಿನಗಳ ಬಳಿಕ ಮಕ್ಕಕ್ಕೆ ಬರಲಿದ್ದಾರೆ.

ಭಾರತದಿಂದ ಆಗಮಿಸಿದ 3416 ಮಂದಿ ಹಜ್ ಯಾತ್ರಿಕರು ಮದೀನಾದಲ್ಲಿದ್ದಾರೆ. ಇವರೆಲ್ಲ ಎಂಟು ದಿನ ಮದೀನಾದಲ್ಲಿ ದಿನ ಕಳೆದು ಮಕ್ಕಕೆ ಬರುತ್ತಾರೆ. ಈ ಸಂದರ್ಭದಲ್ಲಿ ಮಕ್ಕಾದಲ್ಲಿ 93,360 ಮಂದಿ ಬಂದಿಳಿದಿರುತ್ತಾರೆ.

ಈಗಾಗಲೇ ಲಕ್ಷದ್ವೀಪದಿಂದ ಬಂದ ಹಜ್ ಯಾತ್ರಾರ್ತಿಗಳ ತಂಡ ಮಕ್ಕಾದಲ್ಲಿ ಇಳಿದು ಉಮ್ರಾ ಮಾಡಿದೆ. ಲಕ್ಷ ದ್ವೀಪದಿಂದ ಒಟ್ಟು 164 ಮಂದಿ ಹಜ್ ಯಾತ್ರಾರ್ತಿಗಳು ಮಕ್ಕಾಕ್ಕೆ ಬರಲಿದ್ದಾರೆ. ಇವರೆಲ್ಲ ಹಜ್ ಬಳಿಕ ಮದೀನಾಕ್ಕೆ ಭೇಟಿ ನೀಡಿ ಅಲ್ಲಿಂದ ನೇರವಾಗಿ ಭಾರತಕ್ಕೆ ಮರಳಲಿದ್ದಾರೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …