Home / ಪ್ರಶ್ನೋತ್ತರ / ಹೆಣ್ಣಿನ ಅನುಮತಿ ಅಥವಾ ಸಮತಿಯಿಲ್ಲದೆ ಅವಳನ್ನು ವಿವಾಹ ಮಾಡಿಕೊಡಲು ಪೋಷಕರಿಗೆ ಇಸ್ಲಾಮ್ ಅನುಮತಿ ನೀಡುತ್ತದೆ ಎಂಬ ವಿಷಯ ನಿಜವೇ?

ಹೆಣ್ಣಿನ ಅನುಮತಿ ಅಥವಾ ಸಮತಿಯಿಲ್ಲದೆ ಅವಳನ್ನು ವಿವಾಹ ಮಾಡಿಕೊಡಲು ಪೋಷಕರಿಗೆ ಇಸ್ಲಾಮ್ ಅನುಮತಿ ನೀಡುತ್ತದೆ ಎಂಬ ವಿಷಯ ನಿಜವೇ?

ನಿಜವಲ್ಲ. ಸ್ತ್ರೀಯ ಒಪ್ಪಿಗೆಯಿಲ್ಲದೆ ವಿವಾಹ ಮಾಡಿಕೊಡಲು ಇಸ್ಲಾಮ್ ಅನುಮತಿ ನೀಡುವುದಿಲ್ಲ: ಅಥವಾ ಅಂತಹ ವಿವಾಹ ನಡೆದರೆ ಅದನ್ನು ಒಪ್ಪಿಕೊಳ್ಳದೇ ನಿರಾಕರಿಸುವ ಹಕ್ಕು ಆಕೆಗೆ ಇದೆ.

ಪ್ರವಾದಿವರ್ಯರು ಹೇಳುತ್ತಾರೆ: ‘ಕನ್ಯೆಯಲ್ಲದ ಸ್ತ್ರೀಗೆ ತನ್ನ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳಲು, ಪೋಷಕರಿಗಿಂತ ಹೆಚ್ಚಿನ ಹಕ್ಕು ಇದೆ. ಕನ್ಯೆಯನ್ನು ವಿವಾಹ ಮಾಡಿ ಕೊಡಲು ಅವಳ ಅನುಮತಿಯನ್ನು ಕೇಳಬೇಕು. ಅವಳು ಮೌನಿಯಾಗಿದ್ದರೆ ಅದನ್ನು ಒಪ್ಪಿಗೆಯೆಂದು ಪರಿಗಣಿಸಬೇಕು.’ (ಮುಸ್ಲಿಮ್, ತಿರ್ಮಿದಿ, ಅಬೂದಾವೂದ್, ನಸಾಈ)

ಒಮ್ಮೆ ಓರ್ವ ಹುಡುಗಿ ಪ್ರವಾದಿಯವರ ಬಳಿಗೆ ಬಂದು, ನನ್ನ ತಂದೆ ನನ್ನ ಒಪ್ಪಿಗೆಯಿಲ್ಲದ ಓರ್ವನೊಂದಿಗೆ ವಿವಾಹ ಮಾಡಲು ಒತ್ತಾಯಿಸುತ್ತಿದ್ದಾರೆಂದು ದೂರಿದಳು. ಆಗ ಆಕೆಯ ಇಷ್ಟದಂತೆ ಮಾಡಲು ಪ್ರವಾದಿಯವರು ಅನುಮತಿ ನೀಡಿದರು.

ಓರ್ವ ಯುವತಿ ಪ್ರವಾದಿ(ಸ)ರ ಬಳಿಗೆ ಬಂದು ಹೇಳಿದಳು: “”ನನ್ನ ತಂದೆಯು ತಮ್ಮ ಸಹೋದರ ಪುತ್ರನೊಂದಿಗೆ, ನನ್ನ ಮೂಲಕ ಆತನ ಕುಂದುಕೊರತೆಗಳ ಪರಿಹಾರಕ್ಕಾಗಿ ನನ್ನ ವಿವಾಹವನ್ನು ಮಾಡಿದ್ದಾರೆ. ಆಗ ಪ್ರವಾದಿವರ್ಯರು ವಿಷಯವನ್ನು ತೀರ್ಮಾನಿಸುವ ಅಧಿಕಾರವನ್ನು ಆಕೆಗೆ ನೀಡಿದರು. ಆಗ ಆ ಯುವತಿ ಹೇಳಿದಳು: ತಂದೆಯ ಕೃತ್ಯವನ್ನು ನಾನು ಒಪ್ಪಿಕೊಂಡಿದ್ದೇನೆ. ಆದರೆ ಈ ವಿಷಯದಲ್ಲಿ ತಂದೆಯಂದಿರಿಗೆ ಯಾವುದೇ ಅಧಿಕಾರವಿಲ್ಲವೆಂದು ಇತರ ಮಹಿಳೆಯರಿಗೆ ತಿಳಿಯಪಡಿಸುವುದೇ ನನ್ನ ಉದ್ದೇಶವಾಗಿತ್ತು.” ವಿವಾಹದ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವ ಹಕ್ಕು ಮತ್ತು ಸ್ವಾತಂತ್ರ್ಯ ಮಹಿಳೆಯರದ್ದೆಂದು ಇದರಿಂದ ಸ್ಪಷ್ಟವಾಗುತ್ತದೆ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *