Home / ಪ್ರಶ್ನೋತ್ತರ / ಮಹಿಳೆಯರಿಗೆ ವಾರೀಸು ಹಕ್ಕಿನಲ್ಲಿ ಪುರುಷರಿಗಿಂತ ಅರ್ಧಪಾಲು ದೊರೆಯುತ್ತದೆ. ಇದು ಅನ್ಯಾಯವೂ ಅಸಮಾನತೆಯೂ ಅಲ್ಲವೇ?

ಮಹಿಳೆಯರಿಗೆ ವಾರೀಸು ಹಕ್ಕಿನಲ್ಲಿ ಪುರುಷರಿಗಿಂತ ಅರ್ಧಪಾಲು ದೊರೆಯುತ್ತದೆ. ಇದು ಅನ್ಯಾಯವೂ ಅಸಮಾನತೆಯೂ ಅಲ್ಲವೇ?

ಇಸ್ಲಾಮೀ ಕಾನೂನಿನಂತೆ ಮಹಿಳೆಗೆ ಯಾವುದೇ ಸಂದರ್ಭದಲ್ಲಿ ಆರ್ಥಿಕ ಹೊಣೆಗಾರಿಕೆಯಿಲ್ಲ, ಹಕ್ಕುಗಳು ಮಾತ್ರ ಇದೆ. ಎಲ್ಲಾ ಹೊಣೆಗಾರಿಕೆಗಳು ಯಾವುದೇ ಪರಿಸ್ಥಿತಿಯಲ್ಲೂ ಪುರುಷರಿಗೆ ಮಾತ್ರ ಇದೆ. ವಿವಾಹದ ವೇಳೆಯಲ್ಲಿ ವರ ಮತ್ತು ವಧುವಿನ ವಸ್ತ್ರಗಳೂ ಸೇರಿದಂತೆ ಎಲ್ಲವುಗಳ ಖರ್ಚುನ್ನು ಪುರುಷನೇ ಭರಿಸಬೇಕು. ಅದರೊಂದಿಗೆ ವಧುವಿಗೆ ಕಡ್ಡಾಯವಾಗಿ ವಧು ದಕ್ಷಿಣೆ(ಮಹ್ರ್) ನೀಡಬೇಕು. ಬಳಿಕ ಪತ್ನಿ ಮತ್ತು ಮಕ್ಕಳನ್ನು ಪೋಷಿಸುವ ಜವಾಬ್ದಾರಿ ಸಂಪೂರ್ಣವಾಗಿ ಪುರುಷನಿಗಿದೆ. ಪತಿ-ಪತ್ನಿಯರೀರ್ವರೂ ಒಂದೇ ವರಮಾನವಿರುವ ವೈದ್ಯರೋ, ಶಿಕ್ಷಕರೋ ಆಗಿದ್ದರೂ ಪರವಾಗಿಲ್ಲ, ಮಹಿಳೆ ತನ್ನನ್ನೂ ಸೇರಿದಂತೆ ಯಾರ ಆರ್ಥಿಕ ಹೊಣೆಯನ್ನೂ ವಹಿಸಬೇಕಾಗಿಲ್ಲ. ಉದ್ಯೋಗಸ್ಥೆಯಾದ ಪತ್ನಿಯ ಆಹಾರ, ವಸ್ತ್ರ, ಚಿಕಿತ್ಸೆಯೂ ಸೇರಿದಂತೆ ಎಲ್ಲವನ್ನೂ ಪುರುಷನೇ ನೋಡಿಕೊಳ್ಳಬೇಕಾಗುತ್ತದೆ. ಅಥವಾ ಪತಿ ಮರಣ ಹೊಂದಿದರೆ ಆತನಿಗೆ ಆಸ್ತಿ ಇಲ್ಲದಿದ್ದರೆ ಆತನ ಅನಾಥ ಮಕ್ಕಳ ಸಂರಕ್ಷಣೆಯನ್ನು ತಂದೆ, ಸಹೋದರರರು, ಸಹೋದರರ ಮಕ್ಕಳು, ಪಿತೃ ಸಹೋದರರು ವಹಿಸಬೇಕು. ಮರಣ ಹೊಂದಿದ ವ್ಯಕ್ತಿಗೆ ಮಕ್ಕಳಿಲ್ಲದಿದ್ದರೆ ಆತನ ಆಸ್ತಿಯಲ್ಲಿ ಪತ್ನಿಗೂ ಪಾಲು ಇದೆ. ಮಹಿಳೆ ವಿವಾಹಿತೆಯಾದರೆ ಪತಿ, ಅವಿವಾಹಿತೆಯಾಗಿದ್ದರೆ ತಂದೆ, ತಂದೆಯಿಲ್ಲದಿದ್ದರೆ ಸಹೋದರರು ಆಕೆಯ ಪೋಷಣೆ ಮಾಡಬೇಕು. ತಾಯಿಯನ್ನು ನೋಡಿಕೊಳ್ಳಬೇಕಾದುದು ಮಕ್ಕಳ ಕರ್ತವ್ಯವಾಗಿದೆ.

ಆದ್ದರಿಂದ ಯಾವುದೇ ಪರಿಸ್ಥಿತಿಯ ಆರ್ಥಿಕ ಜವಾಬ್ದಾರಿಯನ್ನು ಇಸ್ಲಾಮೀ ಕಾನೂನು ಮಹಿಳೆಯರಿಗೆ ನೀಡಿಲ್ಲ. ಪರಸ್ಪರ ಸಂಬಂಧ, ಪ್ರೀತಿ, ಸ್ನೇಹದ ಕಾರಣದಿಂದ ಆಕೆ ತನ್ನ ಹಣವನ್ನು ವ್ಯಯಿಸುವುದಾದರೆ ಅದು ಬೇರೆ ವಿಷಯ. ಹೀಗಿದ್ದರೂ ಇಸ್ಲಾಮ್ ಮಹಿಳೆಗೆ ವಾರೀಸು ಹಕ್ಕು, ವಧುದಕ್ಷಿಣೆಯನ್ನು ಆಕೆಯ ಸ್ಥಾನಮಾನ ಹಾಗೂ ಸುರಕ್ಷತೆಯನ್ನು ಖಾತ್ರಿಪಡಿಸಲು ಕಡ್ಡಾಯಗೊಳಿಸಿದೆ. ತನ್ನ ಆಸ್ತಿಯನ್ನು ಕಾಪಾಡಲು, ನೋಡಿಕೊಳ್ಳಲು, ಹೆಚ್ಚಿಸಲು ಮಹಿಳೆಗೆ ಸ್ವಾತಂತ್ರ್ಯವಿದೆ. ತಾಯಿ, ಮಗಳು, ಪತ್ನಿ, ಸಹೋದರಿ… ಹೀಗೆ ಎಲ್ಲಾ ಹಂತದಲ್ಲೂ ಸಂಪೂರ್ಣ ಸುರಕ್ಷಿತತೆಯನ್ನು ಖಾತ್ರಿಪಡಿಸಿದ ಬಳಿಕವೂ, ಲೌಕಿಕ ಬೇಡಿಕೆಯಂತೆ ಆಸ್ತಿಯ ಅಗತ್ಯವಿಲ್ಲದಿದ್ದರೂ ಇಸ್ಲಾಮ್ ಮಹಿಳೆಯರಿಗೆ ಅದನ್ನು ನೀಡಿದ್ದು ಮಹಿಳೆಯ ಸ್ಥಾನಮಾನ, ಹಾಗೂ ಗೌರವಕ್ಕೆ ಯಾವುದೇ ರೀತಿಯ ಚ್ಯುತಿ ಬರಬಾರದೆಂಬ ಕಾರಣದಿಂದ ಮಾತ್ರ.

 

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *