ಟೆಲ್ಆವಿವ್, ಅ. 25: ಝಿಯೊನಿಸ್ಟ್ ಸೈನಿಕರು ಮತ್ತು ಝಿಯೋನಿಸ್ಟ್ ಉಗ್ರವಾದಿಗಳು ಮುಸ್ಲಿಮರ ಮೊದಲ ಕಿಬ್ಲಾ ಮಸ್ಚಿದುಲ್ ಅಕ್ಸಾದ ಮೇಲೆ ದಾಳಿ ಮಾಡಿದ ಘಟನೆಯನ್ನು ಉದ್ಧರಿಸಿ ಇಸ್ರೇಲ್ ಮತ್ತು ಝಿಯೊನಿಸ್ಟ್ ವಾದಿಗಳು ಪವಿತ್ರ ಸ್ಥಳವನ್ನು ಅಪಮಾನಿಸುವ ಕಾರ್ಯವನ್ನು ಮತ್ತೊಮ್ಮೆ ಮಾಡಿದೆ ಎಂದು ಫೆಲೆಸ್ತೀನಿ ಮೂಲಗಳು ತಿಳಿಸಿವೆ.
ಮಸ್ಚಿದುಲ್ ಅಕ್ಸಾ ಮತ್ತು ಬೈತುಲ್ ಮುಕದ್ದಸ್ಗೂ ಯಹೂದಿಗಳ ಧರ್ಮ ಪರಂಪರೆಗೂ ಯಾವುದೇ ಸಂಬಂಧವಿಲ್ಲ. ಇದನ್ನು ಯುನೆಸ್ಕೊ ಕೂಡ ಎತ್ತಿ ಹಿಡಿದಿತ್ತು. ಅದು 2016ರಲ್ಲಿ ಯುನೆಸ್ಕೊ ಸಂರಕ್ಷಿತ ಸ್ಥಳ ಎಂದು ಘೋಷಿಸಿತ್ತು ಮತ್ತು ಈ ಪವಿತ್ರ ಸ್ಥಳಗಳಿಗೂ ಯಹೂದಿಯರ ಇತಿಹಾಸದೊಂದಿಗೆ ಯಾವುದೇ ಧಾರ್ಮಿಕ ಸಾಂಸ್ಕøತಿಕ ಸಂಬಂಧ ಇಲ್ಲ ಎಂದು ಅದು ತಿಳಿಸಿತ್ತು.
IslamKannada News Portal
