ಇತ್ತೀಚಿಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿದ, ಕಲ್ಲಡ್ಕದ ನಿಶಾಂತ್‌ನನ್ನು ಬದುಕಿಸಲು, ಸ್ವಂತ ಜೀವವನ್ನೇ ಪಣಕ್ಕಿಟ್ಟು ನೀರಿಗೆ ಹಾರಿ ಹರಸಾಹಸಪಟ್ಟ ಗೂಡಿನ ಬಳಿಯ ತೌಸೀಫ್, ಸಮೀರ್, ಮುಹಮ್ಮದ್, ಝಾಹಿದ್, ಅಕ್ಕರಂಗಡಿಯ ಆರಿಫ್ ಮತ್ತು ಮುಖ್ತಾರ್‌ರ ನಿವಾಸಗಳಿಗೆ ಭೇಟಿ ನೀಡಿದ ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಜಿಲ್ಲಾ ಸಮಿತಿ ಪ್ರತಿಯೊಬ್ಬರನ್ನೂ ಅಭಿನಂದಿಸಿತು.
ಬಳಿಕ ಎಲ್ಲ ಜೀವರಕ್ಷಕ ಹೋರಾಟಗಾರರಿಗೆ ಬೋಳಂಗಡಿ ಜುಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಲ್ ಮತ್ತು ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಜಿಲ್ಲಾ ಸಾರ್ವಜನಿಕ ಸಂಪರ್ಕ ಸಂಚಾಲಕರಾದ ಅಮೀನ್ ಅಹ್ಸನ್‌ರ ನೇತೃತ್ವದ ನಿಯೋಗ ಪ್ರತಿಯೊಬ್ಬರಿಗೂ ಗೌರವ ಧನ ನೀಡಿ ಸನ್ಮಾನಿಸಲಾಯಿತು.
ಜಾತಿಮತ ಬೇಧವಿಲ್ಲದೆ ಸದಾ ಸಮಾಜ ಸೇವೆಯಲ್ಲಿ ನಿರತರಾಗಿ, ಅಲ್ಲಾಹನ ಧರ್ಮದ ಸಾಕ್ಷಿಗಳಾಗಬೇಕೆಂದು ಯಹ್ಯಾ ತಂಙಲ್‌ರವರು ಸಂದರ್ಭೋಚಿತ ಉಪದೇಶ ನೀಡಿದರು.
ತದನಂತರ ಕಲ್ಲಡ್ಕದ ಬಾಡಿಗೆ ಮನೆಯಲ್ಲಿ ಬಹಳ ಕಷ್ಟದ ಬದುಕು ಸವೆಸುತ್ತಿರುವ ನಿಶಾಂತ್ ಕುಟುಂಬವನ್ನೂ ಸಂದರ್ಶಿಸಿದ ನಿಯೋಗ, ಮೃತನ ಕುಟುಂಬಕ್ಕೂ ಸಾಂತ್ವನ ಹೇಳಿ, ಗೌರವ ಧನ ನೀಡಿ ಸಂತೈಸಲಾಯಿತು.
ನಿಯೋಗದಲ್ಲಿ ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಸದಸ್ಯರಾದ ಮುಹಮ್ಮದ್ ಮುಹ್ಸಿನ್, ಪಾಣೆಮಂಗಳೂರು ಜಮಾಅತ್‌ನ ಸ್ಥಾನೀಯ ಅಧ್ಯಕ್ಷರಾದ ಮುಖ್ತಾರ್ ಅಹ್ಮದ್, ಮುಹಮ್ಮದ್ ಮೆಡಿಕಲ್ ಬೋಳಂಗಡಿ, ಅಬ್ದುಶ್ಶುಕೂರ್ ಬೋಳಂಗಡಿ, ಮುಸ್ತಫಾ ಬೋಳಂಗಡಿ, ನೇತ್ರಾವತಿ ವೀರ ಅಬ್ದುಲ್ ಸತ್ತಾರ್ ಗೂಡಿನಬಳಿ, ಆದಮ್ ಸಾಬ್ ಅಕ್ಕರಂಗಡಿ, ರಿಝ್ವಾನ್ ಬೋಳಂಗಡಿ, ಶಂಶೀರ್ ಮೆಲ್ಕಾರ್, ತಮೀಝ್ ಕಾರಾಜೆ, ಜಮಾಅತೆ ಇಸ್ಲಾಮೀ ಕಲ್ಲಡ್ಕ ಶಾಖೆಯ ಸದಸ್ಯರಾದ ಇಮಾರತ್ ಅಲಿ ಮುಂತಾದವರು ಉಪಸ್ಥಿತರಿದ್ದರು.
IslamKannada News Portal
