Home / ವಾರ್ತೆಗಳು / ‘ಮಸ್ಜಿದುಲ್ ಕಿಬ್ ಲತೈನ್’ ನವೀಕರಣ ಕಾರ್ಯ ಪೂರ್ಣ; ಈ ಮಸೀದಿಯ ಹಿನ್ನೆಲೆಯೇನು??

‘ಮಸ್ಜಿದುಲ್ ಕಿಬ್ ಲತೈನ್’ ನವೀಕರಣ ಕಾರ್ಯ ಪೂರ್ಣ; ಈ ಮಸೀದಿಯ ಹಿನ್ನೆಲೆಯೇನು??

ಮದೀನಾದ ಐತಿಹಾಸಿಕ ಮಸ್ಜಿದುಲ್ ಕಿಬ್ ಲತೈನ್ ನ ಜೀರ್ಣೋದ್ಧಾರ ಕಾರ್ಯ ಪೂರ್ತಿಗೊಂಡಿದೆ. ಈ ಮಸೀದಿ ತನ್ನ ಐತಿಹಾಸಿಕ ಹಿನ್ನೆಲೆಯಿಂದ ಭಾರಿ ಮಹತ್ವವನ್ನು ಪಡೆದಿದೆ.

ಕಿಬ್ ಲ ಅಥವಾ ನಮಾಜ್ ನ ದಿಕ್ಕನ್ನು ಮಸ್ಜಿದುಲ್ ಅಕ್ಸದಿಂದ ಮಕ್ಕಾದ ಕಡೆಗೆ ತಿರುಗಿಸುವ ಆದೇಶವು ಪ್ರವಾದಿಯವರಿಗೆ ಬಂದಿರುವುದು ಇದೇ ಮಸೀದಿಯಲ್ಲಾಗಿದ್ದು, ಇಲ್ಲಿ ಎರಡು ಕಿಬ್ ಲಗಳಿವೆ.

1987ರಲ್ಲಿ ದೊರೆ ಫಹದ್ ಮೊದಲ ಬಾರಿ ಇದರ ಜೀರ್ಣೋದ್ದಾರ ಕಾರ್ಯ ಮಾಡಿದ್ದರು ಮತ್ತು ಆ ಸಂದರ್ಭದಲ್ಲಿ ಕೆಲವು ಮಾರ್ಪಾಡುಗಳನ್ನು ಕೂಡ ಮಾಡಿದ್ದರು.

ಸಾಮಾನ್ಯವಾಗಿ ಯಾವುದೇ ಮಸೀದಿಯಲ್ಲಿ ಎರಡು ಕಿಬ್ ಲ ಇರುವುದಿಲ್ಲ. ಆದರೆ ಪ್ರವಾದಿಯವರು ಜೆರುಸಲೇಮ್ ನ ಮಸ್ಜಿದುಲ್ ಅಕ್ಸದ ಕಡೆಗೆ ನಮಾಜ್ ಮಾಡುತ್ತಿದ್ದಾಗ ಅಲ್ಲಾಹನಿಂದ ಅವರಿಗೆ ಕಿಬ್ ಲ ಬದಲಾಯಿಸುವ ಆದೇಶ ಬಂತು ಎಂದು ಇಸ್ಲಾಮಿ ಇತಿಹಾಸ ಹೇಳುತ್ತದೆ.

ಆದ್ದರಿಂದ ಅವರು ಮಸ್ಜಿದುಲ್ ಅಕ್ಸದ ಕಡೆಯಿಂದ ಮಕ್ಕಾದ ಮಸ್ಜಿದುಲ್ ಹರಾಮ್ ನ ಕಡೆಗೆ ತಮ್ಮ ಮುಖವನ್ನು ನಮಾಜಿನ ನಡುವೆ ತಿರುಗಿಸುತ್ತಾರೆ. ಆ ಕಾರಣಕ್ಕಾಗಿ ಈ ಮಸೀದಿಗೆ ಮಸ್ಜಿದುಲ್ ಕಿಬ್ ಲತೈನ್ ಎಂಬ ಹೆಸರಿದೆ. ಅಂದರೆ ಎರಡು ಕಿಬ್ ಲ ಇರುವ ಮಸೀದಿ ಎಂದು ಅರ್ಥ. ಇದೀಗ ಇದರ ಐತಿಹಾಸಿಕ ಮಹತ್ವವನ್ನು ಹಾಗೆಯೇ ಉಳಿಸುತ್ತಲೇ ಅದರ ಜೀರ್ಣೋದ್ಧಾರ ಕಾರ್ಯ ಮುಗಿದಿದೆ ಎಂದು ವರದಿಯಾಗಿದೆ.

SHARE THIS POST VIA

About editor

Check Also

ಅಂತಾರಾಷ್ಟ್ರೀಯ ಕುರ್ ಆನ್ ಸ್ಪರ್ಧೆ ಮುಕ್ತಾಯ; ವಿಜೇತರಾದ ಸೌದಿ, ಬಾಂಗ್ಲಾ, ಫ್ರೆಂಚ್ ಪ್ರಜೆಗಳು

ಮಕ್ಕಾದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಕುರ್ ಆನ್ ಪಾರಾಯಣ ಸ್ಪರ್ಧೆ ಕೊನೆಗೊಂಡಿದ್ದು ಸೌದಿ ಬಾಂಗ್ಲಾದೇಶಿ ಮತ್ತು ಫ್ರಾನ್ಸ್ ನ ಸ್ಪರ್ಧಿಗಳು ವಿಜೇತರಾಗಿದ್ದಾರೆ. …