ಉಳ್ಳಾಲ: ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವತಿಯಿಂದ, ಉಳ್ಳಾಲ ಅಬ್ಬಕ್ಕ ರಾಣಿ ಸರ್ಕಲ್ ಪಕ್ಕದ ಹಝ್ರತ್ ಮೈದಾನದಲ್ಲಿ ಒಟ್ಟುಗೂಡಿರುವ ಹೊರ ರಾಜ್ಯದ ಅಸಹಾಯಕ ನೂರಾರು ವಲಸೆ ಕಾರ್ಮಿಕರಿಗೆ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು.
ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಸದಸ್ಯರಾದ ಹುಸೈನ್ ಬಶೀರ್, ಅಬ್ದುಲ್ ಕರೀಮ್ ಬೆಂಗರೆ, ಸ್ಥಳೀಯ ಸಮಾಜ ಸೇವಾ ಘಟಕಾಧ್ಯಕ್ಷ ಶರೀಫ್ ಉಳ್ಳಾಲ್, ಅಬ್ದುಸ್ಸಲಾಮ್ ಸಿ.ಎಚ್, ಶಂಶೀರ್ ಪಿಲಾರ್, ಅಬ್ದುರ್ರವೂಫ್, ಶಂಶುದ್ದೀನ್, ಹಾಗೂ ಸಮಾಜ ಸೇವಕರೂ ಉಳ್ಳಾಲ ನಗರಸಭಾ ಸದಸ್ಯರೂ ಆದ ಖಲೀಲ್ ಉಳ್ಳಾಲ್, ಅಬ್ದುಲ್ ಜಬ್ಬಾರ್, ಬಶೀರ್, ಮಾಜಿ ಉಳ್ಳಾಲ ಸದಸ್ಯರಾದ ಅಶ್ರಫ್ ಬಾವಾ, ಇಮ್ತಿಯಾಝ್ ಕೋಟೆಪುರ, ಇಬ್ರಾಹಿಂ ತವಕ್ಕಲ್, ಮುಸ್ಲಿಂ ಒಕ್ಕೂಟದ ಅಧ್ಯಕರಾದ ಇಸ್ಮಾಯಿಲ್ ಉಳ್ಳಾಲ್ರವರೂ ವಿಶೇಷ ಸಹಭಾಗಿಗಳಾಗಿದ್ದರು. ಹಾಗೆಯೇ, ವಿಧಾನ ಪರಿಷತ್ತು ಸದಸ್ಯರಾದ ಬಿ. ಎಂ. ಫಾರೂಕ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.
IslamKannada News Portal




