Home / ವಾರ್ತೆಗಳು / ಸಾರ್ವಜನಿಕ ಸ್ಥಳದಲ್ಲಿ ನಮಾಝ್ : ಏನು ಹೇಳುತ್ತಿದೆ ಫತ್ವಾ…

ಸಾರ್ವಜನಿಕ ಸ್ಥಳದಲ್ಲಿ ನಮಾಝ್ : ಏನು ಹೇಳುತ್ತಿದೆ ಫತ್ವಾ…

ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ಮಾಡುವುದರಿಂದ ದೂರ ನಿಲ್ಲುವಂತೆ ಮುಸ್ಲಿಮರಿಗೆ ಕರೆ ಕೊಟ್ಟಿರುವ ನದ್ವತುಲ್ ಉಲಮ ಸಂಸ್ಥೆಯು ಮಹಿಳೆಯರು ಮಸೀದಿಗೆ ತೆರಳಿ ನಮಾಝ್ ಮಾಡುವುದಕ್ಕೆ ಇಸ್ಲಾಂನಲ್ಲಿ ಅವಕಾಶ ಇದ್ದು ಇದರಂತೆ ಮಹಿಳೆಯರು ನಡಕೊಳ್ಳುವುದಕ್ಕೆ ಸ್ವತಂತ್ರರು ಎಂದು ಹೇಳಿದೆ.

ದೇಶದಾದ್ಯಂತದ ಇಸ್ಲಾಮಿಕ್ ವಿದ್ವಾಂಸರು ಮತ್ತು ಚಿಂತಕರು ಲಕ್ನೋದ ನದ್ವತುಲ್ ಉಲಮದಲ್ಲಿ ಸಭೆ ಸೇರಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮೌಲಾನಾ ಸೈಯದ್ ಅಬುಲ್ ಹಸನ್ ಅಲಿ ನದ್ವಿ ಅವರು 1963 ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಿದ್ದು ಇಲ್ಲಿ ಸಂಶೋಧನೆ ಮತ್ತು ಅಧ್ಯಯನಗಳು ನಡೆಯುತ್ತವೆ.

ಯಾರಿಗೂ ತೊಂದರೆ ನೀಡದೆ ಸಾರ್ವಜನಿಕ ಸ್ಥಳಗಳಲ್ಲಿ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸದಂತೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಕೂಡ ಈ ವಿದ್ವಾಂಸರು ಆಗ್ರಹಿಸಿದ್ದಾರೆ.

2023 ಫೆಬ್ರವರಿಯಲ್ಲಿ ಪುಣೆ ಮೂಲದ ಆಕ್ಟಿವಿಸ್ಟ್ ಒಬ್ಬರು ಮಹಿಳೆಯರಿಗೆ ಸ್ವತಂತ್ರವಾಗಿ ಮಸೀದಿ ಪ್ರವೇಶಿಸುವುದಕ್ಕೆ ಅನುಮತಿ ಇರಬೇಕು ಎಂದು ಹೇಳಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಮಹಿಳೆಯರ ಮಸೀದಿ ಪ್ರವೇಶಕ್ಕೆ ಯಾವುದೇ ನಿಷೇಧ ಇಲ್ಲ ಮತ್ತು ಇಸ್ಲಾಂ ಇಂತಹ ನಿಷೇಧವನ್ನು ವಿಧಿಸುವುದಿಲ್ಲ ಎಂದು ಇದಕ್ಕೆ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ಉತ್ತರಿಸಿತ್ತು.

ನದ್ವತುಲ್ ಉಲಮಾದಲ್ಲಿ ಸೇರಿದ ವಿದ್ವಾಂಸರಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಡಾಕ್ಟರ್ ಮುಹಮ್ಮದ್ ರಝಿಉಲ್ ಇಸ್ಲಾಂ ನದ್ವಿಯವರು ಭಾಗವಹಿಸಿದ್ದರು.

SHARE THIS POST VIA

About editor

Check Also

ಉಪವಾಸನಿರತ ಗಾಝಾ ನಿವಾಸಿಗಳ ಹಸಿವಿನ ಸಂಕಷ್ಟವನ್ನು ಅಪಹಾಸ್ಯದ ವ್ಯಂಗ್ಯಚಿತ್ರವಾಗಿಸಿದ ಫ್ರೆಂಚ್ ಪತ್ರಿಕೆ

ರಮಝಾನಿನಲ್ಲಿ ಆಹಾರ ಇಲ್ಲದೆ ಕಷ್ಟ ಪಡುತ್ತಿರುವ ಗಾಝಾದ ಜನರ ಬಗ್ಗೆ ಫ್ರೆಂಚ್ ಪತ್ರಿಕೆ ಲಿಬರೇಷನ್ ಅಪಹಾಸ್ಯದ ಕಾರ್ಟೂನ್ ಪ್ರಕಟಿಸಿದೆ. ಗಾಝಾದಲ್ಲಿ …

Leave a Reply

Your email address will not be published. Required fields are marked *