Home / ವಾರ್ತೆಗಳು / ಇಸ್ರೇಲಿ ಅಣೆಕಟ್ಟಿನ ಕವಾಟ ತೆರೆಯುವುದರಿಂದ ಪ್ಯಾಲೇಸ್ಟಿನಿಯರ ಕೃಷಿ ನಾಶ

ಇಸ್ರೇಲಿ ಅಣೆಕಟ್ಟಿನ ಕವಾಟ ತೆರೆಯುವುದರಿಂದ ಪ್ಯಾಲೇಸ್ಟಿನಿಯರ ಕೃಷಿ ನಾಶ

ಗಾಜಾ ನಗರ: ಯಾವುದೇ ಮುನ್ಸೂಚನೆಯಿಲ್ಲದೆ ಇಸ್ರೇಲಿ ಅಣೆಕಟ್ಟಿನ ಕವಾಟ ತೆರೆಯುವುದರಿಂದ ಪ್ಯಾಲೇಸ್ಟಿನಿಯರ ಕೃಷಿಗೆ ವ್ಯಾಪಕ ವಿನಾಶ ಉಂಟಾಗಿದೆ ಎಂದು ವರದಿಯಾಗಿದೆ.

ಶನಿವಾರ, ಇಸ್ರೇಲಿ ಆಕ್ರಮಿತ ಆಡಳಿತವು ಗಾಜಾ ಪ್ರದೇಶದ ಪೂರ್ವ ಗಡಿಯಲ್ಲಿ ಕವಾಟಗಳನ್ನು ತೆರೆದ ಪರಿಣಾಮವಾಗಿ ನೀರಿನ ಮಟ್ಟ ಏರಿತು ಮತ್ತು ನೂರಾರು ಕೃಷಿ ಭೂಮಿಗಳಿಗೆ ಪ್ರವಾಹ ಉಂಟಾಯಿತು. ಗಾಜಾದ ರೈತರು ತೀವ್ರ ಆರ್ಥಿಕ ನಷ್ಟವನ್ನು ಅನುಭವಿಸಿದ್ದಾರೆ ಎಂದು ಮಿಡಲ್ ಈಸ್ಟ್ ಮಾನಿಟರ್ ವರದಿ ಮಾಡಿದೆ.

ಪೂರ್ವ ಗಾಜಾ ನಗರದ ಹಲವಾರು ರೈತರ ಹೊಲಗಳು ಪ್ರವಾಹಕ್ಕೆ ಸಿಲುಕಿದವು ಮತ್ತು ಉತ್ತರ ಗಾಜಾ ಪ್ರದೇಶದ ಬೀಟ್ ಹನೌನ್ ಬಳಿಯ ಸ್ಥಳೀಯ ಹೊಲಗಳು ಹಾನಿಗೊಳಗಾದವು ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಇಸ್ರೇಲ್ ಇಂತಹ ಪ್ರವಾಹದ ನೀರಿನ ಕವಾಟುಗಳನ್ನು ಪದೇ ಪದೇ ತೆರೆದಿದ್ದು, ಪ್ಯಾಲೆಸ್ಟೀನಿಯಾದವರಿಗೆ ವ್ಯಾಪಕ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …