ಪ್ರವಾದಿಯವರ ಸಮಾಧಿಗೆ ಭೇಟಿ ನೀಡುವವರ ಸೌಲಭ್ಯಕ್ಕಾಗಿ ಶಾಂತಿಯ ದಾರಿ ಎಂಬ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ.
ಇಲ್ಲಿ ತೀವ್ರ ಜನಸಂದಣಿಯಿಂದಾಗಿ ಜನರಿಗೆ ಸರಿಯಾಗಿ ಪ್ರವಾದಿಯ ಸಮಾಧಿಯನ್ನು ವೀಕ್ಷಿಸುವ ಮತ್ತು ಕಣ್ತುಂಬಿಸಿಕೊಳ್ಳುವ ಅವಕಾಶಕ್ಕೆ ತಡೆ ಎದುರಾಗುತ್ತಿತ್ತು. ವಿಶ್ವಾಸಿಗಳಿಗೆ ಆರು ನಿಮಿಷಗಳ ಪ್ರವಾದಿ ಸಮಾಧಿಯನ್ನು ನೋಡುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ಈಗ ಹೊಸ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕೋಟ್ಯಾಂತರ ಮಂದಿಯನ್ನು ವರ್ಷಂ ಪ್ರತಿ ಆಕರ್ಷಿಸುತ್ತಿರುವ ಜಗತ್ತಿನ ಅತಿ ಪ್ರಮುಖ ಮಸೀದಿಗಳಲ್ಲಿ ಮಸಿದುನ್ನಬವಿ ಕೂಡ ಒಂದು. ಇದು ಪ್ರವಾದಿಯವರ ಮಸೀದಿ ಎಂದೇ ಪ್ರಸಿದ್ಧ.
ಈ ಮಸ್ಜಿದುನ್ನಭವಿಯ ಹೊರಗೆ ಪ್ರವಾದಿ ಮತ್ತು ಅವರ ಇಬ್ಬರು ಸಂಗಾತಿಗಳಾದ ಅಬೂಬಕ್ಕರ್ ಸಿದ್ದಿಕ್ ಹಾಗೂ ಉಮರುಲ್ ಫಾರೂಕ್ ಅವರ ಸಮಾಧಿಗಳನ್ನು ಸಂದರ್ಶಿಸುವುದಕ್ಕಾಗಿ ಜಗತ್ತಿನಿಂದ ಅಸಂಖ್ಯ ಮಂದಿ ಅಲ್ಲಿ ನೆರೆಯುತ್ತಾರೆ.
ಈ ಸಂದರ್ಭದಲ್ಲಿ ಜನಸಂದಣಿ ಉಂಟಾಗುತ್ತದೆ. ಈ ಜನಸಂದಣಿಯನ್ನು ತಪ್ಪಿಸಿ ಭೇಟಿಯನ್ನು ಸುಗಮಗೊಳಿಸುವುದಕ್ಕಾಗಿ ಈ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ.