ಈ ಬಾರಿಯ ಹಜ್ ಸಮಯದಲ್ಲಿ ಯಾತ್ರಿಕರಿಗೆ ಸೌದಿಯ 30ರಷ್ಟು ಶೆಫ್ ಗಳು ಆಹಾರವನ್ನು ತಯಾರಿಸಲಿದ್ದಾರೆ ಎಂದು ವರದಿಯಾಗಿದೆ. ಯಾತ್ರಿಕರಿಗೆ ಆಹಾರವನ್ನು ತಯಾರಿಸಲು ಮತ್ತು ವಿತರಿಸಲು ಅಗತ್ಯವಾದ ಲೈಸೆನ್ಸ್ ಗಳನ್ನು ಜಿದ್ದಾ ಸೂಪರ್ ಡೋಮ್ ನಲ್ಲಿ ನಡೆದ ಹಜ್ ಸಭೆಯಲ್ಲಿ ಸೌದಿಗಳಾದ 30ರಷ್ಟು ಪುರುಷ ಮತ್ತು ಸ್ತ್ರೀ ಶೆಪ್ ಗಳಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಹಜ್ ಸೀಸನ್ ನಲ್ಲಿ ಯಾತ್ರಿಕರಿಗೆ ಆಹಾರವನ್ನು ನೀಡುವುದು ಮತ್ತು ಅಡುಗೆ ತಯಾರಿಸುವ ಇತ್ಯಾದಿ ಜಗತ್ತಿಗೆ ಪ್ರವೇಶಿಸುವುದಕ್ಕಾಗಿ ಸೌದಿಗಳನ್ನು ದತ್ತು ಪಡೆಯಲು ಮತ್ತು ಅದಕ್ಕೆ ಯೋಗ್ಯರನ್ನಾಗಿ ಮಾಡುವ ಗುರಿಯೊಂದಿಗೆ ಹಜ್ ಶೆಪ್ ಕಾರ್ಯಕ್ರಮ ಮಾಡಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ.
ಹಜ್ ಯಾತ್ರಿಕರಿಗಾಗಿ ಆಹಾರ ತಯಾರಿಸುವ ಮತ್ತು ಅದನ್ನು ವಿತರಿಸುವ ವಿಷಯದಲ್ಲಿ ಸೌದಿ ಯುವಕರನ್ನು ಪ್ರೇರೇಪಿಸುದನ್ನು ಸೌದಿ ಅರೇಬಿಯಾ ಗುರಿಯಾಗಿ ಇಟ್ಟುಕೊಂಡಿದೆ. ಸೌದಿಯ ವಿಷನ್ ಟ್ವೆಂಟಿ ಥರ್ಟಿಯ ಭಾಗವಾಗಿ ಕ್ವಾಲಿಟಿ ಆಫ್ ಲೈಫ್ ಎಂಬ ಒಂದು ಗುರಿಯೂ ಇದೆ ಅದನ್ನು ಈಡೇರಿಸುವ ಹಿನ್ನೆಲೆಯಲ್ಲಿಯೂ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
IslamKannada News Portal
