ಮಂಗಳೂರು,ಸೆ.24:ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲಾ ಸಂಯುಕ್ತ ಖಾಝಿಯಾಗಿದ್ದ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಅಲ್ಪಕಾಲದ ಅಸೌಖ್ಯದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ನಗರಾಧ್ಯಕ್ಷರಾದ ಕೆ.ಎಂ.ಅಶ್ರಫ್ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇಸ್ಲಾಮೀ ಶರೀಅತ್, ಧಾರ್ಮಿಕ ಪಾಂಡಿತ್ಯ, ಭೂಗೋಳ, ಖಗೋಳ ಶಾಸ್ತ್ರದಲ್ಲಿ ಆಳವಾದ ಜ್ಞಾನ ಹೊಂದಿದ್ದ ಬೇಕಲ ಉಸ್ತಾದ್ ಅವರು ಕರ್ನಾಟಕ ಹಾಗೂ ಕೇರಳ ರಾಜ್ಯದ ಜನತೆಯ ಮೆಚ್ಚುಗೆ ಗಳಿಸಿದ್ದರು. ಬಹಳ ಗಾಂಭೀರ್ಯ ವ್ಯಕ್ತಿತ್ವ, ಮೃದು ಮನಸ್ಸಿನವರಾದ ಅವರ ಅಗಲಿಕೆ ಈ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯನ್ನು ಸಹಿಸಲು ಉಸ್ತಾದರ ಮಕ್ಕಳಿಗೆ, ಕುಟುಂಬಕ್ಕೆ ಮತ್ತು ಸಮಸ್ತ ನಾಡಿನ ಜನರಿಗೆ ದೇವನು ಶಕ್ತಿ ನೀಡಲಿ.
IslamKannada News Portal
