ಉತ್ತರಖಂಡ,ನ.20: ವಿಶ್ವದ ಮೊದಲ ಯೋಗ ಶಿಬಿರ ನವೆಂಬರ್ 20ಕ್ಕೆ ಉತ್ತರ ಖಂಡದ ಕೇದಾರ ನಗರದ ಕಣ್ವ ಆಶ್ರಮದಲ್ಲಿ ಆಯೋಜಿಸಲಾಗಿದ್ದು ಐದು ದಿವಸಗಳ ಯೋಗವನ್ನು ಮುಖ್ಯಮಂತ್ರಿ ತ್ರಿವೇಂದ್ರ್ ಸಿಂಗ್ ರಾವತ್ ಉದ್ಘಾಟಿಸಲಿರುವರು ಎನ್ನಲಾಗಿದೆ.
ಕಣ್ವಾಶ್ರಮದ ಗುರುಕುಲ ಕುಲಪತಿ ಡಾ. ಜಯಂತ್ ಯೋಗಿರಾಜ ರವಿವಾರ ಪತ್ರಕರ್ತರಿಗೆ ಈ ಯೋಗ ಶಿಬಿರದ ಮಾಹಿತಿಯನ್ನು ನೀಡಿದ್ದಾರೆ. 500ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರು ಭಾಗವಹಿಸುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದು ನಮಾಝ್ ನಿರ್ವಹಿಸುವುದಕ್ಕೂ ಸ್ಥಳಾವಕಾಶ ನೀಡಲಾಗುವುದು ಎಂದಿದ್ದಾರೆ. ಪತಂಜಲಿ ಯೋಗ ಪೀಠದ ಮೂಲಕ ಯೋಗಾಸನವನ್ನು ಮಾಡಲಿದ್ದಾರೆ.
ಉತ್ತರ ಪ್ರದೇಶ ದೇವ್ಬಂದ್ನ ಜಾಮಿಯ ತಿಬ್ಬಿಯ ಯುನಾನಿ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ. ದೇವ್ಬಂದ್ ಮೊಹಮ್ಮದ್ ಯೂನುಸ್ ಕಾಸ್ಮಿ ಯೋಗ ಶರೀರ ಮತ್ತು ಮಾನಸಿಕ ಆರೋಗ್ಯಕ್ಕೆ ಉತ್ತಮ ಆವಶ್ಯಕವೆಂದು ಹೇಳಿದ್ದು ಪತಂಜಲಿಯ ಆಚಾರ್ಯ ಬಾಲಕೃಷ್ಣ, ಸ್ವಾಮಿ ಚಿದಾನಂದ ಮುಂತಾದವರು ಯೋಗವನ್ನು ಹೇಳಿ ಕೊಡಲಿದ್ದಾರೆ.
IslamKannada News Portal
