ದೇವವಚನದ ಆಧಾರದಲ್ಲಿ ಹೇಳುವುದಾದರೆ..
ಅಧ್ಯಾಯ 6: ಅಲ್ ಅನ್‌ಆಮ್
“ದೃಷ್ಟಿಗಳು ಅವನನ್ನು ಕಾಣಲಾರವು. ಆದರೆ ಅವನು ದೃಷ್ಟಿಗಳನ್ನು ಕಾಣುತ್ತಾನೆ. ಅವನು ಅತ್ಯಂತ ಸೂಕ್ಷ್ಮದರ್ಶಿಯೂ ಸೂಕ್ಷ್ಮಜ್ಞನೂ ಆಗಿರುತ್ತಾನೆ”.(ದೇವವಚನ)
ದೇವನನ್ನು ಕಾಣುವಂತಹ ದೃಷ್ಟಿ ಶಕ್ತಿ ಮನುಷ್ಯನಿಗೆ ಇಹಜೀವನದಲ್ಲಿ ನೀಡಲಾಗಿಲ್ಲ. ಮರಣಾನಂತರ ಪ್ರತಿಯೊಬ್ಬನ ದೃಷ್ಟಿಯು ತೀಕ್ಷ್ಣವಾಗುವುದು. ದೇವನನ್ನು ಕಣ್ಣಾರೆ ಕಾಣಲು ಸಾಧ್ಯವಾಗುವುದು. ಆದ್ದರಿಂದ ದೇವನು ಇದ್ದಾನೆ. ಅವನು ಆದಿ,ಅನಂತ.
ಮನುಷ್ಯನ ದೃಷ್ಟಿ ಶಕ್ತಿಯಲ್ಲಿ ಮಾತ್ರ ವ್ಯತ್ಯಾಸವಾಗಲಿರುವುದು.
ಪ್ರವಾದಿ ಮೂಸಾ(ಅ) ರು ಪವಿತ್ರವಾದ ತೂರ್ ಪರ್ವತದಲ್ಲಿ ದೇವಾ ನನಗೆ ನಿನ್ನನ್ನು ನೋಡಬೇಕು ಎಂದಾಗ ಕೇವಲ ಪರ್ವತಕ್ಕೆ ಬಿದ್ದ ಪ್ರಕಾಶದಿಂದ ಪ್ರಜ್ಞೆ ತಪ್ಪಿದರು ಎಂದು ಕುರ್ ಆನ್ ನಲ್ಲಿ ಇದೆ.
ಅಧ್ಯಾಯ 7: ಅಲ್ ಅ’ಅರಾಫ್
ಸೂಕ್ತ : 143
ನಾವು ನಿಶ್ಚಯಿಸಿದ ಸಮಯಕ್ಕೆ ಸರಿಯಾಗಿ ಅವರು ತಲಪಿ ಅವರ ಪ್ರಭು ಅವರೊಡನೆ ಮಾತನಾಡಿದಾಗ ಅವರು, “ಓ ಪ್ರಭೂ, ನನಗೆ ನಿನ್ನ ದರ್ಶನಕ್ಕೆ ಬೇಕಾದ ದೃಕ್ಷಕ್ತಿ ದಯಪಾಲಿಸು” ಎಂದು ಭಿನ್ನವಿಸಿದಾಗ, “ನೀನು ನನ್ನನ್ನು ನೋಡಲಾರೆ. ಅದೋ ಮುಂದಿರುವ ಪರ್ವತವನ್ನು ನೋಡು. ಅದು ತನ್ನ ಸ್ಥಾನದಲ್ಲಿ ಸ್ಥಿರವಾಗಿ ನಿಂತರೆ ನೀನು ನನ್ನನ್ನು ನೋಡಬಲ್ಲೆ” ಎಂದನು. ಆ ಪ್ರಕಾರ ಅವರ ಪ್ರಭು ಪರ್ವತದ ಮೇಲೆ ದಿವ್ಯ ಪ್ರಕಾಶವನ್ನು ಬೀರಿದಾಗ ಅದು ಅದನ್ನು ನುಚ್ಚು ನೂರುಗೊಳಿಸಿತು. ಮೂಸಾ ಮೂರ್ಛೆ ತಪ್ಪಿ ಬಿದ್ದರು. ಸ್ಮೃತಿ ಬಂದಾಗ ಹೀಗೆ ಹೇಳಿದರು, “ನೀನು ಮಹಾ ಪರಿಶುದ್ಧನು. ನಾನು ನಿನ್ನಲ್ಲಿ ಪಶ್ಚಾತ್ತಾಪ ಪಡುತ್ತೇನೆ ಮತ್ತು ಎಲ್ಲರಿಗಿಂತಲೂ ಮೊದಲು ವಿಶ್ವಾಸವಿಡುವವನು ನಾನಾಗಿರುತ್ತೇನೆ.”
(ದಿವ್ಯ ಕುರ್‍ಆನ್)
✍️ ಶಮೀರ ಜಹಾನ್
IslamKannada News Portal
