ಇತ್ತೀಚೆಗೆ ತಪಾಸಣೆಗೆಂದು ವೈದ್ಯರನ್ನು ಕಾಯುತ್ತಿದ್ದಾಗ ನಡೆದ ಎರಡು ಘಟನೆಗಳು.
ಇಪ್ಪತ್ತು ಇಪ್ಪೈತದರ ಹರೆಯದ ಯುವಕ ಮತ್ತು ಐವತ್ತು ಮೀರಿದ ಆತನ ತಾಯಿ(ಇರಬೇಕು). ನಾವು ವೈದ್ಯರಿಗಾಗಿ ಕಾಯುತ್ತಿರಲು ತಪಾಸಣಾ ಕೋಣೆಯಿಂದ ಹೊರಬಂದ ತಾಯೊಬ್ಬರು ತನ್ನ ಮಗನೊಂದಿಗೆ ಪ್ರಶ್ನಿಸುತ್ತಾರೆ. ಮಗಾ ನೀರಿನ ಬಾಟಲಿ ಕೈಯಲ್ಲಿ ಇದೇ ತಾನೆ ಅಥವಾ ಒಳಗಡೆ ಬಿಟ್ಟು ಬಂದಿಯಾ?
ಇದನ್ನು ಕೇಳಿದ ಆ ಯುವಕನ ಪ್ರತಿಕ್ರಿಯೆ ನೋಡಿ ನನ್ನ ಮನ ತುಂಬಾ ನೋಯಿತು. ಕಣ್ಣಲ್ಲಿ ನೀರು ಬರಿಸಿತು. ಆತನ ಬಾಯಿಂದ ಹೊರಟ ಮಾತು: “ಅಮ್ಮ ಹುಚ್ಚು ಮಾತಾಡದೆ ನಡೀ ಮುಂದಕ್ಕೆ” ಎಂಬುದಾಗಿತ್ತು.
ಈ ಯುವಕರು ಯಾಕೆ ತನ್ನ ಅಪ್ಪ-ಅಮ್ಮನ ಜೊತೆ ಹೀಗೆ ವರ್ತಿಸ್ತಾರೆ? ಈ ಯುವಕರ ಪ್ರಾಯದ ಮೋಜು ಅನ್ಬೇಕಾ? ಅಥವಾ ಮಾನರ್ಸ್ ನ ಕೊರತೆ ಅನ್ಬೇಕಾ ಅಥವಾ ಈ ತರದ ನಡವಳಿಕೆ ಪರಿಸರದಿಂದ ಕಲಿತುಕೊಂಡ್ರ…..
ಮಕ್ಕಳಿಗೆ ಮಾತು ಕಲಿಸಿದ ಅಮ್ಮಂದಿರು..ಅವರಿಗೆ ತುತ್ತು ಕೊಟ್ಟು ..ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ ಮಕ್ಕಳನ್ನು ಇಷ್ಟು ಎತ್ರಕ್ಕೆ ಬೆಳೆಸಿದಾಗ ಅಮ್ಮ ನ ಮಾತು ಈ ಮಕ್ಕಳಿಗೆ ಯಾಕೆ ಅಪಥ್ಯವಾಗುವುದು ?
ಬಹುಶಃ ತುಂಬಿ ತುಳುಕುತ್ತಿರುವ ಜನರ ಮಧ್ಯೆ ಅಮ್ಮ ನ ಈ ಪ್ರಶ್ನೆ ಅವನಿಗೆ ಅವಮಾನವಾಗಿ ಕೇಳಿಸಿತಾದರು ಯಾಕೆ? ಅಲ್ಲಿ ನೆರೆದವರಿಗೆ ಈ ಯುವಕ ಯಾರು? ಯಾರಿಗಾಗಿ ಅವನು ತನ್ನ ಜೊತೆ ಇರುವ ಅಮ್ಮ ನ ಜೊತೆ ದುಡುಕಬೇಕು? ಬಹುಶಃ ಮೌನ ಆರಿಸಿದ ಆ ಸ್ಥಳದಲ್ಲಿ ಅಮ್ಮನ ಧ್ವನಿಯ ಮೂಲಕ ಎಲ್ಲರೂ ನಮ್ಮನ್ನು ಗಮನಿಸಿರಬೇಕು .ಅಂದುಕೊಂಡ್ನಾ….
ನನ್ನ ಪ್ರಶ್ನೆ ,ಜೀವನದಲ್ಲಿ ಒಮ್ಮೆ ಯೂ ಕಂಡಿರದ ಅಲ್ಲಿ ಕೂಡಿದ್ದ ಆ ಜನರು ಈ ಯುವಕನಿಗೆ ಯಾರಾಗಬೇಕು? ಯಾಕೆ ಈ ಯುವಕರು ಹೊತ್ತು ಸಾಕಿದ ಅಮ್ಮನ ಜೊತೆ ದುಡುಕುತ್ತಾರೆ? ಯಾಕೆ ಇವರಿಗೆ ನಯವಾದ ಮಾತಿನಿಂದ ಉತ್ತರಿಸಬಾರದು?
ಯುವಕರೇ ನನಗೆ ನಿಮ್ಮೊಂದಿಗೆ ಒಂದು ರಿಕ್ವೆಸ್ಟ್ ಮಕ್ಕಳೇ ಅಮ್ಮಂದಿರೊಂದಿಗೆ ಯಾವತ್ತೂ ಈ ರೀತಿ ದುಡುಕಿ ಮಾತಾಡಬೇಡಿ. ಬಹುಶಃ ಅವರು ನಿಮ್ಮ ಮಾಡರ್ನ್ ಲೈಫ್ ಗೆ ಸೂಟ್ ಆಗದಿರಬಹುದು. ಆದರೆ ಮಕ್ಕಳ ಬಾಯಿಂದ ಪ್ರೀತಿಯ ಮಾತನ್ನು ಕೇಳಲು ಅವಳು ಸದಾ ತವಕಿಸುತ್ತಿರುತ್ತಾಳೆ. ಆದ ಕಾರಣ ದಯವಿಟ್ಟು ತಂದೆ- ತಾಯಿಯೊಂದಿಗೆ ದುಡುಕಬೇಡಿ. ನಿಮ್ಮ ಪ್ರೀತಿಯ ಉತ್ತರದಿಂದ ಅಮ್ಮನ ಮನಸ್ಸನ್ನು ಸಂತೋಷಿಸಲು ಪ್ರಯತ್ನಿಸಿ.
ಪಾಪ ಆ ಮುಗ್ಧ ತಾಯಿಯ ಮುಖ ನನ್ ಕಣ್ಣಿಂದ ಈಗಲೂ ಮಾಸಿಲ್ಲ.
ಘಟನೆ ಎರಡು.
ಹಲವು ತಾಸುಗಳ ನಂತರ ವೈದ್ಯರು ತಪಾಸಣೆಗೆಂದು ಕೋಣೆಗೆ ಪ್ರವೇಶಿಸಿದಾಗ ಸುದೀರ್ಘ ಸಮಯದಿಂದ ಕಾಯುತ್ತಿದ್ದ ಐವತ್ತು ದಾಟಿದ ಒರ್ವ ಮಧ್ಯ ವಯಸ್ಕ; ವೈದ್ಯರನ್ನು ಕಂಡ ಕೂಡಲೇ ಓಡೋಡಿ ಬಂದ ಆ ದೃಶ್ಯ ಇದೆಯಲ್ಲ ಅದು ನಿಜಕ್ಕೂ ಅಪ್ಯಾಯಮಾನ ಆಗಿತ್ತು.
ಅವರನ್ನು ಕಂಡ ಕೂಡಲೇ ಜೀವ ಕೊಟ್ಟ ದೇವರಂತೆ; ಹತ್ತಿರ ಇದ್ದವರ ಪರಿವೆಯೇ ಇಲ್ಲದ ಹಾಗೆ ಈ ಹೃದಯ ತಜ್ಞ ನನಗಾಗಿಯೇ ಬಂದಿರುವುದು. ಅವರಿಗೆ ಕೇವಲ ನನ್ನ ಮಾತ್ರ ಪರಿಚಯವಿರುವುದು. ಹಾಗೆ ಓಡಿ ಹೋದ ಆ ದೃಶ್ಯ, ಅವರ ರಟ್ಟೆಯಲ್ಲಿ ಹಿಡಿದು ಅವರನ್ನು ತಡೆದು ನಿಲ್ಲಿಸಿದಾಗ ಮುಖ ಬಾವ ಕೂಡಾ ಬದಲಾಗಿರಲಿಲ್ಲ. ಅವರು ಮಾಡಿದ್ದು ಸರಿ ಎಂಬಂತೆ ಅವರದೇ ಆದ ಲೋಕದಲ್ಲಿ ಅವರಿದ್ದಾರೆ. ಅವರ ಮುಗ್ಧದೆ ಅಪಾರ ಅನ್ನಿಸಿತು. ಅವರು ವೈದ್ಯರ ಮೇಲೆ ಇಟ್ಟ ಪ್ರೀತಿ, ಗೌರವ ಮತ್ತು ವಿಶ್ವಾಸ ಆ ಮುಗ್ಧ ಮುಖದಲ್ಲಿ ಗೋಚರಿಸುತಿತ್ತು.
ವೈದ್ಯರೊಂದಿಗಿನ ಈ ಮುಗ್ಧ ಜನರ ಈ ನಂಬಿಕೆಗೆ ಯಾವತ್ತೂ ದಕ್ಕೆ ತರಬಾರದು. ಬಹುಶ ಪ್ರತಿಯೊಂದು ರೋಗಿಯು ವೈದ್ಯರುಗಳ ಈ ಎಕ್ಸ್ ಪೆರಿಮಂಟ್ (ಸಕ್ಸಸ್ ಆದ್ರೆ ಆಯಿತು ಇಲ್ಲ ಅಂದ್ರೆ ಡೆಡ್ ಬಾಡಿ) ನ ಮೇಲೆ ಎಷ್ಟು ನಂಬಿಕೆ ಇಟ್ಟಿರುವರು!! ವೈದ್ಯರ ಈ ಎಕ್ಸ್ ಪರಿಮೆಂಟಿನ ಮೇಲಿನ ಭರವಸೆ ಮತ್ತವರ ಮಾತುಗಳ ಮೇಲಿನ ಭರವಸೆ ಎಷ್ಟೊಂದು ತೀವ್ರತಮವೆಂದು ಆ ವ್ಯಕ್ತಿಯ ಧಾವಂತದಿಂದ ಅರ್ಥ ಮಾಡಿಕೊಂಡೆ. ಏನು ಹೆಳ್ಬೇಕು ನಿಜವನ್ನು ನಿಜವಾಗಿ ಹೇಳಲು ಆಗ್ತಾ ಇಲ್ಲ.
ಯಾರ್ಯಾರ ತಪ್ಪಿಗೆ ಇನ್ನೊಬ್ಬರಿಗೆ ದೂರು; ಅಂತ ಹೇಳುವಹಂಗೇನೂ ಇಲ್ಲ. ಆದರೂ ವೈದ್ಯರು ಅಂದ್ರೆ ದೇವರು ಎಂದು ನಂಬಿಕೊಂಡವರೂ ಇದ್ದಾರೆ ಪಾಪ!
ಎಲ್ಲಾ ಕಡೆ ಶಿಷ್ಠರೂ ಇದ್ದಾರೆ ದುಷ್ಟರೂ ಇದ್ದಾರೆ. ದುಷ್ಟರ ಮಧ್ಯೆ ಶಿಷ್ಠರು ಕಾಣಿಸ್ತಾ ಇಲ್ವಾ ಅಥವಾ ಶಿಷ್ಠರ ಮಧ್ಯೆ ದುಷ್ಟರು ಕಾಣಿಸ್ತಾ ಇಲ್ವಾ ಗೊತ್ತಾಗ್ತಾ ಇಲ್ಲ.
✍ ರೈಹಾನ್ ವಿ ಕೆ ಸಚೇರಿಪೇಟೆ
IslamKannada News Portal
