ಅಹ್ಮದಾಬಾದ್,ಮೇ.28: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ ನಮಸ್ತೆ ಟ್ರಂಪ್ ಕಾರ್ಯಕ್ರಮ ಗುಜರಾತಿನಲ್ಲಿ ಕೊರೋನ ಹರಡಲು ಕಾರಣವಾಗಿದೆ ಎಂಬ ಕಾಂಗ್ರೆಸ್ನ ವಾದವನ್ನು ಮಾಜಿ ಬಿಜೆಪಿ ನಾಯಕ ಕೇಂದ್ರ ಸಚಿವರಾಗಿದ್ದ ಯಶ್ವಂತ್ ಸಿಂಗ್ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಕೊರೊನಾ ಹರಡಲು ತಬ್ಲೀಗ್ ಜಮಾಅತ್ ಎಂದು ಆರೋಪಿಸಿ ಪದೇ ಪದೇ ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯುತ್ತಿವೆ…ಯಾಕೆ ಅಹ್ಮದಾಬಾದಿನ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸುವ ಮೂಲಕ ಕೋವಿಡ್ ಹರಡಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ” ಎಂದು ಸಿನ್ಹಾ ಪ್ರಶ್ನಿಸಿದ್ದಾರೆ.
“ನಮಸ್ತೆ ಟ್ರಂಪ್ ಕಾರ್ಯಕ್ರಮದ ಮೂಲಕ ಗುಜರಾತಿನಲ್ಲಿ ರೋಗ ಹರಡಿದ್ದು. ಹೋಂ ಕೊರೊಂಟೈನ್ ಅಲ್ಲಿಯೂ ಹೆಚ್ಚು ಉಲ್ಲಂಘನೆಗಳಾಗಿವೆ. ಮಾಧ್ಯಮಗಳು ಈ ವಿಷಯವನ್ನು ಬಿತ್ತರಿಸದೆ ನಿರ್ಲಕ್ಷಿಸಿದವು” ಎಂದವರು ಟ್ವೀಟ್ನಲ್ಲಿ ಹೇಳಿದರು.
ಫೆಬ್ರುವರಿಯಲ್ಲಿ ನಡೆದ ನಮಸ್ತೆ ಟ್ರಂಪ್ನಿಂದ ಗುಜರಾತಿನಲ್ಲಿ 800 ಮಂದಿ ಕೊರೋನ ಪೀಡಿತರಾಗಿ ಸಾಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸೋಮವಾರ ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ನಿರಾಧಾರ ಆರೋಪ ಮಾಡುತ್ತಿದೆ ಎಂದು ಬಿಜೆಪಿ ಈ ವಾದವನ್ನು ತಳ್ಳಿಹಾಕಿದೆ.
ನಮಸ್ತೆ ಟ್ರಂಪ್ ಕಾರ್ಯಕ್ರಮ ಸಂಘಟಿಸಿದ ಕುರಿತು ವಿವರವಾದ ತನಿಖೆ ನಡೆಸಲು ಆಗ್ರಹಿಸಿ ಗುಜರಾತಿನ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಅಮಿತ್ ಚಾವದ್ ಹೇಳಿದರು. ಜನವರಿ 22ಕ್ಕೆ ವಿಶ್ವ ಆರೋಗ್ಯ ಸಂಘಟನೆ ಮಹಾಮಾರಿಯ ಕುರಿತು ಪ್ರತಿರೋಧ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸೂಚಿಸಿತ್ತು. ಇದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳದೆ ನಮಸ್ತೆ ಟ್ರಂಪ್ ಕಾರ್ಯಕ್ರಮ ನಡೆಸಲಾಯಿತು ಎಂದು ಕಾಂಗ್ರೆಸ್ ಆರೋಪಿಸಿದೆ.
ಕೊರೋನ ಮುನ್ನೆಚ್ಚರಿಕೆ ಕಡೆಗಣಿಸಿ ಮೋದಿ ತನ್ನ ವರ್ಚಸ್ಸನ್ನು ಮಾತ್ರ ಗುರಿಯಿಟ್ಟು ಇಂತಹ ಕಾರ್ಯಕ್ರಮ ಸಂಘಟಿಸಿದರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಟೀಕಿಸುತ್ತಿದ್ದಾರೆ. ಬಿಜೆಪಿಯಿಂದ ಬಹಳಷ್ಟು ಕಾಲದಿಂದ ಅಂತರ ಕಾಪಾಡಿಕೊಂಡಿರುವ ಯಶ್ವಂತ್ ಸಿನ್ಹಾ ಸರಕಾರದ ವಿರುದ್ಧ ಹಲವಾರು ವಿಷಯಗಳಲ್ಲಿ ಕಟು ಟೀಕೆ ಮಾಡುತ್ತಾ ಬಂದಿದ್ದಾರೆ. ಸಿಎಎ, ಎನ್ಆರ್ಸಿ ವಿಷಯಗಳಲ್ಲಿ ಕೇಂದ್ರ ಸರಕಾರವನ್ನು ತೀವ್ರವಾಗಿ ಅವರು ಟೀಕಿಸಿದ್ದರು.
IslamKannada News Portal
