Home / ಪ್ರವಾದಿ ವಚನಗಳು / ಅವರಿಂದ ದೂರವಿರಿ. ನಿಮ್ಮನ್ನು ರಕ್ಷಿಸಿರಿ

ಅವರಿಂದ ದೂರವಿರಿ. ನಿಮ್ಮನ್ನು ರಕ್ಷಿಸಿರಿ

ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು – ಕೊನೆಯ ಕಾಲದಲ್ಲಿ ವಂಚನೆ ಮಾಡುವ ಸುಳ್ಳುಗಾರರಿರುವರು. ನಿಮ್ಮ ಬಳಿ ನೀವಾಗಲೀ ನಿಮ್ಮ ಪೂವ೯ಜರಾಗಲಿ ಕೇಳಿರದ ಹದೀಸ್’ಗಳನ್ನು ತರುವರು. ಅವರಿಂದ ದೂರವಿರಿ. ನಿಮ್ಮನ್ನು ರಕ್ಷಿಸಿರಿ. ಅವರು ನಿಮ್ಮನ್ನು ದಾರಿಗೆಡಿಸದಿರಲಿ ಮತ್ತು ಗೊಂದಲದಲ್ಲಿ ಸಿಲುಕಿಸದಿರಲಿ. (ಮುಸ್ಲಿಮ್)
ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು – ಆದಮನ ಪುತ್ರ ನನ್ನನ್ನು ನಿರಾಕರಿಸುತ್ತಾನೆ. ಅದು ಅವನಿಗೆ ಭೂಷಣವಲ್ಲ. ಅವನು ನನ್ನನ್ನು ಬಯ್ಯುತ್ತಾನೆ. ಅದು ಅವನಿಗೆ ಭೂಷಣವಲ್ಲ. ಅವನು ನನ್ನನ್ನು ನಿರಾಕರಿಸುವುದು ಹೇಗೆಂದರೆ – ಆತ ನನ್ನನ್ನು ಮರಣಾನಂತರ ಖಂಡಿತ ಜೀವಂತಗೊಳಿಸಲಾರನು. ನನ್ನನ್ನು ಪ್ರಥಮ ಸಲ ಸೃಷ್ಟಿಸಿದಂತೆ. ಪ್ರಥಮ ಸಲ ಸೃಷ್ಟಿಸುವುದು ಅವನನ್ನು ಜೀವಂತಗೊಳಿಸುವುದಕ್ಕಿಂತ ಸುಲಭವಲ್ಲ ಎನ್ನುವುದಾಗಿದೆ. ಅವನು ನನ್ನನ್ನು ಬಯ್ಯುವುದು ಹೇಗೆಂದರೆ – ಅಲ್ಲಾಹನು ಮಗನನ್ನು ಹೊಂದಿದ್ದಾನೆ ಎನ್ನುವುದಾಗಿದೆ. ವಾಸ್ತವದಲ್ಲಿ ನಾನು ಏಕೈಕನೂ ನಿರಪೇಕ್ಷನೂ ಆಗಿರುವೆನು. ನನಗೆ ಯಾವ ಪುತ್ರನೂ ಇಲ್ಲ ಮತ್ತು ನಾನು ಯಾರ ಪುತ್ರನೂ ಅಲ್ಲ. ನನಗೆ ಸರಿಸಮಾನರು ಯಾರೂ ಇಲ್ಲ. ಇಬ್ನು ಅಬ್ಬಾಸ್(ರ) ರ ವರದಿಯಲ್ಲಿ ಈ ರೀತಿಯಿದೆ – ಅವನು ನನಗೆ ಬಯ್ಯುವುದು ಹೇಗೆಂದರೆ – ನನಗೆ ಮಗನಿದ್ದಾನೆ ಎನ್ನುವುದಾಗಿದೆ. ನಾನು ಯಾರನ್ನಾದರೂ ನನ್ನ ಪತ್ನಿ ಅಥವಾ ಪುತ್ರನಾಗಿಸುವುದರಿಂದ ಪರಿಶುದ್ಧನಾಗಿರುವೆನು. (ಬುಖಾರಿ)

 

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …

Leave a Reply

Your email address will not be published. Required fields are marked *