ನೆದರ್ಲ್ಯಾಂಡ್ ನಲ್ಲಿ ಕುರ್ ಆನ್ ನ ವಿರುದ್ಧ ಮತ್ತೆ ಪ್ರತಿಭಟನೆ ನಡೆದಿದ್ದು ತುರ್ಕಿ ರಾಯಭಾರ ಕಚೇರಿಯ ಮುಂದೆ ವ್ಯಕ್ತಿಯೋರ್ವ ಕುರಾನ್ ಅನ್ನು ಹರಿದು ಹಾಕಿರುವ ಘಟನೆ ನಡೆದಿದೆ.
ಬಲಪಂಥೀಯ ಗುಂಪಿನ ನೇತೃತ್ವ ವಹಿಸಿರುವ ಎಡ್ವಿನ್ ಎಂಬಾತ ಈ ಕೃತ್ಯ ಎಸೆಗಿದ್ದು ಈತನಿಗೆ ಇಬ್ಬರು ಸಾತ್ ನೀಡಿದ್ದಾರೆ . ನೆದರ್ ಲ್ಯಾಂಡ್ ಸರಕಾರ ಇಂತಹ ಪ್ರತಿಭಟನೆಯನ್ನು ಖಂಡಿಸಿದೆಯಾದರೂ ಇದನ್ನು ತಡೆಯುವುದಕ್ಕೆ ಕಾನೂನಾತ್ಮಕವಾಗಿ ಯಾವುದೇ ಶಕ್ತಿ ತನಗೆ ಇಲ್ಲ ಎಂದು ಹೇಳಿದೆ.
ಇದೇ ವೇಳೆ ಈತನ ಕೃತ್ಯದ ವಿರುದ್ಧ ಪ್ರತಿಭಟನೆ ಕೂಡ ನಡೆದಿದ್ದು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಈ ಎಡ್ವಿನ್ ಈ ಹಿಂದೆ ಜನವರಿಯಲ್ಲಿ ಪಾರ್ಲಿಮೆಂಟ್ ನ ಹೊರಗೆ ಕುರ್ ಆನ್ ಹರಿದಿದ್ದ ಮತ್ತು ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ನೆದರ್ಲ್ಯಾಂಡ್ ಕಾನೂನು ಪ್ರಕಾರ ಅವಕಾಶ ಇಲ್ಲ ಎಂದು ಹೇಳಲಾಗಿದೆ.
ಬಲಪಂಥೀಯ ರಾಜಕೀಯ ಪಕ್ಷದ ನಾಯಕರಾಗಿರುವ ಗೀಟ್ ವೈಲ್ಡರ್ ಈ ಘಟನೆಯನ್ನು ಬೆಂಬಲಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕಳೆದ ಜುಲೈನಲ್ಲಿ ಸ್ವೀಡನ್ ನಲ್ಲಿ ಕುರ್ ಆನ್ ನ ಎರಡು ಪ್ರತಿಗಳಿಗೆ ಬೆಂಕಿ ಕೊಟ್ಟ ಘಟನೆ ಕೂಡ ನಡೆದಿತ್ತು