ವಿಶ್ವಕಪ್ ಮಹಿಳಾ ಫುಟ್ಬಾಲ್ ಪಂದ್ಯದಲ್ಲಿ ಮೊರಕೋದ ನೌಹಿಲ ಬೆಂಜಿನ ಜಾಗತಿಕವಾಗಿ ಸುದ್ದಿಗೀಡಾಗಿದ್ದಾರೆ. ವಿಶ್ವಕಪ್ ಮಹಿಳಾ ಫುಟ್ಬಾಲ್ ಪಂದ್ಯಾವಳಿಯಲ್ಲಿಯೇ ಮೊಟ್ಟ ಮೊದಲ ಬಾರಿ ಹಿಜಾಬ್ ಧರಿಸಿ ಆಟವಾಡಿದ ಹೆಗ್ಗಳಿಕೆ ಇವರ ಪಾಲಾಗಿದ್ದು ಇವರ ಆಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.
ಜರ್ಮನಿಯ ವಿರುದ್ಧ 6- 0 ಗೋಲುಗಳಿಂದ ಸೋಲನ್ನಪ್ಪಿದ ಮೊದಲ ಪಂದ್ಯದಲ್ಲಿ ನೌಹೀಲಾ ಆಡಿರಲಿಲ್ಲ. ಆದರೆ ದಕ್ಷಿಣ ಕೊರಿಯಾದ ವಿರುದ್ಧ ಆಡಲಾದ ಎರಡನೇ ಪಂದ್ಯದಲ್ಲಿ ನೌಹೀಲಾ ಪಂದ್ಯದ ಉದ್ದಕ್ಕೂ ಆಡಿದ್ದಾರೆ ಮತ್ತು ಗೋಲು ಕೂಡ ಹೊಡೆದಿದ್ದು ಅದು ಬಲಗಡೆಯ ಕಾರಣಕ್ಕಾಗಿ ದಾಖಲಾಗಿಲ್ಲ.
25 ವರ್ಷದ ಡಿಫೆಂಡರ್ ಆಗಿರುವ ನೌಹೀಲಾ ಬಿಳಿ ಬಣ್ಣದ ಹಿಜಾಬ್ ಧರಿಸಿ ಕಣಕ್ಕಿಳಿದಿದ್ದರು.
ಮಹಿಳಾ ವಿಶ್ವಕಪ್ ಫುಟ್ಬಾಲ್ ಪಂದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ಫಿಫಾ ಈ ಮೊದಲು ಹಿಜಾಬ್ ಧರಿಸಿ ಫುಟ್ಬಾಲ್ ಆಡುವುದನ್ನು ಆರೋಗ್ಯ ಮತ್ತಿತರ ಕಾರಣಗಳನ್ನು ಮುಂದಿಟ್ಟು ನಿಷೇಧಿಸಿತ್ತು. ಆದರೆ 2014ರಲ್ಲಿ ಈ ನಿಷೇಧವನ್ನು ಹಿಂಪಡೆದಿತ್ತು
IslamKannada News Portal
