ದುಬೈ, ಅ. 23: ಅನಧಿಕೃತ ಮದ್ದು ಬಳಸುವುದರ ವಿರುದ್ಧ ಸಮರ ಸಾರಿರುವ ದುಬೈ ಒಂದು ನಿಮಿಷದ ಜಾಗೃತಿ ವೀಡಿಯೊ ತಯಾರಿಸಿ ಒಂದು ಲಕ್ಷ ದಿರ್ಹಂ ಬಹುಮಾನ ಗೆಲ್ಲಿ ಎಂದು ಸ್ಪರ್ಧೆ ಇರಿಸಿಕೊಂಡಿದೆ.
ಮಾದಕ ವಸ್ತುಗಳ ಬಳಕೆಯಿಂದಾಗುವ ದುರಂತಗಳ ಕುರಿತು ಇದರಲ್ಲಿ ಜಾಗೃತಿ ಇರಬೇಕು. ಯುಎಇಯ ಇದ್ಯಾರ್ಥಿಗಳಿಗೆ ದುಬೈ ಪೊಲೀಸರು ಸ್ಪರ್ಧೆ ಆಯೋಜಿಸಿದ್ದಾರೆ. ಮಾದಕ ವಸ್ತುಗಳ ಬಳಕೆ, ಆನ್‍ಲೈನ್ ಮೂಲಕ ನಡೆಯುವ ಬೆದರಿಕೆಗಳು, ವಂಚನೆಗಳು, ವೀಡಿಯೊ ಗೇಮ್‍ನ ಆಡಿಕ್ಟ್ ವಿಷಯಗಳಲ್ಲಿ ಕ್ಲಿಪ್ ತಯಾರಿಸಬೇಕು. ಗೆದ್ದವರಿಗೆ ಒಂದು ಲಕ್ಷ ದಿರ್ಹಂ ಬಹುಮಾನ.
ಅನಧಿಕೃತ ಮದ್ದುಗಳ ಉಪಯೋಗದ ವಿರುದ್ಧ ಪ್ರತ್ಯಾಘಾತದ ವಿವರಗಳು ಮತ್ತು ಅದನ್ನು ತಡೆಯುವಲ್ಲಿ ಕುಟುಂಬಗಳ ಪಾತ್ರದ ಬಗ್ಗೆಯೂ ವೀಡಿಯೊದಲ್ಲಿ ವಿವರಣೆ ಇರಬೇಕು ಎಂದು ಮಾದಕ ವಸ್ತು ವಿರೋಧಿ ವಿಭಾಗದ ಉಪ ಡೈರಕ್ಟರ್ ಕರ್ನಲ್ ಖಾಲಿದ್ ಬಿನ್ ಮೊಯಾಸಿ ತಿಳಿಸಿದ್ದಾರೆ.
ಯಾವ ದೇಶದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಶೇಖ್ ಹಂದಾನ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಫೊಟೊಗ್ರಾಫಿ ಪ್ರಶಸ್ತಿಗೆ ಸ್ಪರ್ಧೆ ನಡೆಯುತ್ತಿದೆ. ಡಿಸೆಂಬರ್ ಒಂದರಿಂದ ಹದಿನೈದರ ವರೆಗೆ ಪ್ರವೇಶವಿದೆ. ಗೆದ್ದವರಿಗೆ 2020 ಫೆಬ್ರುವರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹಮಾನ ವಿತರಿಸಲಾಗುವುದು. www.Hemaya.ae/clip ಎಂಬ ವೆಬ್ ಸೈಟ್‍ಗೆ ಭೇಟಿ ನೀಡಿ ಸ್ಪರ್ಧೆ ನಿಯಮಗಳನ್ನು ತಿಳಿದುಕೊಳ್ಳಬಹುದು.
IslamKannada News Portal
