Home / ವಾರ್ತೆಗಳು / ರಾಜ್ಯ ನಿಧಿಯಿಂದ ಮದ್ರಸಕ್ಕೆ 188 ಲಕ್ಷ ರೂ. ನೆರವು: ಮಧ್ಯ ಪ್ರದೇಶ ಸರಕಾರ ನಿರ್ಧಾರ

ರಾಜ್ಯ ನಿಧಿಯಿಂದ ಮದ್ರಸಕ್ಕೆ 188 ಲಕ್ಷ ರೂ. ನೆರವು: ಮಧ್ಯ ಪ್ರದೇಶ ಸರಕಾರ ನಿರ್ಧಾರ

ಇಂದೋರ್, ನ.14: ಮದ್ರಸಾಗಳಿಗೆ ಕೊಡುತ್ತಿದ್ದ ಶಾಲೆಯ ಸೌಲಭ್ಯ ಅನುದಾನ ಈ ವರ್ಷದಿಂದ ಸಿಗದಿರುವ ಹಿನ್ನೆಲೆಯಲ್ಲಿ ಮದ್ರಸಾಗಳಿಗೆ ಮಧ್ಯ ಪ್ರದೇಶ ಸರಕಾರ ರಾಜ್ಯ ನಿಧಿಯಿಂದ 188 ಲಕ್ಷ ರೂ. ಸಹಾಯ ಧನ ಮಂಜೂರು ಮಾಡಿದೆ.

ಮಧ್ಯ ಪ್ರದೇಶದ ಗೆಹ್ಲೋಟ್ ಸರಕಾರದ ನಿರ್ಧಾರದಿಂದಾಗಿ ಮದ್ರಸಾಗಳ ನಿರ್ವಹಣೆಯು ಸಂಕಟದಿಂದ ಮುಕ್ತವಾಗಲಿದೆ. ಇಲ್ಲಿ ಕಲಿಯುವ ಮಕ್ಕಳಿಗೆ ಶಿಕ್ಷಣ ಮತ್ತು ಅಗತ್ಯ ಸೌಲಭ್ಯ ಲಭ್ಯಗೊಳಿಸುವುದಕ್ಕೆ ಸಹಾಯಕವಾಗಿದೆ.

ಕೇಂದ್ರ ಸರಕಾರ ರಾಜಸ್ಥಾನದ ಶಾಲಾ ಶಿಕ್ಷಣ ಪರಿಷತ್‍ ಮೂಲಕ ಮದ್ರಸಾ ಬೋರ್ಡಿಗೆ ನೀಡುವ ಹಣವನ್ನು 2018-19 ವಿತ್ತೀಯ ವರ್ಷದಿಂದ ನೀಡುವುದನ್ನು ತಡೆದಿತ್ತು. ಈಗ ರಾಜ್ಯ ಸರಕಾರ ಮದ್ರಸಾಗಳ ನೆರವಿಗೆ ಬಂದಿದೆ. ಮದ್ರಸಾ ಬೋರ್ಡಿನ ಮೂಲಕ ಮದ್ರಸಾ ಆಧುನೀಕರಣ ಯೋಜನೆಯ ಪ್ರಯುಕ್ತ ಸಹಾಯ ಧನ ನೀಡಲು ರಾಜ್ಯ ಸರಕಾರ ಮುಂದೆ ಬಂದಿದೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …