Home / ವಾರ್ತೆಗಳು / ದೆಹಲಿ ಹಿಂಸಾಚಾರ: ಏಳು ಬೇಡಿಕೆಗಳನ್ನು ಮುಂದಿಟ್ಟ ಜಮಾಅತೆ ಇಸ್ಲಾಮೀ ಹಿಂದ್

ದೆಹಲಿ ಹಿಂಸಾಚಾರ: ಏಳು ಬೇಡಿಕೆಗಳನ್ನು ಮುಂದಿಟ್ಟ ಜಮಾಅತೆ ಇಸ್ಲಾಮೀ ಹಿಂದ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಾದ ಹಿಂಸಾಚಾರದ ಬಗ್ಗೆ ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಅಧ್ಯಕ್ಪ ಸೈಯದ್ ಸಆದತುಲ್ಲಾ ಹುಸೇನಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ ಮತ್ತು ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಹಾಗೂ ತಕ್ಪಣವೇ ಶಾಂತಿ ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವ ತುರ್ತು ಅವಶ್ಯಕತೆಯಿದೆ. ರಾಜಕಾರಣಿಗಳು ಹಿಂಸಾಚಾರಕ್ಕೆ ಬಹಿರಂಗವಾಗಿ ಪ್ರಚೋದನೆ ನೀಡಿದ್ದನ್ನು ನೋಡಿದ್ದೇವೆ ಮತ್ತು ಅದನ್ನನುಸರಿಸಿ ಪ್ರತಿಭಟನಾಕಾರರ ಮೇಲೆ ಹಿಂಸಾತ್ಮಕ ದಾಳಿ ನಡೆದಿರುವುದನ್ನೂ ನೋಡಿದ್ದೇವೆ. ಹಿಂಸಾಚಾರವನ್ನು ನಿಯಂತ್ರಿಸಲು ದೆಹಲಿ ಪೊಲೀಸರಿಗೆ ಸಾಧ್ಯವಾಗಲಿಲ್ಲ. ಗಲಭೆಯನ್ನು ತಡೆಯಲು ಏನನ್ನೂ ಮಾಡದ ಪೊಲೀಸರ ಸಮ್ಮುಖದಲ್ಲೇ ಶಸ್ತ್ರಸಜ್ಜಿತ ಗುಂಪುಗಳು ಹತ್ಯೆ ಮತ್ತು ಅಗ್ನಿಸ್ಪರ್ಶದಲ್ಲಿ ತೊಡಗಿದುವು. ಪೊಲೀಸರು ಗಲಭೆಕೋರರೊಂದಿಗೆ ಶಾಮೀಲಾಗಿರುವುದನ್ನು ಕೆಲವು ವೀಡಿಯೊಗಳು ತೋರಿಸಿವೆ. ಮಾತ್ರವಲ್ಲ, ಕೇಂದ್ರ ಸರಕಾರದ ಅಧೀನದಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆಯ ವಿಭಾಗವು ಸಂಪೂರ್ಣ ವಿಫಲವಾಗಿರುವುದನ್ನು ನೋಡುವಾಗ ದುಃಖವಾಗುತ್ತದೆ ಎಂದಿರುವ ಅವರು, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೆಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ:

(1) ಹಿಂಸೆಗೆ ಪ್ರಚೋದನೆಯನ್ನು ನೀಡಿದ ರಾಜ ಕಾರಣಿಗಳನ್ನು ತಕ್ಪಣವೇ ಬಂಧಿಸಬೇಕು.

(2) ಮುಖ್ಯಮಂತ್ರಿಗಳು, ಶಾಸಕರು, ದೆಹಲಿಯ ಸಂಸದರು ಹಾಗೂ ಪ್ರಮುಖ ಧಾರ್ಮಿಕ ಮುಖಂಡರು ಗಲಭೆ ಪೀಡಿತ ಪ್ರದೇಶಗಳಲ್ಲಿ ಯಾತ್ರೆಗೈದು ಶಾಂತಿಗಾಗಿ ಮನವಿ ಮಾಡಬೇಕು. ಜಮಾಅತೆ ಇಸ್ಲಾಮೀ ಹಿಂದ್ ಈಗಾಗಲೇ ಸಮುದಾಯದ ಮುಖಂಡರ ನಿಯೋಗವನ್ನು ಈ ಉದ್ಧೇಶಕ್ಕಾಗಿ ನಿಯೋಜಿಸಿದೆ.

(3) ಗಲಭೆ ನಡೆಯುತ್ತಿರುವ ಪ್ರದೇಶಗಳಲ್ಲಿ ಕಫ್ರ್ಯೂ ವಿಧಿಸಬೇಕು.

(4) ಕಾನೂನು ಉಲ್ಲಂಘಿಸುವ ಮತ್ತು ಹಿಂಸಾಚಾರದಲ್ಲಿ ತೊಡಗಿರುವವರ ವಿರುದ್ಧ ದೆಹಲಿ ಪೊಲೀಸರು ಅವರ ಧಾರ್ಮಿಕ ಮತ್ತು ರಾಜಕೀಯ ಸಂಬಂಧವನ್ನು ಲೆಕ್ಕಿಸದೆ ಕಾರ್ಯ ನಿರ್ವಹಿಸಬೇಕು. ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಪೊಲೀಸರು ಅತ್ಯಂತ ಪೂರ್ವಾಗ್ರಹ ಪೀಡಿತ ರೀತಿಯಲ್ಲಿ ವರ್ತಿಸುತ್ತಿದ್ದಾರೆಂದು ನಮಗೆ ಗೊತ್ತಾಗಿದೆ. ಮುಗ್ಧ ನಾಗರಿಕರು, ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಅಧಿಕಾರಿಗಳ ವಿರುದ್ಧವೂ ಪೊಲೀಸರು ಕ್ರಮ ಕೈಗೊಳ್ಳಬೇಕು.

(5) ಸೋಷಿಯಲ್ ಮೀಡಿಯ ಮತ್ತು ಕೆಲವು ಟಿವಿ ಚಾನೆಲ್‍ಗಳಲ್ಲಿ ಜನರನ್ನು ಪರೋಕ್ಪವಾಗಿ ಹಿಂಸೆ ಮತ್ತು ದ್ವೇಷದತ್ತ ಪ್ರಚೋದಿಸಲಾಗುತ್ತಿದ್ದು, ಅಂಥವರನ್ನು ಪತ್ತೆ ಹಚ್ಚಿ ನಿರ್ಬಂಧಿಸಬೇಕು.

(6) ಶಾಹೀನ್‍ಬಾಗ್ ಸಹಿತ ದೆಹಲಿಯಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಎಲ್ಲ ಪ್ರತಿಭಟನೆಗಳಿಗೂ ಪೊಲೀಸರು ರಕ್ಪಣೆ ನೀಡಬೇಕು.

(7) ಹಿಂಸಾಚಾರದ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ಸಮಿತಿಯಿಂದ ವಿಚಾರಣೆ ನಡೆಸಬೇಕು.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …