Home / ವಾರ್ತೆಗಳು / ಕೊಡಗಿನ ಸಂತ್ರಸ್ತರನ್ನು ಕೈಬಿಡದ ಸೇವಾ ಸಂಸ್ಥೆಗಳು; ನಾಳೆ 50 ಮನೆಗಳಿಗೆ ಶಂಕು ಸ್ಥಾಪನೆ

ಕೊಡಗಿನ ಸಂತ್ರಸ್ತರನ್ನು ಕೈಬಿಡದ ಸೇವಾ ಸಂಸ್ಥೆಗಳು; ನಾಳೆ 50 ಮನೆಗಳಿಗೆ ಶಂಕು ಸ್ಥಾಪನೆ

ಸಿದ್ಧಾಪುರ: ಕಳೆದ ಆಗಸ್ಟ್ ತಿಂಗಳಿನಲ್ಲಿ ಕೊಡಗು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಮಹಾ ಮಳೆಯಿಂದ ಪ್ರವಾಹಕ್ಕೆ ತುತ್ತಾಗಿ ಸುಮಾರು ಇನ್ನೂರರಷ್ಟು ಮನೆಗಳು ಕೊಚ್ಚಿ ಹೋಗಿ, ನೂರಾರು ಮನೆಗಳು ಹಾನಿಗೀಡಾಗಿದ್ದವು. ಸಾವಿರಾರು ಮಂದಿ ಸಂಕಷ್ಟಕ್ಕೀಡಾಗಿ ಅಪಾರ ನಾಶ-ನಷ್ಟಗಳು ಸಂಭವಿಸಿದ್ದವು. ಪ್ರಸ್ತುತ ಸಂದರ್ಭದಲ್ಲಿ ಸ್ಥಳೀಯ ಜಮಾಅತೆ ಇಸ್ಲಾಮೀ ಹಿಂದ್ ಹ್ಯೂಮೇನಿಟೇರಿಯನ್ ರಿಲೀಫ್ ಸೊಸೈಟಿಯ ಕಾರ್ಯಕರ್ತರು ಧಾವಿಸಿ ಸಂತ್ರಸ್ತರಿಗೆ ಹಲವು ರೀತಿಯ ಸಹಾಯ-ಸಹಕಾರಗಳನ್ನು ಮಾಡಿದ್ದರು. ಸಿದ್ಧಾಪುರ ಎಂ.ಜಿ. ರಸ್ತೆಯಲ್ಲಿ ಕೊಡಗು ರಿಲೀಫ್ ಸೆಲ್‍ನ್ನು ತೆರೆದು ಹಲವು ತಿಂಗಳುಗಳಿಂದ ನೆರೆಪೀಡಿತರಿಗೆ ನೆರವು ನೀಡುತ್ತಿದೆ. ಕಳೆದ ನವೆಂಬರ್ 5 ರಂದು ಸಂತ್ರಸ್ತರಿಗೆ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹದಿಮೂರು ಮನೆಗಳ ಪೈಕಿ ಮಡಿಕೇರಿಯ ಎಂಟು ಹಾಗೂ ಸಿದ್ಧಾಪುರದಲ್ಲಿ 5 ಮನೆಗಳನ್ನು ಜಾತಿ ಮತ್ತು ಭೇದವಿಲ್ಲದೇ ವಿತರಿಸಲಾಯಿತು.

ಇದೀಗ ಸಿದ್ಧಾಪುರದ ನೆಲ್ಯ ಹುದಿಕೇರಿ ನಲ್ವತ್ತೆಕ್ರೆ ಎಂಬಲ್ಲಿ ದಾನಿಯೋರ್ವರು ನೀಡಿದ 2 ಎಕರೆ ಸ್ಥಳದಲ್ಲಿ ಸರಕಾರದಿಂದ ಈ ತನಕ ವಿವಿಧ ಕಾರಣಗಳಿಂದ ಯಾವುದೇ ಸೌಲಭ್ಯ ಲಭಿಸಿಲ್ಲದ ಸಂತ್ರಸ್ತರನ್ನು ಗುರುತಿಸಿಕೊಂಡು ಸುಮಾರು 50 ಮನೆಗಳನ್ನು ಪೀಪಲ್ಸ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್, ಎಚ್.ಡಬ್ಲ್ಯೂ.ಎ. ಚಾರಿಟೇಬಲ್ ಫೌಂಡೇಶನ್ ಹಾಗೂ ಹ್ಯೂಮೇನಿಟೇರಿಯನ್ ರಿಲೀಫ್ ಸೊಸೈಟಿ ಇದರ ಸಹಯೋಗದೊಂದಿಗೆ ನಿರ್ಮಿಸಿಕೊಡಲು ಯೋಜನೆಯನ್ನು ಹಾಕಿಕೊಂಡಿದ್ದು, 2020 ಮಾರ್ಚ್ 4 ರಂದು ಸಂಜೆ 4.30ಕ್ಕೆ ಸಿದ್ಧಾಪುರ ಹಿರಾ ಸೆಂಟರ್ ನ ಪ್ರಾಂಗಣದಲ್ಲಿ ಶುಂಕು ಸ್ಥಾಪನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಜ.ಇ. ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ| ಬೆಳಗಾಮಿ ಮುಹಮ್ಮದ್ ಸಾದ್ ಬೆಂಗಳೂರು, ಕೇರಳ ರಾಜ್ಯ ಉಪಾಧ್ಯಕ್ಷರಾದ ಜ| ಮುಜೀಬುರ್ರಹ್ಮಾನ್ ಪಿ., ಪೀಪಲ್ಸ್ ಪೌಂಡೇಶನ್ ಚೇರ್ ಮೆನ್ ಜ| ಎಂ.ಕೆ. ಮುಹಮ್ಮದಲಿ, ಜ.ಇ. ಹಿಂದ್ ರಾಜ್ಯ ಕಾರ್ಯದರ್ಶಿ ಜ| ಅಕ್ಬರಲಿ ಉಡುಪಿ, ಎಚ್.ಆರ್.ಎಸ್. ರಾಜ್ಯ ಕಾರ್ಯದರ್ಶಿ ಜ| ಮುಹಮ್ಮದ್ ಮರಕಡ, ಜ.ಇ. ಹಿಂದ್ ಕೇರಳ ರಾಜ್ಯ ಜತೆ ಕಾರ್ಯದರ್ಶಿ ಜ| ಸಾದಿಕ್ ಉಳಿಯಲ್ ಮತ್ತು ವಿವಿಧ ಗಣ್ಯ ವ್ಯಕ್ತಿಗಳು ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಜ.ಇ. ಹಿಂದ್ ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಮ್ ಯು ತಿಳಿಸಿದ್ದಾರೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …