ಕರುವಾರಕುಂಡ್, ಮೇ.16: ಪ್ರಮುಖ ವಿದ್ವಾಂಸ ಗ್ರಂಥಕಾರ ಶಾಂತಪುರಂ ಅಲ್ ಜಾಮಿಯಾದ ಅಧ್ಯಕ್ಷರಾದ ಎಂ. ಕುಂಞಿಮುಹಮ್ಮದ್ ಮೌಲವಿ(74)ನಿಧರಾದರು. ವೆಲ್ಲೂರ್ ಬಾಖಿಯಾತ್ತುಸ್ಸಾಲಿಹತ್ನಿಂದ ಪದವಿ ಪಡೆದ ಬಳಿಕ ಜಮಾಅತೆ ಇಸ್ಲಾಮಿ ಹಿಂದ್ ಇದರ ವಿವಿಧ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಅವರು ಮುಸ್ಲಿಂ ವಾರೀಸು ಹಕ್ಕುಗಳ ಕುರಿತು ಹೆಚ್ಚು ತಜ್ಞ ಜ್ಞಾನವನ್ನು ಹೊಂದಿದ್ದರು. ಈ ವಿಷಯದಲ್ಲಿ ಅವರು ಗ್ರಂಥಗಳನ್ನು ರಚಿಸಿದ್ದಾರೆ. ಶಾಂತಪುರಂ ಮೊಹಲ್ಲ ಅಸಿಸ್ಟೆಂಟ್ ಖಾಝಿ, ಕರುವಾರಕುಂಡ್ ಐಡಿಯಲ್ ಟ್ರಸ್ಟ್ನ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು. ಮೌಲವಿ ಅವರು ಕರುವಾರಕುಂಡು ಪುಲ್ವೇಟ್ಟದ ದಿವಂಗತ ಮಠತ್ತೊಡಿಗ ಕುಂಞಿ ಸೂಫೀ ಹಾಜಿ ಹಾಗೂ ಆಯಿಶಾ ದಂಪತಿಗಳ ಪುತ್ರರಾಗಿದ್ದಾರೆ.
ಆಟ್ಟುಪ್ಪಾರ ಫಾತಿಮಾ ಪತ್ನಿ, ನಾಲ್ವರು ಮಕ್ಕಳನ್ನು ಮೃತರು ಅಗಲಿದ್ದಾರೆ. ಜಮಾಅತೆ ಇಸ್ಲಾಮಿ ಕೇರಳ ಘಟಕಾಧ್ಯಕ್ಷ ಎಂ.ಐ.ಅಬ್ದುಲ್ ಅಝೀಝ್ ಮುಂತಾದವರು ಜನಾಝಾ ನಮಾಝ್ನಲ್ಲಿ ಪಾಲ್ಗೊಂಡರು.
IslamKannada News Portal
