ನವದೆಹಲಿ,ಜೂ.10: ದೆಹಲಿ ಅಲ್ಪಸಂಖ್ಯಾತ ಆಯೋಗವು 2020ನೇ ಸಾಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಪ್ರಶಸ್ತಿಗಳನ್ನು ಘೋಷಿಸಿದ್ದು, ಈ ಪ್ರಶಸ್ತಿಗಳಲ್ಲಿ ಅಂತರ್ ಧರ್ಮೀಯ ಸಾಮರಸ್ಯಕ್ಕಾಗಿ ಮುಹಮ್ಮದ್ ಇಕ್ಬಾಲ್ ಮುಲ್ಲಾ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕದವರಾದ ಇಕ್ಬಾಲ್ ಮುಲ್ಲಾ ಇಸ್ಲಾಮೀ ವಿದ್ಯಾರ್ಥಿ ಸಂಘಟನೆಯಾದ ಎಸ್‌ಐಓ ಇದರ ಕರ್ನಾಟಕ ಮತ್ತು ಗೋವಾ ವಲಯ ಅಧ್ಯಕ್ಷರಾಗಿ, ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ದೀರ್ಘಕಾಲದಿಂದ ಜಮಾಅತೆ ಇಸ್ಲಾಮಿ ಹಿಂದ್’ನ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು ದೆಹಲಿಯಲ್ಲಿ ನೆಲೆಸಿದ್ದಾರೆ. ತಮ್ಮ ಜೀವನವನ್ನು ಅಂತರ್ಧರ್ಮಿಯ ಸಾಮರಸ್ಯ, ಶಾಂತಿ ಮತ್ತು ಮಾನವ ಸೇವೆಗೆ ಸಮರ್ಪಿಸಿ ಕೊಂಡಿರುವ ಅವರಿಗೆ ಈ ಪ್ರಶಸ್ತಿ ನೀಡಿರುವುದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ.
ಇಕ್ಬಾಲ್ ಮುಲ್ಲಾರವರ ವ್ಯಕ್ತಿತ್ವವು ಶಿಸ್ತು, ತ್ಯಾಗ, ಪ್ರೀತಿ, ಸೌಮ್ಯತೆ ಮತ್ತು ನಿಸ್ವಾರ್ಥತೆಗಳಿಂದ ಕೂಡಿದೆ ಎಂಬುದು ಅವರ ಪರಿಚಿತರೆಲ್ಲರಿಗೂ ತಿಳಿದ ವಿಚಾರ. ಈ ಪ್ರಶಸ್ತಿ ಅವರೊಂದಿಗೆ ದುಡಿದವರಿಗೆ ವಿಶೇಷವಾಗಿ ಕರ್ನಾಟಕದ ಸಮುದಾಯ ಬಾಂಧವರಿಗೆ ಸಂದ ಗೌರವವಾಗಿದೆ.
IslamKannada News Portal





