Home / ವಾರ್ತೆಗಳು / ಜಮಾಅತೆ ಇಸ್ಲಾಮೀ ಸಮಾಜ ಸೇವಾ ಘಟಕ ಉಳ್ಳಾಲ ವತಿಯಿಂದ ಮಾನವೀಯ ಸೇವೆ

ಜಮಾಅತೆ ಇಸ್ಲಾಮೀ ಸಮಾಜ ಸೇವಾ ಘಟಕ ಉಳ್ಳಾಲ ವತಿಯಿಂದ ಮಾನವೀಯ ಸೇವೆ

ಉಳ್ಳಾಲ,ಜೂ.13: ಗ್ಯಾಂಗ್ರೀನ್(ಅಂಗ ಕೊಳೆತ) ರೋಗದಿಂದಾಗಿ ಕಾಲು ಕಳೆದುಕೊಂಡ ಉಳ್ಳಾಲದ ಸೋಮೇಶ್ವರ ನಿವಾಸಿ ಪುಷ್ಪಕಿರಣ್ ರವರ ಮನೆಗೆ ಉಳ್ಳಾಲ ಜಮಾಅತೆ ಇಸ್ಲಾಮೀ ಹಿಂದ್ ನ ಸಮಾಜ ಸೇವಾ ವಿಭಾಗದ ಸದಸ್ಯರು ದ್ವಿತೀಯ ಬಾರಿಗೆ ಭೇಟಿ ನೀಡಿದರು.

ದಾನಿಗಳಿಂದ ಸಂಗ್ರಹಿಸಿದ 53000 ರೂಪಾಯಿ ಧನಸಹಾಯ ಹಾಗೂ 3000/- ರುಪಾಯಿಯ ರೇಷನ್ ಕಿಟ್‌ನ್ನು ನೀಡಿ ಸಾಂತ್ವಾನದ ಮಾತಿನ ಮೂಲಕ ಭರವಸೆಯನ್ನು ನೀಡಲಾಯಿತು. ಪುಷ್ಪಕಿರಣ್ ರವರಿಗೆ ಸಹಾಯ ನೀಡಿ ಸಹಕರಿಸಿದ ಎಲ್ಲಾ ದಾನಿಗಳಿಗೆ ಜಮಾಅತೆ ಇಸ್ಲಾಮೀ ಹಿಂದ್ ಧನ್ಯವಾದ ಸಲ್ಲಿಸಿದೆ‌.

ಈ ಸಂಧರ್ಭದಲ್ಲಿ ಸಮಾಜ ಸೇವಾ ವಿಭಾಗದ ಸಂಚಾಲಕರಾದ ಜನಾಬ್ ಅಹ್ಮದ್ ಶರೀಫ್, ಝಕೀರ್ ಇಖ್ಲಾಸ್, ಶಂಶುದ್ದೀನ್ ಬಿ.ಕೆ, FITU ನ ಉಳ್ಳಾಲ ಅಧ್ಯಕ್ಷರಾದ ಅಬ್ದುಲ್ ಜಲೀಲ್ ರವರು ಉಪಸ್ಥಿತರಿದ್ದರು.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …