Home / ವಾರ್ತೆಗಳು / ಜಮಾಅತೆ ಇಸ್ಲಾಮೀ ಹಿಂದ್‌ನಿಂದ, ಮತ್ತೆ ಬಡ ಕುಟುಂಬಕ್ಕೆ ಮನೆ ಹಸ್ತಾಂತರ!

ಜಮಾಅತೆ ಇಸ್ಲಾಮೀ ಹಿಂದ್‌ನಿಂದ, ಮತ್ತೆ ಬಡ ಕುಟುಂಬಕ್ಕೆ ಮನೆ ಹಸ್ತಾಂತರ!

ಮಂಗಳೂರು: ಹೌದು, ಕನಸ್ಸಲ್ಲೂ ಊಹಿಸಲು ಸಾಧ್ಯವಿಲ್ಲದ್ದಿದು. ಮನೆ ಬಿಡಿ, ಸ್ವಂತದ್ದೆಂದು ಕನಿಷ್ಠ ಒಂದು ಕೋಣೆಯನ್ನೂ ನಾನು ಊಹಿಸಿರಲಿಲ್ಲ. ಅಲ್‌ ಹಮ್ದುಲಿಲ್ಲಾಹ್‌, ಅಲ್ಲಾಹನು ನಮ್ಮನ್ನು ಈ ಅವಸ್ಥೆಗೆ ತಲುಪಿಸಿದ… ವಿಧವೆಯ ಮನಸ್ಸು ತುಂಬಿದ ಮಾತಿದು.

ಹೌದು, ಕಳೆದ ಹಲವು ವರ್ಷಗಳಿಂದ ತನ್ನ ನಾಲ್ಕು ಅನಾಥ ಹೆಣ್ಣು ಮಕ್ಕಳೊಂದಿಗೆ, ಬಹಳ ಸಂಕಷ್ಟದ ಬದುಕು ಸವೆಸುತ್ತಿದ್ದ ವಿಧವೆಯೋರ್ವರಿಗೆ, ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ಶಾಖೆಯ ವತಿಯಿಂದ, ಬಂಟ್ವಾಳ ತಾಲೂಕಿನ ಕುಕ್ಕಾಜೆ ಎಂಬಲ್ಲಿ, ಎಲ್ಲ ಮೂಲಭೂತ ಸವಲತ್ತುಗಳನ್ನೊಳಗೊಂಡ ಚೆಂದದ ಮನೆಯೊಂದನ್ನು ಹಸ್ತಾಂತರಿಸಲಾಯಿತು.

ಸೋಷಿಯಲ್ ಮೀಡಿಯಾದ ಚಿರಪರಿಚಿತ ಸಮಾಜ ಸೇವಕ ಆಶಿಕ್‌ ಕುಕ್ಕಾಜೆ ಸರಳವಾಗಿ ಉದ್ಘಾಟಿಸಿ, ಸಂಸ್ಥೆಯ ಕಾರ್ಯ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಮಾಅತೆ ಇಸ್ಲಾಮೀ ಹಿಂದ್, ಪಾಣೆಮಂಗಳೂರು ಶಾಖೆಯ ಅಧ್ಯಕ್ಷರಾದ ಜನಾಬ್‌ ಮುಖ್ತಾರ್‌ ಅಹ್ಮದ್‌ ಸಂದರ್ಭೋಚಿತ ಉಪದೇಶ ನೀಡಿದರು. ಸಮಾಜ ಸೇವಾ ಘಟಕ, ಪಾಣೆಮಂಗಳೂರು ಶಾಖೆಯ ಅಧ್ಯಕ್ಷರಾದ ಮುಸ್ತಫಾ ಎಂ‌. ಹೆಚ್‌., ಸದಸ್ಯರಾದ ಆದಮ್‌ ಸಾಹೇಬ್, ಶಂಶೀರ್ ಮೆಲ್ಕಾರ್‌ ಉಪಸ್ಥಿತರಿದ್ದರು.

ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌, ಮಂಗಳೂರು ಸದಸ್ಯರಾದ ಅಬ್ದುಲ್ ಕರೀಮ್‌, ಬೆಂಗರೆ ಒಟ್ಟು ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದವನ್ನರ್ಪಿಸಿದರು. ಸರ್ವ ರೀತಿಯಲ್ಲೂ ಸಹಕರಿಸಿದ ಎಲ್ಲರನ್ನೂ ಅಲ್ಲಾಹನು ಸ್ವೀಕರಿಸಿ ತಕ್ಕ ಪ್ರತಿಫಲ ನೀಡಿ ಅನುಗ್ರಹಿಸಲಿ. ವಿಶೇಷವಾಗಿ ಆರ್ಥಿಕ ಸಹಾಯವನ್ನು ಒದಗಿಸಿದ ದಾನಿಗಳ ವ್ಯಾಪಾರ-ವ್ಯವಹಾರಗಳಲ್ಲಿ ಅಲ್ಲಾಹನು ಸದಾ ಸಮೃದ್ಧಿಯನ್ನು ದಯಪಾಲಿಸಲಿ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …