ಪಂಜಾಬ್,ಜು.11: 330 ಕ್ವಿಂಟಾಲ್ ಗೋಧಿಯೊಂದಿಗೆ ಸಿಖ್ಖರ ಆರಾಧನಾಲಯವಾದ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಮಲೆರ್ಕೋಟ್ಲಾದ ಮುಸ್ಲಿಮರು ತಲುಪಿದರು. ಸಿಖ್ ನಂಬಿಕೆಯ ಒಂದು ಭಾಗವೆಂದೇ ಪರಿಗಣಿಸಲ್ಪಟ್ಟ ಲಂಗರ್(ಉಚಿತ ಆಹಾರ) ವ್ಯವಸ್ಥೆ ಮಾಡುವಲ್ಲಿ ಗೋಲ್ಡನ್ ಟೆಂಪಲ್ ತೊಂದರೆ ಎದುರಿಸುತ್ತಿದೆ ಎಂಬುದನ್ನು ಅರಿತಾಗ ಸಹೋದರತ್ವ ಹಾಗೂ ಸೌಹಾರ್ದತೆಯ ಪ್ರತೀಕವಾಗಿ ಈ ದೃಶ್ಯವು ಕಂಡು ಬಂತು.
ಗೋಲ್ಡನ್ ಟೆಂಪಲ್‌ನಲ್ಲಿ ಪ್ರತಿದಿನ ಸುಮಾರು 1 ಲಕ್ಷ ಜನರು ಲಂಗರ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. “ಸಂಪನ್ಮೂಲಗಳ ಕೊರತೆ ಇದೆ ಎಂದು ನಾವು ಕೇಳಿದ್ದೇವು. ಆದ್ದರಿಂದ, ನಾವು 330 ಕ್ವಿಂಟಾಲ್ ಗೋಧಿ ಪೂರೈಸಿದೆವು. 1 ಲಕ್ಷ ಜನರಿಗೆ ಆಹಾರ ನೀಡಲು ಇದು ಸಾಕಾಗುವುದಿಲ್ಲ, ಆದ್ದರಿಂದ ನಾವು ಹೆಚ್ಚಿನ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುತ್ತಿದ್ದೇವೆ ”ಎಂದು ಸಿಖ್-ಮುಸ್ಲಿಂ ಸಂಜ ಸಂಗಥನ್ ನಿರ್ದೇಶಕ ಡಾ.ನಸೀರ್ ಅಖ್ತರ್ ಹೇಳಿದರು.
“ಜನರು ಸಹ 1.5 ಲಕ್ಷ ರೂ. ದಾನ ಮಾಡಿದುದರಿಂದ ಗೋಧಿ ಖರೀದಿಸಲು ಸಹಕಾರಿಯಾಯ್ತು ”ಎಂದು ಸಂಘಟನೆಯ ಸದಸ್ಯ ಮೊಹಮ್ಮದ್ ಪರ್ವೇಜ್ ಹೇಳಿದರು.
ಗೋಧಿ ತುಂಬಿದ ಟ್ರಕ್‌ಗಳೊಂದಿಗೆ ಮುಸ್ಲಿಮರನ್ನು ಸಿಖ್ ಸಮುದಾಯವು ಗೌರವದಿಂದ ಸ್ವಾಗತಿಸಿತಲ್ಲದೇ, ಅವರಿಗೆ ಲಂಗಾರ್ ಕೂಡ ಬಡಿಸಲಾಯಿತು.
ಸಿಖ್ಖರೊಂದಿಗೆ ಯಾವುದೇ ವಿವಾದಗಳನ್ನು ಹೊಂದಿರದ ಪಂಜಾಬ್‌ನ ಏಕೈಕ ಮುಸ್ಲಿಂ ಪ್ರಾಬಲ್ಯದ ಪ್ರದೇಶ ಮಲೆರ್ಕೊಟ್ಲಾ ಆಗಿದೆ. ಈ ಸಹೋದರತ್ವವನ್ನು 1947 ರ ವಿಭಜನೆಯ ಕಾಲದಿಂದಲೂ ಗುರುತಿಸಲಾಗುತ್ತಿದೆ.
IslamKannada News Portal
