Home / ವಾರ್ತೆಗಳು / ಜಮಾಅತೆ ಇಸ್ಲಾಮೀ ಹಿಂದ್‌ ನಿಂದ ವಿದ್ಯುತ್ ಆಮ್ಲಜನಕ ವಿಷನ್ ಹಸ್ತಾಂತರ

ಜಮಾಅತೆ ಇಸ್ಲಾಮೀ ಹಿಂದ್‌ ನಿಂದ ವಿದ್ಯುತ್ ಆಮ್ಲಜನಕ ವಿಷನ್ ಹಸ್ತಾಂತರ

ಮಂಗಳೂರು: ಮಂಗಳೂರು ತಾಲೂಕಿನ ತಲಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿಲಿಕೂರು ಎಂಬಲ್ಲಿಯ ಬಡ ಕುಟುಂಬವೊಂದರಲ್ಲಿ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಕೊರೋನ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿರುವುದರಿಂದ ವಿದ್ಯುತ್ ಆಕ್ಸಿಜನ್ ಅವಶ್ಯಕತೆ ಇದ್ದು, ದಾನಿಗಳು ವಿದ್ಯುತ್ ಆಮ್ಲಜನಕದ ಮಿಷನ್ ನೀಡಲು ಮುಂದಾಗಬೇಕೆಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಈ ಸಂದೇಶವನ್ನು ಗಮನಿಸಿ, ಸ್ಪಂದಿಸಿದ ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಹಾಗೂ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ 50 ಸಾವಿರ ಮೊತ್ತದ ಬೆಲೆ ಬಾಳುವ ಹೊಸ ವಿದ್ಯುತ್ ಆಕ್ಸಿಜನ್ ಮಿಷನ್ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ.

ರೋಗಿಯ ಮನೆಗೆ ಭೇಟಿ ನೀಡಿದ ಜಮಾಅತೆ ಇಸ್ಲಾಮೀ ಹಿಂದ್‌ ಉಳ್ಳಾಲ ಘಟಕದ ಉಪಾಧ್ಯಾಕ್ಷರಾದ ಅಬ್ದುರ್ರಹೀಂ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ. ಕ. ಜಿಲ್ಲೆಯ ಉಪಾಧ್ಯಕ್ಷರಾದ ಸಿ.ಹೆಚ್.ಅಬ್ದುಸ್ಸಲಾಮ್, ಡಬ್ಲ್ಯೂಪಿಐ ಉಳ್ಳಾಲ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಹನೀಫ್ ತಲಪಾಡಿ ಈ‌‌ ಸಂದರ್ಭದಲ್ಲಿ ಉಪಸ್ಥಿತರಿದ್ದು, ರೋಗಿಗೆ ಆಕ್ಸಿಜನ್ ಮಿಷನ್ ಅನ್ನು ಹಸ್ತಾಂತರಿಸಿದರು.

ಈ ಸೇವೆಗೆ ಸಹಕಾರ ನೀಡಿದ ದಾನಿಗಳಿಗೆ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ಮತ್ತು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದವರಿಗೆ ಕೆ.ಸಿ.ರೋಡ್ ನ ಸೋಶಿಯಲ್ ಆಕ್ಟಿವಿಟೀಸ್ ಡ್ರೈವರ್ಸ್ ಅಸೋಸಿಯೇಷನ್‌ನ ಪದಾಧಿಕಾರಿಗಳು ಧನ್ಯವಾದ ಸಲ್ಲಿಸಿದ್ದಾರೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …