“ರಿಸಾಲ ಯೆ ದೀನಿಯ್ಯಾತ್’” – ಇದು ವಿಶ್ವವಿಖ್ಯಾತ ವಿದ್ವಾಂಸರಾದ ಸಯ್ಯದ್ ಅಬುಲ್ ಆಲಾ ಮೌದೂದಿಯವರು(ರ) 1937 ರಲ್ಲಿ ರಚಿಸಿದ ಸುಪ್ರಸಿದ್ಧ ಉರ್ದು ಸಾಹಿತ್ಯವಾಗಿದೆ.
ಈ ಪುಸ್ತಕವು ಈಗಾಗಲೇ ದೇಶದ ಎಲ್ಲ ರಾಜ್ಯ ಭಾಷೆಗಳಲ್ಲಿಯೂ ಪ್ರಕಟಗೊಂಡಿದೆ ಮತ್ತು ವಿಶ್ವದ ನಾನಾ ಭಾಷೆಗಳಿಗೆ ಅನುವಾದಗೊಂಡಿದೆ. ಇಂಗ್ಲೀಷ್ ನಲ್ಲಿ ಇದು Towards Understanding Islam ಎಂಬ ಹೆಸರಿನಲ್ಲಿ ಖ್ಯಾತವಾಗಿದೆ. ಅನೇಕ ಶಾಲಾ ಕಾಲೇಜುಗಳಲ್ಲಿ ಇಸ್ಲಾಮ್’ನ ಅಧ್ಯಯನಕ್ಕಾಗಿ ಈ ಪುಸ್ತಕವನ್ನು ಪಠ್ಯವಾಗಿ ಕಲಿಸಲಾಗುತ್ತಿದೆ.
ಶಾಂತಿ ಪ್ರಕಾಶನವು – ” ಇಸ್ಲಾಮ್ ಧರ್ಮ “ ಎಂಬ ಹೆಸರಿನಲ್ಲಿ ಈ ಪುಸ್ತಕವನ್ನು ಪ್ರಕಟಿಸಿದ್ದು; ಇಬ್ರಾಹೀಮ್ ಸಯೀದ್ ರವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ, ಇದು ಈಗಾಗಲೇ 25 ಬಾರಿ ಮರು ಮುದ್ರಣಗೊಂಡು ಸಾವಿರಾರು ಓದುಗರನ್ನು ತಲುಪಿದೆ.
ಇಸ್ಲಾಮ್ ಎಂದರೆ ಏನು …ಎಂಬುದನ್ನು ವಸ್ತುನಿಷ್ಠವಾಗಿ ಮತ್ತು ಬಹಳ ಸರಳವಾಗಿ ವಿವರಿಸಿರುವ ಈ ಕೃತಿಯು ಮುಸ್ಲಿಂ ಮತ್ತು ಮತ್ತು ಮುಸ್ಲಿಮೇತರ ದೇಶ ಬಾಂಧವರಿಗೆ ಅಧ್ಯಯನಶೀಲ ಕೃತಿಯಾಗಿದೆ.
ಪುಟಗಳು:128 | ಮುಖಬೆಲೆ :90
▬▬▬● *ಶಾಂತಿ ಪ್ರಕಾಶನ* ●▬▬▬*
+91 9448696490 | +91 9449333496*
IslamKannada News Portal
