Home / ವಾರ್ತೆಗಳು / ‘ನನ್ನ ಪ್ರೀತಿಯ ಧರ್ಮ’ ಕೃತಿ ಪರಿಚಯ

‘ನನ್ನ ಪ್ರೀತಿಯ ಧರ್ಮ’ ಕೃತಿ ಪರಿಚಯ

ತಮಿಳುನಾಡಿನ ಅಣ್ಣಾ ಡಿಎಂಕೆ ಪಕ್ಷದ ಶ್ರೀ ಅಡಿಯಾರ್ ಅವರು ಪತ್ರಿಕಾ ರಂಗ, ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರದಲ್ಲಿದಲ್ಲಿ ಅತ್ಯಂತ ಪ್ರಭಾವಿ ಮತ್ತು ವಿಶೇಷ ವ್ಯಕ್ತಿಯಾಗಿದ್ದವರು . ಬಾಲ್ಯದಿಂದಲೇ ಅವರಿಗೆ ಮುಸ್ಲಿಮರ ಜೊತೆ ಉತ್ತಮ ನಂಟಿತ್ತು. ಈ ಸ್ನೇಹ ಸಹವಾಸವೇ ಮುಂದೆ ಅವರಿಗೆ ಇಸ್ಲಾಮನ್ನು ಅರಿಯುವ ಸದವಕಾಶವನ್ನು ಒದಗಿಸಿತ್ತು.

ತುರ್ತುಪರಿಸ್ಥಿತಿಯ ಸಂದರ್ಭ ಮೀಸಾ ಕಾಯ್ದೆಯನ್ವಯ ಬಂದಿಸಲ್ಪಟ್ಟಿದ್ದ ಶ್ರೀ ಅಡಿಯಾರ್ ಅವರಿಗೆ ಇಸ್ಲಾಮ್ ಧರ್ಮದ ಅಧ್ಯಯನ ನಡೆಸುವ ಸಂದರ್ಭವಕಾಶವು ಒದಗಿ ಬಂತು, ಒಂದೂವರೆ ವರ್ಷದ ಜೈಲು ವಾಸದಲ್ಲಿ ಅವರು ಇಸ್ಲಾಮಿನ ಕುರಿತು ಗಾಢವಾದ ಅಧ್ಯಯನ ನಡೆಸಿದರು.

ಬಿಡುಗಡೆಯ ನಂತರ ಶ್ರೀ ಅಡಿಯಾರ್ ಅವರು ನೀರೋಟ್ಟಮ್ ” ಪತ್ರಿಕೆಯ ಸಂಪಾದಕರಾಗಿ ಕರ್ತವ್ಯದಲ್ಲಿದ್ದರು, ಆ ಸಂದರ್ಭದಲ್ಲಿ ಅವರು ‘ನಾನ್ ಕಾದಲಿಕ್ಕುಮ್ ಇಸ್ಲಾಮ್ ‘ (ನಾನು ಪ್ರೀತಿಸುವ ಇಸ್ಲಾಮ್) ಎಂಬ ಲೇಖನ ಮಾಲೆಯನ್ನು ಅದೇ ದೈನಿಕದಲ್ಲಿ ಧಾರವಾಹಿಯಾಗಿ ಬರೆಯಲು ಆರಂಭಿಸಿದರು. ಅತ್ಯಂತ ಮನಮುಟ್ಟುವ ಶೈಲಿಯಲ್ಲಿದ್ದ ಅವರ ಬರಹಗಳು ಸಾವಿರಾರು ಜನರ ಹೃದಯಗಳನ್ನು ತಟ್ಟಿದವು , ಹಲವರ ಮನಸ್ಸುಗಳನ್ನು ಗೆದ್ದವು , ಅನೇಕರ ಭಾವನೆಗಳು ಸೂರೆಗೊಂಡವು…..!

ಈ ಲೇಖನ ಪರಂಪರೆಯನ್ನು ಬರೆಯುವಾಗ ಶ್ರೀ ಅಡಿಯಾರ್ ಅವರು ಮುಸ್ಲಿಂ ಆಗಿರಲಿಲ್ಲ, ಮುಂದೆ ಅವರು 1987 ರ ಜೂನ್ 6 ರಂದು ಇಸ್ಲಾಮ್ ಸ್ವೀಕರಿಸಿ ಅಬ್ದುಲ್ಲಾ ಎಂದು ನಾಮಕರಣ ಮಾಡಿಕೊಂಡರು .

ಶಾಂತಿ ಪ್ರಕಾಶನ’ವು -ಅಬ್ದುಲ್ಲಾ ಅಡಿಯಾರ್- ಅವರ ಈ ಜನಪ್ರಿಯ ಲೇಖನ ಮಾಲೆಯನ್ನು ” ನನ್ನ ಪ್ರೀತಿಯ ಧರ್ಮ ” ಎಂಬ ಶೀರ್ಷಿಕೆಯಲ್ಲಿ ವಾಚಕರ ಮುಂದಿಟ್ಟಿದೆ . ಇಬ್ರಾಹೀಮ್ ಸಈದ್ ರವರು ಕನ್ನಡಕ್ಕೆ ಅನುವಾದಿಸಿರುವ ಈ ಕೃತಿಯು ಸಾವಿರಾರು ಓದುಗರನ್ನು ಸೆಳೆದಿದೆ. ಇಸ್ಲಾಮಿನ ಬಗ್ಗೆ ಸಮಾಜದಲ್ಲಿ ಹರಡಿಕೊಂಡಿರುವ ತಪ್ಪಾಭಿಪ್ರಾಯಗಳನ್ನು ನೀಗಿಸಬಹುದಾದ ಅತ್ಯಂತ ಸರಳ ಮತ್ತು ಸಂಕ್ಷಿಪ್ತ ಕೃತಿ ಇದಾಗಿದೆ.

● ಕೃತಿ : ನನ್ನ ಪ್ರೀತಿಯ ಧರ್ಮ
ಪುಟ :72 | ಮುಖಬೆಲೆ : 50

▬▬▬● ಶಾಂತಿ ಪ್ರಕಾಶನ ●▬▬▬
+91 9448696490 | +91 9449333496

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …