Home / ವಾರ್ತೆಗಳು / ಇನ್ನು ಮಾನವೀಯತೆಗಾಗಿ ದೇವನ ಮಾರ್ಗದಲ್ಲಿ ಜೀವಿಸುವೆ: ನಟನೆಗೆ ಅಂತ್ಯ ಹಾಡಿದ ಬಾಲಿವುಡ್ ನಟಿ ಸನಾ ಖಾನ್

ಇನ್ನು ಮಾನವೀಯತೆಗಾಗಿ ದೇವನ ಮಾರ್ಗದಲ್ಲಿ ಜೀವಿಸುವೆ: ನಟನೆಗೆ ಅಂತ್ಯ ಹಾಡಿದ ಬಾಲಿವುಡ್ ನಟಿ ಸನಾ ಖಾನ್

ಹೊಸದಿಲ್ಲಿ,ಅ.9: ನಟನೆ, ಮಾಡೆಲಿಂಗ್ ನಿಲ್ಲಿಸಿದ್ದೇನೆ. ಇನ್ನು ದೇವನ ದಾರಿಯಲ್ಲಿ ಜೀವಿಸಬೇಕಾಗಿದೆ ಎಂದು ಬಾಲಿವುಡ್ ನಟಿ ಸನಾ ಖಾನ್ ಘೊಷಿಸಿದ್ದಾರೆ. ಬಿಗ್‍ಬಾಸ್‍ನ ಮಾಜಿ ಸ್ಪರ್ಧಿ ತನ್ನ ಮನಃಪರಿವರ್ತನೆಯನ್ನು ಇನ್‌ಸ್ಟಾಗ್ರಾಮ್‍ನಲ್ಲಿ ತಿಳಿಸಿದ್ದಾರೆ.

ಮಾನವೀಯತೆಗಾಗಿ, ಸೃಷ್ಟಿಕರ್ತನ ಆದೇಶಗಳನ್ನು ಅನುಸರಿಸಿ ತನ್ನ ಹೊಸ ಜೀವನ ಇರಲಿದೆ ಎಂದು ಸನಾ ಹೇಳಿದರು. ಮನರಂಜನೆ ಉದ್ಯಮ ತನಗೆ ಸಂಪತ್ತು, ಜನಪ್ರಿಯತೆಯನ್ನು ಒದಗಿಸಿಕೊಟ್ಟಿದ್ದರೂ ಅದರಾಚೆಗೆ ಮನುಷ್ಯ ಭೂಮಿಗೆ ಬಂದುದರ ನಿಜವಾದ ಕಾರಣವನ್ನು ಅರ್ಥಮಾಡಿಕೊಂಡು ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದು ನಟಿ ಹೇಳಿದ್ದಾರೆ.

ಬಡವರಿಗೆ ಸಹಾಯ ಮಾಡುವುದು ನನ್ನ ಜವಾಬ್ದಾರಿಕೆಯಲ್ಲವೇ? ಸಾವಿನ ನಂತರ ತನಗೇನು ಸಂಭವಿಸುತ್ತೆ ಎಂಬ ಎರಡು ಪ್ರಶ್ನೆಗಳಿಗೆ ಉತ್ತರವಾಗಿ ಇಂತಹದೊಂದು ತೀರ್ಮಾನಕ್ಕೆ ಬಂದಿರುವೆನು. ಎಲ್ಲರೂ ತಮ್ಮ ಪ್ರಾರ್ಥನೆಗಳಲ್ಲಿ ನನಗೂ ಪ್ರಾರ್ಥಿಸಿರಿ ಎಂದು ಸನಾ ವಿನಂತಿಸಿಕೊಂಡಿದ್ದಾರೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …