Home / ವಾರ್ತೆಗಳು / “ಕೌಟುಂಬಿಕ ಸಾಮರಸ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ” ಮುಸ್ಲಿಂ ಮಹಿಳೆಯರಿಗಾಗಿ ಭಾಷಣ ಸ್ಪರ್ಧೆ

“ಕೌಟುಂಬಿಕ ಸಾಮರಸ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ” ಮುಸ್ಲಿಂ ಮಹಿಳೆಯರಿಗಾಗಿ ಭಾಷಣ ಸ್ಪರ್ಧೆ

ಮಂಗಳೂರು: “ಸದೃಢ ಕುಟುಂಬ, ಸುಭದ್ರ ಸಮಾಜ” ಎಂಬ ಧ್ಯೇಯ ವಾಕ್ಯದಡಿ ಜಮಾಅತೇ ಇಸ್ಲಾಮೀ ಹಿಂದ್ ವತಿಯಿಂದ ದೇಶದಾದ್ಯಂತ ಫೆಬ್ರವರಿ19 ರಿಂದ 28/2021 ರ ವರೆಗೆ ಅಭಿಯಾನ ನಡೆಯಲಿದೆ. ಈ ಪ್ರಯುಕ್ತ ವಿವಿಧ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದ್ದು, ಫೆಬ್ರವರಿ 28 ರಂದು 30 ವರ್ಷ ಮೇಲ್ಪಟ್ಟ ಮುಸ್ಲಿಂ ಮಹಿಳೆಯರಿಗಾಗಿ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

“ಕೌಟುಂಬಿಕ ಸಾಮರಸ್ಯ ಕಾಪಾಡುವಲ್ಲಿ ಮಹಿಳೆಯರ ಪಾತ್ರ” ಎಂಬ ವಿಷಯದಲ್ಲಿ ಕನ್ನಡ, ಇಂಗ್ಲಿಷ್, ಬ್ಯಾರಿ, ಉರ್ದು ಈ ಯಾವುದಾದರೊಂದು ಭಾಷೆಯಲ್ಲಿ 5-7 ನಿಮಿಷ ಗಳಿಗೆ ಸೀಮಿತವಾಗಿ ಮಾತನಾಡಲು ಅವಕಾಶವಿದೆ. ಆಸಕ್ತರು ಫೆಬ್ರವರಿ 25 ರ ಒಳಗಾಗಿ ತಮ್ಮ ಹೆಸರನ್ನು 94801469807 ಮೊಬೈಲ್ ಸಂಖ್ಯೆಗೆ ಕರೆ ಅಥವಾ ವಾಟ್ಸಾಪ್ ಮೂಲಕ ಸಂಪರ್ಕಿಸಿ, ನೋಂದಾಯಿಸಬೇಕೆಂದು ಕೇಳಿಕೊಳ್ಳಲಾಗಿದೆ.

ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನವಿರುವುದು. ಸ್ಪರ್ಧೆಯು, ದಿನಾಂಕ 28-2- 2021 ಆದಿತ್ಯವಾರ 10:30 ವರೆಗೆ ಟ್ಯಾಲೆಂಟ್‌ ರಿಸರ್ಚ್ ಫೌಂಡೇಶನ್ ( ಕಂಕನಾಡಿ- ಮಂಗಳೂರು) ಸಭಾಂಗಣದಲ್ಲಿ ನಡೆಯಲಿದೆ. ಮಂಗಳೂರು ವಲಯದ ಮಹಿಳೆಯರಿಗೆ ತಮ್ಮ ಪ್ರತಿಭೆಯನ್ನು ಹೊರತರಲು ಸುವರ್ಣ ಅವಕಾಶವಾಗಿದ್ದು, ಅವಕಾಶದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಜಮಾಅತೆ ಇಸ್ಲಾಮೀ ಮಂಗಳೂರು ಮಹಿಳಾ ವಿಭಾಗವು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …