ಬಂಟ್ವಾಳ ತಾಲೂಕಿನ ಕೊಲ್ನಾಡ್ ಗ್ರಾಮದ ಸೆರ್ಕಳ ಎಂಬಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ, ಸಮಾಜ ಸೇವಾ ಘಟಕದ ವತಿಯಿಂದ ಕೊಳವೆ ಬಾವಿಯೊಂದನ್ನು[Bore well] ದಾನಿಗಳ ಸಹಾಯದಿಂದ ತೋಡಿಸಿ, ಸರಳ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು.
ಅನುಪಮ ಮಹಿಳಾ ಮಾಸಿಕದ ವ್ಯವಸ್ಥಾಪಕರಾದ ಮುಹಮ್ಮದ್ ಮುಹ್ಸಿನ್ ಉದ್ಘಾಟಿಸಿ ಸಂದರ್ಭೋಚಿತ ಹಿತನುಡಿಗಳನ್ನಾಡಿದರು. ಇದರ ಪ್ರಯೋಜನವನ್ನು ಪಡೆಯುವ ಪರಿಸರದವರು ಬಹಳ ಮೆಚ್ಚುಗೆ ವ್ಯಕ್ತಪಡಿಸಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮುಹಮ್ಮದ್ ಕಲ್ಲಡ್ಕ, ಶಂಶೀರ್ ಮೆಲ್ಕಾರ್, ಅಬುಸ್ವಾಲಿ ಬಂಟ್ವಾಳ,ಸಿದ್ದೀಕ್ ಜಕ್ರಿಬೆಟ್ಟು ಉಪಸ್ಥಿತರಿದ್ದರು.
IslamKannada News Portal


