Home / ವಾರ್ತೆಗಳು / ‘ಸಹೀಹುಲ್ ಬುಖಾರಿ’ ಗ್ರಂಥ ಬಿಡುಗಡೆ

‘ಸಹೀಹುಲ್ ಬುಖಾರಿ’ ಗ್ರಂಥ ಬಿಡುಗಡೆ

ಜಗತ್ತು ಕಂಡ ಮಹಾನ್ ವಿದ್ವಾಂಸರಾದ ಇಮಾಮ್ ಬುಖಾರಿಯವರು ಸತತ ಹದಿನಾಲ್ಕು ವರ್ಷಗಳ ಕಠಿಣ ಪರಿಶ್ರಮದಿಂದ ಕ್ರೋಢೀಕರಿಸಿದ ‘ಸಹೀಹುಲ್ ಬುಖಾರಿ’ ಗ್ರಂಥವು ಜಗತ್ತಿನ ಮುಸ್ಲಿಮರ ಪಾಲಿಗೆ ಪವಿತ್ರ ಕುರ್‌ಆನಿನ ನಂತರ ಹೆಚ್ಚು ಪ್ರಾಶಸ್ತ್ಯ ವಿರುವ ದಾಖಲೆಯಾಗಿದೆ.

ಸಮುದಾಯದ ಬಹುಕಾಲದ ಬೇಡಿಕೆ ಮತ್ತು ಆಗ್ರಹವಾಗಿದ್ದ ‘ಸಹೀಹುಲ್ ಬುಖಾರಿ’ ಕನ್ನಡ ಅನುವಾದವನ್ನು ಶಾಂತಿ ಪ್ರಕಾಶನವು 2011ರಲ್ಲೇ ಪ್ರಕಟಿಸಿತ್ತು. ಇದೀಗ ಆ ಗ್ರಂಥದ ಪರಿಷ್ಕೃತ ಆವೃತ್ತಿಯನ್ನು ವಾಚಕರ ಮುಂದೆ ಸಮರ್ಪಿಸಲು ಸಂತೋಷ ಪಡುತ್ತೇವೆ.

‘ಸಹೀಹ್ ಬುಖಾರಿ’ ಮೂಲ ಗ್ರಂಥದಲ್ಲಿ 7,563 ಹದೀಸ್‍ಗಳಿವೆ. ಶಾಂತಿ ಪ್ರಕಾಶನದ ಈ ಅನುವಾದ ಗ್ರಂಥವು 2088 ಹದೀಸ್ ಮತ್ತು ಅದರ ಅನುವಾದವನ್ನು ಒಳಗೊಂಡಿದೆ. ಹಳೇ ಮುದ್ರಣದಲ್ಲಿ ಪುನರಾವರ್ತನೆಗೊಂಡ್ಡಿದ್ದ ಹದೀಸ್‍ಗಳನ್ನು ಕೈಬಿಡಲಾಗಿದೆ ಮತ್ತು ಪ್ರತೀ ಹದೀಸ್‌ನ ಅನುವಾದದ ಕೊನೆಯಲ್ಲಿ ಅದೇ ಹದೀಸ್’ನ ಮೂಲ ಗ್ರಂಥದಲ್ಲಿರುವ ದೃಢೀಕೃತ ಕ್ರಮ ಸಂಖ್ಯೆಯನ್ನು ನಮೂದಿಸಲಾಗಿದೆ.

ಈ ಗ್ರಂಥದ ಅಧ್ಯಯನವು ಇಸ್ಲಾಮಿನ ಬಾಹ್ಯ ಮತ್ತು ಅಂತರಂಗದ ನೈಜ ಚಿತ್ರಣವನ್ನು ಅರಿಯಲು ಸಹಾಯಕವಾಗಲೆಂದು ಹಾರೈಸುತ್ತೇವೆ.

ಪುಟ : 936 | ಮುಖಬೆಲೆ : 700

•┈┈┈•✿ ಶಾಂತಿ ಪ್ರಕಾಶನ ✿•┈┈┈•
9448696490 | 9449333496

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …