ಹೊಸ ಕೃತಿ ……..
ಪವಿತ್ರ ರಮಝಾನಿನ ಋತುಗಳು ಸತ್ಯವಿಶ್ವಾಸಿಗಳ ಬದುಕಿನ ಬದಲಾವಣೆಗಾಗಿ ಆಗತವಾಗುತ್ತದೆ, ಈ ತಿಂಗಳಲ್ಲಿ ವ್ರತಾಚರಿಸುವವನ ಗತ ಪಾಪಗಳು ಕ್ಷಮಿಸಲ್ಪಡುತ್ತದೆ. ಅಂದರೆ ಈ ಕ್ಷಮೆ ಮತ್ತು ದೇವ ಸಂಪ್ರೀತಿಯು ಕೇವಲ ಉಪವಾಸ ವ್ರತಾಚಾರಣೆಯಿಂದ ಆಗಲಾರದು. ಅದರ ಹಿಂದೆ ತನ್ನ ಸಂಸ್ಕರಣೆಯ ಉದ್ದೇಶವೂ ಇರಬೇಕು ಎಂಬ ಶರ್ತವಿದೆ. ಇದುವೇ ಮಾನವ ಜೀವನ ಬದಲಿಸುವ ಮತ್ತು ಅವನ ಆಲೋಚನೆ-ವ್ಯವಹಾರಗಳಲ್ಲಿ ಕ್ರಾಂತಿ ತರುವ ಉಪಾಧಿಯಾಗಿದೆ.
ಶಾಂತಿ ಪ್ರಕಾಶನ ಈ ವಿಶೇಷ ಹೊಸ ಆವೃತಿಯಲ್ಲಿ ರಮಝಾನಿನ ಮಹತ್ವ ಮತ್ತು ಆಂತರ್ಯ ಹಾಗೂ ಅದರಿಂದಾಗಬಹುದಾದ ಸಾಮಾಜಿಕ ಬದಲಾವಣೆಯ ಕುರಿತು ಚರ್ಚಿಸಲಾಗಿದೆ. ಭಾರತದ ಶ್ರೇಷ್ಠ ಇಸ್ಲಾಮೀ ವಿದ್ವಾಂಸರಾದ ಮೌ. ಮುಹಮ್ಮದ್ ಫಾರೂಕ್ ಖಾನ್’ರವರ “ರಮಝಾನ್:ತಬ್ದೀಲಿ ಔರ್ ಇಂಕ್ವಿಲಾಬ್ ಕಾ ಮಹೀನಾ” ಎಂಬ ಕೃತಿಯನ್ನು ಲೇಖಕ ಮುಹಮ್ಮದ್ ಅಶ್ರಫ್ ಕನ್ನಡಕ್ಕೆ ಅನುವಾದಿಸಿರುವರು. ಪ್ರತಿ ಮನೆಯಲ್ಲೂ ಇರಬೇಕಾದ ಈ ಕಿರು ಕೃತಿಯು ವಾಚಕರ ಮನದಲ್ಲಿ ಆಧ್ಯಾತ್ಮಿಕ ಮತ್ತು ನೈತಿಕವಾದ ಕ್ರಾಂತಿಯನ್ನು ತರಲು ಮತ್ತು ಅವರ ಜೀವನವನ್ನು ಬದಲಿಸಲು ಸಹಾಯಕವಾಗಲಿದೆ.
■ ಪುಟ – 48 | ಮುಖಬೆಲೆ – 45 : 00
•┈┈┈•✿ ಶಾಂತಿ ಪ್ರಕಾಶನ ✿•┈┈┈•
9449333496 / 7795837394
IslamKannada News Portal
