Home / Uncategorized / ಪ್ರಾಣಿಬಲಿ ಇಬ್ರಾಹೀಮ್(ಅ) ಸಂಪ್ರದಾಯ

ಪ್ರಾಣಿಬಲಿ ಇಬ್ರಾಹೀಮ್(ಅ) ಸಂಪ್ರದಾಯ

ಸತ್ಯಹರಿಶ್ಚಂದ್ರನ ಸತ್ಯವನ್ನು ಪರೀಕ್ಷಿಸುವ ವಿವಿಧ ಘಟ್ಟಗಳಲ್ಲಿ ಹೆಂಡತಿಯನ್ನು ಬಲಿಕೊಡುವ ಸಂದರ್ಭವಿದೆ. ಎಲ್ಲದರಲ್ಲೂ ಸತ್ಯಹರಿಶ್ಚಂದ್ರ ವಿಜಯಿಯಾಗುತ್ತಾರೆ.

ಪ್ರವಾದಿ ಇಬ್ರಾಹೀಮರು ಸೂರ್ಯ, ಚಂದ್ರ,ನಕ್ಷತ್ರಗಳು ಅಸ್ತಮಿಸುವುದನ್ನು ಕಂಡು ಅಸ್ತಮಿಸುವುದು ದೇವರಾಗಿರಲು ಸಾಧ್ಯವಿಲ್ಲ ಎನ್ನುತ್ತಾ ಇವೆಲ್ಲದರ ಸೃಷ್ಟಿಕರ್ತನೇ ನನ್ನ ಸೃಷ್ಟಿಕರ್ತ. ನಾನು ಕೇವಲ ಭೂಮ್ಯಾಕಾಶಗಳ ಸೃಷ್ಟಿಕರ್ತನೆಡೆಗೆ ನನ್ನ ಮುಖವನ್ನು ತಿರುಗಿಸಿದೆ ಎಂದು ಘೋಷಿಸಿದಾಗ ಜೀವನದುದ್ದಕ್ಕೂ ಪರೀಕ್ಷೆ ಎದುರಾಗುತ್ತದೆ. ಸರ್ವಾಧಿಕಾರಿ ರಾಜ ನಮ್ರೂದನು ಬೆಂಕಿಗೆ ಹಾಕುತ್ತಾನೆ. ಕೊನೆಯ ಪರೀಕ್ಷೆ ಮಗನನ್ನು ಬಲಿ ನೀಡುವುದು. ಇಬ್ರಾಹೀಮರು ಯಶಸ್ವಿಯಾಗುತ್ತಾರೆ. ವಾಸ್ತವದಲ್ಲಿ ಅದು ಬಲಿಯಲ್ಲ. ನೈಜ ಭಕ್ತಿ, ತ್ಯಾಗ, ಸಹನೆ, ಇಬ್ರಾಹೀಮರು ವಿಜಯಿಯಾಗುತ್ತಾರೆ. ಮಗನ ಬದಲಿಗೆ ಟಗರನ್ನು ಬಲಿ ನೀಡುವ ಆಜ್ಞೆಯಾಗುತ್ತದೆ. ಬಕ್ರೀದ್ (ಬಲಿದಾನದ ಹಬ್ಬ) ಅದನ್ನೇ ನೆನಪಿಸುವುದು.

ಸಂಪತ್ತಿನ ಮೇಲೆ ಎಷ್ಟೇ ಪ್ರೀತಿ ಇದ್ದರೂ ಬಡವರಿಗಾಗಿ ಖರ್ಚು ಮಾಡಲು(ಕುರ್ಬಾನಿ) ಅಲ್ಲಾಹನು ಆಜ್ಞಾಪಿಸುವಾಗ ಖರ್ಚು ಮಾಡಬೇಕು. ದೇವ ವಿಶ್ವಾಸದಿಂದ ಭಕ್ತಿ, ಭಕ್ತಿಯಿಂದ ಸಹನೆ, ಸಹನೆಯಿಂದ ತ್ಯಾಗ ಹುಟ್ಟಿಕೊಳ್ಳುತ್ತದೆ.

ದೇವನ ಆದೇಶಗಳ ಪಾಲನೆಯೇ ಧರ್ಮನಿಷ್ಟೆ. ಅಕ್ರಮ ಗಳಿಕೆಯಿಂದ ಮಾಡಿದ ದಾನ ದೇವನು ಸ್ವೀಕರಿಸುವುದಿಲ್ಲ. ಮಾತ್ರವಲ್ಲ ಅವನ ಪ್ರಾರ್ಥನೆಯೂ ಸ್ವೀಕರಿಸಲ್ಪಡುವುದಿಲ್ಲ ಎಂಬುದು ಪ್ರವಾದಿ ವಚನ.

ಅರಬರು ತಮ್ಮ ಪಿತಾಮಹ ಇಬ್ರಾಹೀಮರ ಸಂಪ್ರದಾಯವನ್ನು ಮರೆತು ಕಾಬಾದ ಮುಂದೆ ಮನುಷ್ಯನನ್ನು ಬಲಿಕೊಡುವ ಹರಕೆ ಇಡುತ್ತಿದ್ದರು. ಇದು ಅಜ್ಞಾನವಾಗಿತ್ತು.

ಮುಹಮ್ಮದ್(ಸ) ರ ಮೂಲಕ ಮಾನವನ ಬದಲಿಗೆ ಪ್ರಾಣಿ ಬಲಿಯನ್ನು ಕೊಡುವ ಸಂಪ್ರದಾಯ ಜಾರಿಗೆ ತಂದಿರುವುದು ಇಬ್ರಾಹೀಮೀ ಸಂಪ್ರದಾಯವೇ ಆಗಿದೆ. ಹೊಸ ಅವಿಷ್ಕಾರವಲ್ಲ.

ಶ್ರೀಮಂತ ರಾಷ್ಟ್ರಗಳಿಂದ ಬಡವರಿಗೆ ಸರಬರಾಜಾಗುವ ಮಾಂಸ, ಚರ್ಮದ ಪ್ರಯೋಜನಗಳು ಎಷ್ಟಿರಬಹುದು!!

ಶಮೀರ ಜಹಾನ್

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …