ಎಜಾಝ್ ಅಹ್ಮದ್ ಅಸ್ಲಂ
ರೇಡಿಯನ್ಸ್ ವೀವ್ಸ್ ವೀಕ್ಲಿ
ಅನು: ಮುಹಮ್ಮದ್ ಮರಕಡ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಾರದ ಹಿಂದೆ ಅಮೆರಿಕ ಪ್ರವಾಸದಲ್ಲಿದ್ದರು. ಭಾರತೀಯ ಮುಸ್ಲಿಮರು ಸುರಕ್ಷಿತವಾಗಿರುವುದು ಮಾತ್ರವಲ್ಲದೆ ಭಾರತದ ನಾಗರಿಕರಾಗಿ ಸಮಾನ ಹಕ್ಕುಗಳನ್ನು ಸಂಪೂರ್ಣವಾಗಿ ಆಸ್ವಾದಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಅವರು ಕಠಿಣ ಪರಿಶ್ರಮಪಡಬೇಕಾಯಿತು. ಭಾರತದ ಹೊರಗಿನ ಜನರು ನಕಾರಾತ್ಮಕ ಪ್ರಚಾರದಿಂದ ಪ್ರಭಾವಿತರಾಗಬಾರದು ಬದಲಿಗೆ ಅವರು ಭಾರತಕ್ಕೆ ಭೇಟಿ ನೀಡಬೇಕು ಮತ್ತು ಭಾರತೀಯ ಮುಸ್ಲಿಮರ ಸ್ಥಾನಮಾನ ಎಷ್ಟು ಧನಾತ್ಮಕವಾಗಿದೆ ಎಂಬುದನ್ನು ನೋಡಬೇಕು ಎಂದು ಅವರು ಹೇಳಿದರು.
“ಮುಸ್ಲಿಂ ಜನಸಂಖ್ಯೆಯು ವೃದ್ಧಿಯಾಗುವುದರೊಂದಿಗೆ ಎಲ್ಲಾ ರಂಗದಲ್ಲೂ ಅವರು ಉತ್ತಮ ಸ್ಥಿತಿಯಲ್ಲಿ ಇದ್ದಾರೆ. ಸರ್ಕಾರವು ಮುಸ್ಲಿಂ ವಿದ್ಯಾರ್ಥಿಗಳಿಗೆ ವಿವಿಧ ಶೈಕ್ಷಣಿಕ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ” ಎಂದೂ ಅವರು ಹೇಳಿದರು.
ಪ್ರಸಕ್ತ ಬಜೆಟ್ನಲ್ಲಿ ಶಿಕ್ಷಣ ಸಚಿವೆ ಸ್ಮೃತಿ ಇರಾನಿ ಅವರು ಮೌಲಾನಾ ಆಜಾದ್ ರಾಷ್ಟ್ರೀಯ ಫೆಲೋಶಿಪ್ (ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ) ಕೈಬಿಡಲಾಗಿದೆ ಎಂದು ಘೋಷಿಸಿದ್ದಾರೆ ಎಂಬುದನ್ನು ಅವರು ಮರೆತಿದ್ದಾರೆ. ಹಿಂದುತ್ವದ ಮತದಾರರನ್ನು ಸಮಾಧಾನ ಪಡಿಸಲು ಕರ್ನಾಟಕದಲ್ಲಿ ಮುಸ್ಲಿಮರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ 4% ಮೀಸಲಾತಿಯನ್ನು ಕೇವಲ ಒಂದು ತಿಂಗಳ ಹಿಂದೆ ಹಿಂತೆಗೆದುಕೊಳ್ಳಲಾಗಿದೆ ಎಂಬ ಅಂಶವನ್ನು ಅವರು ಮರೆತಿದ್ದಾರೆ, ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ 2014ರ ಬಳಿಕ ಗೃಹ ಸಚಿವಾಲಯ ಮತ್ತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಗಳು ಮುಸ್ಲಿಮರ ಮೇಲೆ ದೌರ್ಜನ್ಯಗಳು ಮತ್ತು ಗಲಭೆಗಳು ಹೆಚ್ಚಿವೆ ಎಂದು ಸೂಚಿಸುತ್ತದೆ.
ತನ್ನ ರೆಫ್ರಿಜರೇಟರ್ನಲ್ಲಿ ದನದ ಮಾಂಸವನ್ನು ಶೇಖರಿಸಿಟ್ಟ ಆರೋಪದ ಮೇಲೆ ಮುಹಮ್ಮದ್ ಅಖ್ಲಾಕ್ನನ್ನು 2014ರಲ್ಲಿ ಹತ್ಯೆ ಮಾಡಲಾಗಿತ್ತು. 2016ರ ಜನವರಿಯಲ್ಲಿ ಗೋಮಾಂಸ ಸಾಗಿಸುತ್ತಿದ್ದ ಆರೋಪದ ಮೇಲೆ ಮುಸ್ಲಿಂ ದಂಪತಿಯನ್ನು ನಿರ್ದಯವಾಗಿ ಥಳಿಸಲಾಗಿತ್ತು. 2017 ರಲ್ಲಿ ರಾಜಸ್ಥಾನದ ರೈತ ಪೆಹ್ಲುಖಾನ್ ಅವರು ತಮ್ಮ ಡೈರಿ ಫಾರ್ಮ್ಗೆ ಹಸುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಹಸುಗಳನ್ನು ಕಳ್ಳಸಾಗಣೆ ಮಾಡಿದ ಸುಳ್ಳು ಆರೋಪದ ಮೇಲೆ ಗುಂಪೊಂದು ಹತ್ಯೆ ಮಾಡಿತ್ತು. ಗೋವುಗಳನ್ನು ಕಳ್ಳಸಾಗಾಣಿಕೆ ಮತ್ತು ಕಸಾಯಿಖಾನೆಗೆ ಸಾಗಿಸುವ ಸುಳ್ಳು ಆರೋಪದಡಿಯಲ್ಲಿ ಮುಸ್ಲಿಂ ಯುವಕರನ್ನು ಥಳಿಸಿ ಹತ್ಯೆಗೈದ ಪ್ರಕರಣಗಳು ಆಗೊಮ್ಮೆ ಈಗೊಮ್ಮೆ ಕಣ್ಣಮುಂದೆ ಬರುತ್ತಲೇ ಇರುತ್ತವೆ. ಇತ್ತೀಚೆಗೆ ಹರಿಯಾಣ, ರಾಜಸ್ಥಾನ ಮತ್ತು ಕರ್ನಾಟಕದಿಂದ ಇಂತಹ ಹಲವು ಪ್ರಕರಣಗಳು ವರದಿಯಾಗಿವೆ. ಆದರೆ ಕೊಲೆಗಾರರ ಬಂಧನ ಮತ್ತು ಶಿಕ್ಷೆಯು ಬಹುತೇಕ ಶೂನ್ಯವಾಗಿದೆ.
ದ್ವೇಷದ ಭಾಷಣದ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಕಟ್ಟುನಿಟ್ಟಿನ ಆದೇಶದ ಹೊರತಾಗಿಯೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಏಕೆಂದರೆ ಆಡಳಿತ ಪಕ್ಷವು ಜಾತಿಗಳನ್ನು ಧ್ರುವೀಕರಿಸಿ ಹಿಂದುತ್ವದ ಮತಗಳನ್ನು ಗಳಿಸಲು ಅಂತಹ ಭಾಷಣಗಳು ಅವರಿಗೆ ಅಪಾರವಾಗಿ ಸಹಾಯ ಮಾಡುತ್ತವೆ. ಹೆಚ್ಚು ದ್ವೇಷ ಹೆಚ್ಚು ಮತಗಳು ಎಂಬುದು ಅವರ ಸೂತ್ರವಾಗಿದೆ.
ಬಹುಶಃ ನಿರ್ಮಲಾ ಸೀತಾರಾಮನ್ ಅವರು ಸಾಚಾರ್ ಸಮಿತಿ ವರದಿಯನ್ನು ಸಂಶೋಧಿಸಿಲ್ಲ. ಸಮಗ್ರವಾಗಿ ಸಂಶೋಧಿಸಲ್ಪಟ್ಟ ಮತ್ತು ಶ್ರಮದಾಯಕವಾದ ಈ ವರದಿಯು ಭಾರತೀಯ ಮುಸ್ಲಿಮರನ್ನು ಅಂಚಿಗೆ ತಳ್ಳುತ್ತದೆ. ವರದಿಯ ಪ್ರಕಾರ, IAS ಮತ್ತು IPSನಲ್ಲಿ ಮುಸ್ಲಿಂ ಪ್ರಾತಿನಿಧ್ಯವು 3% ರಿಂದ 4% ರಷ್ಟಿದೆ. ಮುಸ್ಲಿಮರಿಗೆ ಉದ್ಯೋಗಾವಕಾಶಗಳಲ್ಲಿ ಮುಕ್ತವಾಗಿ ತಾರತಮ್ಯವನ್ನು ಮಾಡಲಾಗುತ್ತದೆ. 19.3% ಮುಸ್ಲಿಮರಿರುವ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದ ಪ್ರಕರಣವನ್ನು ತೆಗೆದುಕೊಳ್ಳಿ. ಬೇರೆ ಬೇರೆ ಕಛೇರಿಗಳಲ್ಲಿ ಮತ್ತು ಸರ್ಕಾರಿ ಕೆಲಸಗಳಲ್ಲಿ ಶೇ.5ರಷ್ಟು ಮುಸ್ಲಿಮರು ಕೂಡ ನಿಮಗೆ ಕಾಣಸಿಗುವುದಿಲ್ಲ. ಅಖಿಲೇಶ್ ಸರ್ಕಾರ ಸುಮಾರು 16,000 ಪ್ರಾಥಮಿಕ ಸಹಾಯಕ ಶಿಕ್ಷಕರನ್ನು ನೇಮಿಸಿತ್ತು. ಅವರಲ್ಲಿ ಸುಮಾರು 4,000 ಉರ್ದು ಶಿಕ್ಷಕರಿದ್ದರು. ಯೋಗಿ ಸರ್ಕಾರ ಅಧಿಕಾರಕ್ಕೆ ಬಂದಾಗ ಉರ್ದು ಕಲಿಯಲು ಯಾರಿಗೂ ಆಸಕ್ತಿಯಿಲ್ಲ ಎಂಬ ಮನವಿಯ ಅಡಿಯಲ್ಲಿ ಉರ್ದು ಶಿಕ್ಷಕರ ನೇಮಕಾತಿಯನ್ನು ರದ್ದುಗೊಳಿಸಿತು. ಅಲಹಾಬಾದ್ ಹೈಕೋರ್ಟ್ ವಿಭಾಗೀಯ ಪೀಠವು ಉರ್ದು ಶಿಕ್ಷಕರ ಉದ್ಯೋಗಗಳನ್ನು ಮರುಸ್ಥಾಪಿಸಬೇಕು ಎಂದು ತೀರ್ಪು ನೀಡಿದೆ. ಯುಪಿ ಸರಕಾರ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದೆ.
ಭಾರತ ಮೂಲದ ಫ್ರೆಂಚ್ ಸಾಮಾಜಿಕ ವಿಜ್ಞಾನಿ ಕ್ರಿಸ್ಟೋಫ್ ಜಾಫ್ರೆಲಾಟ್ ಅವರು ಸಮಗ್ರ ಸಂಶೋಧನೆಯಲ್ಲಿ ಭಾರತೀಯ ಮುಸ್ಲಿಮರು ತಾರತಮ್ಯಕ್ಕೊಳಗಾದವರು, ಬಲಿಪಶುಗಳು ಮತ್ತು ಕಡೆಗಣಿಸಲ್ಪಟ್ಟವರು. ಅವರನ್ನು ದುರ್ಬಲಗೊಳಿಸಿ ಸಂಸತ್ತು, ರಾಜ್ಯ ಶಾಸಕಾಂಗಗಳು, ನ್ಯಾಯಾಂಗ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಅವಕಾಶ ವಂಚಿತ ರನ್ನಾಗಿ ಮಾಡಲಾಗಿದೆ ಎಂಬುದನ್ನು ವಿವರವಾಗಿ ಬರೆದಿದ್ದಾರೆ.
ಭಾರತೀಯ ಮುಸ್ಲಿಮರ ಸ್ಥಿತಿಗತಿಗಳು ಉತ್ತಮವಾಗಿದೆ ಎಂದು ಘೋಷಿಸುವ ಮೊದಲು, ಹಣಕಾಸು ಸಚಿವರು ವಿಷಯಗಳನ್ನು ಪರಿಶೀಲಿಸಬೇಕು ಮತ್ತು ವಾಸ್ತವವನ್ನು ತಿಳಿದುಕೊಳ್ಳಬೇಕು. ಅವರು ಆಸ್ಟ್ರಿಚ್ನಂತೆ ಕುಳಿತಲ್ಲೇ ತಲೆ ಅಡಗಿಸಬಾರದು, ಬದಲಾಗಿ ಸತ್ಯಗಳನ್ನು ಒಪ್ಪಿಕೊಳ್ಳಲು ಸಿದ್ಧವಾಗಬೇಕು. ಮತ್ತು ಸಾಧ್ಯವಾದರೆ 20 ಕೋಟಿ ಭಾರತೀಯ ನಾಗರಿಕರಿಗೆ ಸ್ವಾತಂತ್ರ್ಯ, ಘನತೆ, ಗೌರವ ಮತ್ತು ಗೌರವಾನ್ವಿತ ಸ್ಥಾನಮಾನವನ್ನು ಮರುಸ್ಥಾಪಿಸುವುದಕ್ಕಾಗಿ ಸಚಿವ ಸಂಪುಟದಲ್ಲಿ ಚರ್ಚಿಸಬೇಕು. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಇತ್ತೀಚೆಗೆ ಸೇರಿಸಲಾದ ಸಬ್ಕಾ ವಿಶ್ವಾಸ್ ಪ್ರಚಾರವನ್ನು ನಿಲ್ಲಿಸುವಂತೆ ಅವರು ತನ್ನ ಬಾಸ್ಗೆ ಹೇಳಬೇಕು.
IslamKannada News Portal
