Home / ವಾರ್ತೆಗಳು / ಅಂಗ ರಕ್ಷಕರಾಗಲಿ, ಸದ್ದುಗದ್ದಲವಾಗಲಿ, ರಸ್ತೆ ತಡೆಯಾಗಲಿ ಇಲ್ಲ: ಇದು ಯುಎಇ ಅಧ್ಯಕ್ಷರ ‘ನಡೆ’

ಅಂಗ ರಕ್ಷಕರಾಗಲಿ, ಸದ್ದುಗದ್ದಲವಾಗಲಿ, ರಸ್ತೆ ತಡೆಯಾಗಲಿ ಇಲ್ಲ: ಇದು ಯುಎಇ ಅಧ್ಯಕ್ಷರ ‘ನಡೆ’

ಅಬುಧಾಬಿ: ಯುಎಇ ಅಧ್ಯಕ್ಷರು ಅಂಗರಕ್ಷಕರಿಲ್ಲದೆ ರಸ್ತೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಂಡು ಹೋಗುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸದಾ ಜನರೊಂದಿಗೆ ನಿಕಟ ಸಂಪರ್ಕದಲ್ಲಿರುವ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಯಾವುದೇ ಭದ್ರತಾ ಪಡೆಗಳು ಇಲ್ಲದೆ ದೇಶದ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.

ಹಸನ್ ಸಜ್ವಾನಿ ಎಂಬ ಟ್ವಿಟ್ಟರ್ ಬಳಕೆದಾರ ಯುಎಇ ಅಧ್ಯಕ್ಷರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೊಗುತ್ತಿರುವ ವೀಡಿಯೋ ತುಣುಕನ್ನು ಟ್ವೀಟ್ ಮಾಡಿದ್ದು, “ ಅಂಗರಕ್ಷಕರಿಲ್ಲ, ಸದ್ದುಗದ್ದಲವಿಲ್ಲ, ರಸ್ತೆ ತಡೆಗಳಿಲ್ಲ… ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಜನ ಸಾಮಾನ್ಯರಂತೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಯುಎಇ ತುಂಬಾ ಸುರಕ್ಷಿತವಾಗಿದೆ. ನನ್ನ ಅಧ್ಯಕ್ಷರು ತುಂಬಾ ಸರಳ ವ್ಯಕ್ತಿಯಾಗಿದ್ದಾರೆ.” ಎಂದು ಅವರು ವೀಡಿಯೋ ಜತೆ ಬರೆದಿದ್ದಾರೆ.

ಈ ವೀಡಿಯೊವನ್ನು ಅತೀ ಕಡಿಮೆ ಸಮಯದಲ್ಲಿ ಅನೇಕ ಜನರು ಹಂಚಿಕೊಂಡಿದ್ದು, ಭಾರೀ ಪ್ರತಿಕ್ರಿಯೆಗಳೂ ಬಂದಿವೆ.

ಯುಎಇ ಉಪಾಧ್ಯಕ್ಷ, ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಸೇರಿದಂತೆ ಇತರ ಯುಎಇ ರಾಷ್ಟ್ರೀಯ ನಾಯಕರು ಜನ ಸಾಮಾನ್ಯರಂತೆ ಸಾರ್ವಜನಿಕ ಸ್ಥಳಗಳಲ್ಲಿ ನಡೆದಾಡುವ ದೃಶ್ಯಗಳನ್ನು ಸಹ ಜನರು ಹಂಚಿದ್ದಾರೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …